ರಾಯಚೂರು: ಪಾಪಿ ತಂದೆಯೊಬ್ಬ ಸ್ವಂತ ಮಗನನ್ನೇ ಅಪಹರಿಸಿ ಕೊಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕಲ್ಮಂಗಿಯಲ್ಲಿ ನಡೆದಿದೆ.
4 ವರ್ಷದ ಮಹೇಶ ಕೊಲೆಯಾದ ನತದೃಷ್ಟ ಬಾಲಕ. ಮಗನನ್ನೇ ಕತ್ತು ಹಿಸುಕಿ ಕೊಲೆ ಮಾಡಿರೋ ಆರೋಪಿ ಯಲ್ಲಪ್ಪನನ್ನ ಪೊಲೀಸರು ಬಂಧಿಸಿದ್ದಾರೆ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಹೆಂಡತಿ ಪಾರ್ವತಿ ತಂದೆಯ ಮನೆಗೆ ಹೋಗಿದ್ದಳು. ಹೆಂಡತಿಯ ಊರಿಗೆ ಹೋಗಿ ಮಗನನ್ನ ಅಪಹರಿಸಿದ್ದ ಯಲ್ಲಪ್ಪ ನಿನ್ನೆ ರಾತ್ರಿ ಮಗುವನ್ನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಫೆಬ್ರವರಿ 1ಕ್ಕೆ ಮಗುವನ್ನ ಕಿಡ್ನಾಪ್ ಮಾಡಿದ್ದ ದುರುಳ ಯಲ್ಲಪ್ಪ ಕೊಲೆ ಮಾಡಿ, ಜಮೀನೊಂದರಲ್ಲಿ ಮಗುವಿನ ಶವ ಬಿಸಾಕಿದ್ದಾನೆ. ಮಗು ಕಿಡ್ನಾಪ್ ಆಗಿದ್ದ ಬಗ್ಗೆ ತುರ್ವಿಹಾಳ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ಪಾಪಿ ತಂದೆಯ ಕೃತ್ಯ ಬಯಲಾಗಿದೆ. ತುರ್ವಿಹಾಳ ಠಾಣೆ ಪೊಲೀಸರಿಂದ ಆರೋಪಿ ಯಲ್ಲಪ್ಪ ಬಂಧನವಾಗಿದ್ದು ವಿಚಾರಣೆ ಮುಂದುವರಿದಿದೆ.