ಮೈಸೂರು: ನಾವು ಹಿರಿಯರನ್ನ ಸ್ಫೂರ್ತಿಯಾಗಿಟ್ಟುಕೊಂಡು ಬೆಳೆಯಬೇಕು. ನಮ್ಮನ್ನ ನೋಡಿ ಸಮಾಜ ಮತ್ತು ಮಕ್ಕಳು ಕಲಿಯುತ್ತಾರೆ. ಮುಂದಿನ ಪೀಳಿಗೆಗೆ ನಾವು ಒಳ್ಳೆಯದನ್ನ ಬಿಟ್ಟು ಹೋಗಬೇಕು ಎಂದು ಸ್ಯಾಂಡಲ್‍ವುಡ್‍ನಲ್ಲಿ ನಟ-ನಟಿಯರ ಮೇಲೆ ಡ್ರಗ್ಸ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅನಿರುದ್ಧ್ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಯುವ ಪೀಳಿಗೆಯನ್ನು ಡ್ರಗ್ಸ್‌ನಿಂದ ರಕ್ಷಿಸಬೇಕು: ಅನಿರುದ್ಧ
ನಗರದಲ್ಲಿ ಮಾತನಾಡಿದ ನಟ ಅನಿರುದ್ಧ್, ಡ್ರಗ್ಸ್ ಅನ್ನೋ ಪಿಡುಗು ಪ್ರಪಂಚದಾದ್ಯಂತ ಇದೆ. ಇದು ಕೇವಲ ಸ್ಯಾಂಡಲ್‍ವುಡ್‍ನಲ್ಲಿ ಮಾತ್ರ ಅಲ್ಲ, ಎಲ್ಲ ರಂಗದಲ್ಲಿದೆ. ಕೆಲವು ವರ್ಷಗಳಿಂದ ಈ ಸಮಸ್ಯೆ ಇಲ್ಲ. ದಶಕಗಳಿಂದ ಈ ಸಮಸ್ಯೆ ಇದೆ. ಸ್ಯಾಂಡಲ್‍ವುಡ್‍ನ ಜವಾಬ್ದಾರಿ ಕೇವಲ ಒಬ್ಬರದ್ದಲ್ಲ, ಎಲ್ಲರದ್ದಾಗಿದೆ. ಈ ಸಂದರ್ಭದಲ್ಲಿ ಎಲ್ಲರೂ ಕೂಡ ಸ್ಯಾಂಡಲ್‍ವುಡ್ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು. ಇದನ್ನೂ ಓದಿ: ಡಾ.ವಿಷ್ಣುವರ್ಧನ್ ಸ್ಮಾರಕಕ್ಕೆ ಶಂಕು ಸ್ಥಾಪನೆ
ನಟಿ ರಾಗಿಣಿ ಜೈಲಿಗೆ ಹೋಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅನಿರುದ್ಧ್, ಕನ್ನಡ ಚಿತ್ರರಂಗದಲ್ಲಿ ಈ ರೀತಿ ನಡೆಯುತ್ತಿರುವುದು ನೋವಿನ ಸಂಗತಿ. ನಾವು ಹಿರಿಯರನ್ನ ಸ್ಫೂರ್ತಿಯಾಗಿಟ್ಟುಕೊಂಡು ಬೆಳೆಯಬೇಕು. ನಮ್ಮನ್ನ ನೋಡಿ ಸಮಾಜ ಮತ್ತು ಮಕ್ಕಳು ಕಲಿಯುತ್ತಾರೆ. ಮುಂದಿನ ಪೀಳಿಗೆಗೆ ನಾವು ಒಳ್ಳೆಯದನ್ನ ಬಿಟ್ಟು ಹೋಗಬೇಕು. ಹಿರಿಯರು ಹಾಕಿದ ಬುನಾದಿಯನ್ನು ನಾವು ಹಾಳು ಮಾಡಬಾರದು. ಹಾಗಾಗಿ ಆ ಹಾದಿಯಲ್ಲಿ ನಾವು ಜವಾಬ್ದಾರಿಯುವತವಾಗಿ ಸಾಗಬೇಕಿದೆ ಎಂದರು.
ಪ್ರತಿಯೊಬ್ಬರು ಅವರವರ ಜೀವನಕ್ಕೆ ಅವರೇ ಲೀಡರ್. ರಾಜಕುಮಾರ್ ಅವರು, ಅಪ್ಪಾಜಿ, ಅಂಬರೀಶ್ ಸೇರಿದಂತೆ ಅನೇಕರು ನಮಗೆ ಬುನಾದಿ ಹಾಕಿಕೊಟ್ಟು ಹೀಗಿದ್ದಾರೆ. ಅವರ ಪರಿಶ್ರಮವನ್ನು ಅರ್ಥ ಮಾಡಿಕೊಂಡು ನಾವು ಜವಾಬ್ದಾರಿಯಿಂದ ಇರುವುದು ನಮ್ಮ ಧರ್ಮ, ಕರ್ತವ್ಯವಾಗಿದೆ. ನಮ್ಮ ಮುಂದಿನ ಪೀಳಿಗೆ ನಮ್ಮ ನೋಡುತ್ತಿದೆ ಎಂದು ನಮಗೆ ಗೊತ್ತಿರಬೇಕು ಎಂದರು.
ಇಂದು ದಿವಂಗತ ಡಾ.ವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆನ್‍ಲೈನ್ ಮೂಲಕ ಚಾಲನೆ ನೀಡಿದ್ದಾರೆ. ಸಿಎಂ ಯಡಿಯೂರಪ್ಪ ಅವರು ಮೈಸೂರಿನಲ್ಲಿ ನಿರ್ಮಾಣವಾಗುತ್ತಿರುವ ವಿಷ್ಣು ಸ್ಮಾರಕಕ್ಕೆ ಗೃಹ ಕಚೇರಿ ಕೃಷ್ಣಾದಿಂದ ಸಚಿವರೊಟ್ಟಿಗೆ ಆನ್‍ಲೈನ್ ಮೂಲಕ ಭೂಮಿ ಪೂಜೆಗೆ ಚಾಲನೆ ಕೊಟ್ಟಿದ್ದಾರೆ. ಮೈಸೂರಿನ ಹಾಲಾಳು ಗ್ರಾಮದಲ್ಲಿ ಶಂಕು ಸ್ಥಾಪನೆಯ ಸಮಾರಂಭ ನಡೆದಿದ್ದು, ಹಿರಿಯ ನಟಿ ಭಾರತಿ ಅವರು ವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ.
ಡಾ.ವಿಷ್ಣುವರ್ಧನ್ ಸ್ಮಾರಕ ಭವನ 11 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಸ್ಮಾರಕ ನಿರ್ಮಾಣದ ಗುತ್ತಿಗೆಯನ್ನು ಪೊಲೀಸ್ ವಸತಿ ನಿಗಮಕ್ಕೆ ನೀಡಲಾಗುತ್ತಿದೆ. ಎಂ-9 ಡಿಸೈನ್ ಸ್ಟುಡಿಯೋದಿಂದ ಆರ್ಕಿಟೆಕ್ ಡಿಸೈನ್ ಮಾಡಿಸಲಾಗಿದೆ. ಸ್ಮಾರಕದಲ್ಲಿ ವಿಷ್ಣು ಪುತ್ಥಳಿ, ಆಡಿಟೋರಿಯಂ, ಫೋಟೋ ಗ್ಯಾಲರಿ, ಉದ್ಯಾನವನ ಇರುತ್ತದೆ.