ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಬೌಂಡರಿ ಬಳಿ ಹಿಡಿದ ಕ್ಯಾಚ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೀಡಿಯೋ ನೋಡಿದ ಕ್ರಿಕೆಟ್ ಅಭಿಮಾನಿಗಳು ‘ಫ್ಲೈ ಸ್ಮೃತಿ ಫ್ಲೈ’ ಎಂದು ಕಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ಪಂದ್ಯವನ್ನು ಟೀ ಇಂಡಿಯಾ ನಾಲ್ಕು ವಿಕೆಟ್ ಗಳಿಂದ ತನ್ನದಾಗಿಸಿಕೊಂಡಿತು.
Advertisement
ಟೀಂ ಇಂಡಿಯಾದ ದೀಪ್ತಿ ಶರ್ಮಾ ಎಸೆದ ಚೆಂಡನ್ನು ಇಂಗ್ಲೆಂಡ್ ಆಟಗಾರ್ತಿ ನತಾಲಿ ಸೈವರ್ ಬೌಂಡರಿಗೆ ಅಟ್ಟಿದ್ದರು. ಈ ಚೆಂಡನ್ನ ಕ್ಯಾಚ್ ಹಿಡಿಯುವ ಮೂಲಕ ಸ್ಮೃತಿ ಮಂಧಾನ, ಅರ್ಧ ಶತಕ ದಾಖಲಿಸಲು ಮುಂದಾಗಿದ್ದ ನತಾಲಿ ವೇಗಕ್ಕೆ ಬ್ರೇಕ್ ಹಾಕಿದರು. ಸ್ಮೃತಿ ಮಂಧಾನ ಡೈ ಹೊಡೆದ ವೀಡಿಯೋ ವೈರಲ್ ಆಗುತ್ತಿದೆ. ಇತ್ತ ನತಾಲಿ ತಾವು ಬೌಂಡರಿಗೆ ಅಟ್ಟಿದ್ದ ಚೆಂಡನ್ನು ಸ್ಮೃತಿ ಮಂಧಾನ ಕ್ಯಾಚ್ ಹಿಡಿದಿರೋದನ್ನು ಕಂಡು ಒಂದು ಕ್ಷಣ ಆಶ್ಚರ್ಯಚಕಿತರಾದರು.
Advertisement
Out of 10, how much would you rate this stunner by Smriti Mandhana? ???????? #ENGvIND #ENGWvINDW pic.twitter.com/M66ivgC88v
— Female Cricket (@imfemalecricket) July 3, 2021
Advertisement
ಭಾರತಕ್ಕೆ ಗೆಲುವು:
47 ಓವರ್ ಗಳಲ್ಲಿ ಇಂಗ್ಲೆಂಡ್ ತಂಡ 10 ವಿಕೆಟ್ ಕಳೆದುಕೊಂಡು 219 ರನ್ ಕಲೆಹಾಕಿ ಭಾರತಕ್ಕೆ 220ರ ಗುರಿ ನೀಡಿತ್ತು. ಇಂಗ್ಲೆಂಡ್ ಪರವಾಗಿ ನತಾಲಿ 49, ಎಚ್ ನೈಟ್ 46 ರನ್ ಗಳಿಸಿದ್ದರು. ಇಂಗ್ಲೆಂಡ ನೀಡಿದ ಗುರಿಯನ್ನ ಬೆನ್ನಟ್ಟಿದ ಟೀಂ ಇಂಡಿಯಾ 46.3 ಓವರ್ ನಲ್ಲಿ 6 ವಿಕೆಟ್ ಕಳೆದುಕಂಡು ಗೆಲುವನ್ನ ತನ್ನದಾಗಿಸಿಕೊಂಡಿತು. ತಂಡದ ನಾಯಕಿ ಮಿಥಾಲಿ ರಾಜ್ (ಔಟಾಗದೇ) 75 ರನ್ ಕಲೆ ಹಾಕಿದರು. ಇನ್ನೂ ರೋಚಕ ಕ್ಯಾಚ್ ಪಡೆದುಕೊಂಡಿದ್ದ ಸ್ಮೃತಿ ಮಂಧಾನ 49 ರನ್ ಪೇರಿಸಿದರು.
Advertisement
Captain @M_Raj03 leads from the front with a match-winning 7⃣5⃣*! ???? ????#TeamIndia beat England by 4⃣ wickets in the third & final WODI of the series! ???? ???? #ENGvIND
Scorecard ???? https://t.co/hPLnrzGQ62 pic.twitter.com/ax9wEyBPLX
— BCCI Women (@BCCIWomen) July 3, 2021
ಮಿಥಾಲಿ ರಾಜ್ ದಾಖಲೆ:
ಭಾರತ ಮಹಿಳಾ ಏಕದಿನ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ದಾಖಲಿಸಿದ ಆಟಗಾರ್ತಿಯಾಗಿ ನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್ ಸೂಪರ್ ಲೀಗ್ ಸ್ಮೃತಿ ಮಂಧಾನ ದಾಖಲೆ – 6 ಇನ್ನಿಂಗ್ಸ್, 338 ರನ್
RECORD????: #TeamIndia captain @M_Raj03 is now the LEADING RUN-GETTER in women's international cricket across formats. She goes past England's Charlotte Edwards. ???????????????? pic.twitter.com/XVEEK5ugtV
— BCCI Women (@BCCIWomen) July 3, 2021
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಮಿಥಾಲಿ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಇಂಗ್ಲೆಂಡ್‍ನ ಮಾಜಿ ಆಟಗಾರ್ತಿ ಚಾರ್ಲೋಟ್ ಎಡ್ವಡ್ರ್ಸ್ ದಾಖಲೆಯನ್ನು ಮುರಿದಿದ್ದಾರೆ. ಎಡ್ವಡ್ರ್ಸ್ ಎಲ್ಲಾ ಮಾದರಿಯ ಕ್ರಿಕೆಟ್‍ನಲ್ಲಿ ಒಟ್ಟು 10,273 ರನ್ ಗಳಿಸಿದ್ದರು. ಇದೀಗ ಮಿಥಾಲಿ ಒಟ್ಟು 10,377 ರನ್ ಬಾರಿಸುವ ಮೂಲಕ ವಿಶ್ವ ಮಹಿಳಾ ಕ್ರಿಕೆಟ್‍ನ ಕ್ವೀನ್ ಆಗಿ ಗುರುತಿಸಿಕೊಂಡಿದ್ದಾರೆ.