– ಮತ್ತೆ ಮೋರಿಸ್ ಮೋಡಿ
ದುಬೈ: ಇಂದು ಸೂಪರ್ ಶನಿವಾರದ ಮೊದಲನೇ ಮ್ಯಾಚಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡ ಮುಖಾಮುಖಿಯಾಗಿದ್ದು, ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಬೆಂಗಳೂರು ತಂಡಕ್ಕೆ 178 ರನ್‍ಗಳ ಟಾರ್ಗೆಟ್ ನೀಡಿದೆ.
ನಾಯಕ ಸ್ಟೀವ್ ಸ್ಮಿತ್ ಅವರ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬ್ಯಾಟ್ ಬೀಸಿದ ರಾಯಲ್ಸ್ ಬ್ಯಾಟ್ಸ್ ಮ್ಯಾನ್‍ಗಳು ಬೆಂಗಳೂರು ತಂಡಕ್ಕೆ ಉತ್ತಮ ಟಾರ್ಗೆಟ್ ನೀಡಿದರು. ಇಂದು ಆರಂಭದಲ್ಲೇ ಕನ್ನಡಿಗ ರಾಬಿನ್ ಉತ್ತಪ್ಪ ಉತ್ತಮವಾಗಿ ಆಡಿ ತಂಡಕ್ಕೆ 41 ರನ್‍ಗಳ ಕಾಣಿಕೆ ನೀಡಿ ಔಟ್ ಆದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಬಂದು ಕೊನೆಯವರಿಗೂ ನಿಂತು ಆಡಿದ ನಾಯಕ ಸ್ಮಿತ್ 57 ರನ್ ಸಿಡಿಸಿ ತಂಡಕ್ಕೆ ನೆರವಾದರು.
Advertisement
FIFTY!@stevesmith49 brings up his 11th IPL half-century off 30 deliveries.#Dream11IPL pic.twitter.com/qsRmYpczaq
— IndianPremierLeague (@IPL) October 17, 2020
Advertisement
ಇಂದು ಬೆಂಗಳೂರು ತಂಡದ ಪರವಾಗಿ ಉತ್ತಮವಾಗಿ ಬೌಲ್ ಮಾಡಿದ ಕ್ರಿಸ್ ಮೋರಿಸ್ ಅವರು ತಮ್ಮ ಕೋಟಾದ ನಾಲ್ಕು ಓವರ್ ಬೌಲ್ ಮಾಡಿ ಮೂರು ವಿಕೆಟ್ ಕಿತ್ತು ಕೇವಲ 26 ರನ್ ನೀಡಿದರು. ಇವರಿಗೆ ಉತ್ತಮವಾಗಿ ಸಾಥ್ ಕೊಟ್ಟು ಸ್ಪಿನ್ನರ್ ನಾಲ್ಕು ಓವರ್ ಬೌಲ್ ಮಾಡಿ ಎರಡು ವಿಕೆಟ್ ಕಿತ್ತು 34 ರನ್ ನೀಡಿದರು. ಇಂದು ವಾಷಿಂಗ್ಟನ್ ಸುಂದರ್ ಅವರ ಸ್ಪಿನ್ ಮ್ಯಾಜಿಕ್ ಮಾಡಲಿಲ್ಲ.
Advertisement
Morris with the big wicket of Steve Smith.
And what a splendid catch by the debutant, Shahbaz.
Live – https://t.co/1eSWG294xE #Dream11IPL pic.twitter.com/xIfOBK9QIJ
— IndianPremierLeague (@IPL) October 17, 2020
Advertisement
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಉತ್ತಮವಾದ ಓಪನಿಂಗ್ ಪಡೆಯಿತು. ಐಪಿಎಲ್-2020ಯಲ್ಲಿ ಮೊದಲ ಬಾರಿಗೆ ಆರಂಭಿಕರಾಗಿ ಬಂದ ರಾಬಿನ್ ಉತ್ತಪ್ಪ, ಬೆನ್ ಸ್ಟೋಕ್ಸ್ ಜೊತೆಗೂಡಿ ಭರ್ಜರಿ ಬ್ಯಾಟಿಂಗ್ ಮಾಡಿದರು. ಅರ್ಧಶತಕದ ಜೊತೆಯಾಟವಾಡಿದ ಈ ಜೋಡಿ 5ನೇ ಓವರಿನ 4ನೇ ಬಾಲಿನಲ್ಲಿ 15 ರನ್ ಗಳಿಸಿದ್ದ ಬೆನ್ ಸ್ಟೋಕ್ಸ್ ಅವರು ಕ್ರಿಸ್ ಮೋರಿಸ್ ಅವರಿಗೆ ಔಟ್ ಆದರು.
WATCH – Smith's jumping boundary.
Banged short, but Smith jumps to get a bat on it and hit for a boundary. Superb batting from @stevesmith49.https://t.co/Cy8vy7grj3 #Dream11IPL
— IndianPremierLeague (@IPL) October 17, 2020
ಈ ಮೂಲಕ ಪವರ್ ಪ್ಲೇ ಮುಕ್ತಾಯದ ವೇಳೆಗೆ ರಾಜಸ್ಥಾನ್ ತಂಡ ಒಂದು ವಿಕೆಟ್ ಕಳೆದುಕೊಂಡು 52 ರನ್ ಪೇರಿಸಿತು. ಆರಂಭದಿಂದಲೂ ಉತ್ತಮವಾಗಿ ಆಡಿಕೊಂಡು ಬಂದ ಉತ್ತಪ್ಪ 22 ಬಾಲಿಗೆ 41 ರನ್ ಗಳಿಸಿ ಚಹಲ್ ಅವರ ಸ್ಪಿನ್ ಮೋಡಿಗೆ ಬಲಿಯಾದರು. ಇದಾದ ನಂತರದ ಬಾಲಿನಲ್ಲೇ ಸಂಜು ಸ್ಯಾಮ್ಸನ್ ಅವರು 9 ರನ್ ಗಳಿಸಿ ಯುಜ್ವೇಂದ್ರ ಚಹಲ್ ಎಸೆತದಲ್ಲಿ ಕ್ರಿಸ್ ಮೋರಿಸ್ ಕ್ಯಾಚ್ ಕೊಟ್ಟು ಹೊರನಡೆದರು.
Fantastic Four(s) from Uthappa.@robbieuthappa smashed Washington Sundar for four boundaries in one over. Opener Uthappa in the act right away.https://t.co/FUWYCV70Ri #Dream11IPL
— IndianPremierLeague (@IPL) October 17, 2020
ನಂತರ ಜೊತೆಯಾದ ನಾಯಕ ಸ್ಟೀವ್ ಸ್ಮಿತ್ ಮತ್ತು ಜೋಸ್ ಬಟ್ಲರ್ 12ನೇ ಓವರಿನಲ್ಲಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಜೊತೆಗೆ 43 ಬಾಲಿಗೆ ಬಟ್ಲರ್ ಮತ್ತು ಸ್ಮಿತ್ ಜೋಡಿ ಅರ್ಧಶತಕದ ಜೊತೆಯಾಟವಾಡಿತು. 25 ಬಾಲಿಗೆ 24 ರನ್ ಸಿಡಿಸಿ ಆಡುತ್ತಿದ್ದ ಜೋಸ್ ಬಟ್ಲರ್ ಅವರು ಕ್ರಿಸ್ ಮೋರಿಸ್ ಅವರ ಬೌಲಿಂಗ್‍ನಲ್ಲಿ ನವದೀಪ್ ಸೈನಿ ಅವರಿಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು. ನಂತರ ಕೊನೆಯ ಓವರಿನಲ್ಲಿ ನಾಯಕ ಸ್ಟೀವ್ ಸ್ಮಿತ್ ಅವರು 36 ಬಾಲಿಗೆ 57 ರನ್ ಸಿಡಿಸಿ ಔಟ್ ಆದರು.