ಸ್ನೇಹಿತನ ಪತ್ನಿಗೆ ಮತ್ತು ಬರೋ ಔಷಧಿ ನೀಡಿ ರೇಪ್ – ಗೆಳೆಯನ ಮಗಳನ್ನೂ ಬಿಡದ ಕಾಮುಕ

Public TV
2 Min Read
video record

– ಅತ್ಯಾಚಾರದ ವಿಡಿಯೋ ರೆಕಾರ್ಡ್ ಮಾಡ್ಕೊಂಡು ಬ್ಲ್ಯಾಕ್‍ಮೇಲ್

ಚಂಡೀಗಢ: ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಪತ್ನಿ ಮತ್ತು ಮಗಳಿಗೆ ಮತ್ತು ಬರುವ ಔಷಧಿ ನೀಡಿ ಅನೇಕ ತಿಂಗಳುಗಳ ಕಾಲ ಅತ್ಯಾಚಾರ ಎಸಗಿರುವ ಘಟನೆ ಹರಿಯಾಣದ ಗುರುಗ್ರಾಮ್‍ನಲ್ಲಿ ನಡೆದಿದೆ.

ಸದ್ಯಕ್ಕೆ ಮಹಿಳೆ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ನಿದ್ದೆ ಬರುವ ಔಷಧಿ ಕೊಟ್ಟು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬ್ಲ್ಯಾಕ್‍ಮೇಲ್ ಮೂಲಕ ಅನೇಕ ತಿಂಗಳು ಕಾಲ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ನನ್ನ ಮಗಳ ಮೇಲೂ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ROOM

ಏನಿದು ಪ್ರಕರಣ?
ಆರೋಪಿಯನ್ನು ಆಶು ಎಂದು ಗುರುತಿಸಲಾಗಿದೆ. ಈತ ಸಂತ್ರಸ್ತೆಯ ಪತಿಯ ಸ್ನೇಹಿತನಾಗಿದ್ದರಿಂದ ಆಗಾಗ ಮನೆಗೆ ಭೇಟಿ ನೀಡುತ್ತಿದ್ದ. ಮಾರ್ಚ್ 19 ರಂದು ಸಂತ್ರಸ್ತೆ ಅನಾರೋಗ್ಯದಿಂದ ಮಲಗಿದ್ದು, ಆಗ ಆರೋಪಿ ಆಕೆಗೆ ಕುಡಿಯಲು ಜ್ಯೂಸ್ ನೀಡಿದ್ದನು. ಔಷಧಿ ನೀಡುವ ನೆಪದಲ್ಲಿ ಆಶು ಮತ್ತು ಬರುವ ಔಷಧಿ ಮಿಕ್ಸ್ ಮಾಡಿದ್ದನು. ಜ್ಯೂಸ್ ಕುಡಿದ ನಂತರ ಸಂತ್ರಸ್ತೆ ಪ್ರಜ್ಞೆ ತಪ್ಪಿದ್ದು, ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

depositphotos 201585596 stock video friendship and love of man

ಆರೋಪಿ ಅತ್ಯಾಚಾರದ ಕೃತ್ಯವನ್ನು ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಆ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‍ಮೇಲ್ ಮಾಡಲು ಪ್ರಾರಂಭಿಸಿದ್ದನು. ಕೆಲವು ದಿನಗಳ ನಂತರ ನನ್ನ ಪತಿಗೆ ಹೃದಯಾಘಾತವಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಈ ಸಮಯದಲ್ಲಿ ಮಗಳು ನಮ್ಮ ತಾಯಿಯ ಜೊತೆ ವಾಸಿಸುತ್ತಿದ್ದನು. ಒಂದು ವಾರದ ನಂತರ ಆರೋಪಿ ನನ್ನ ಪತಿಯ ಆರೋಗ್ಯ ವಿಚಾರಿಸುವ ನೆಪದಲ್ಲಿ ಮನೆಗೆ ಭೇಟಿ ನೀಡಿದ್ದನು ಎಂದು ಸಂತ್ರಸ್ತೆ ಹೇಳಿದ್ದಾರೆ.

smartphone using social media

ಈ ವೇಳೆ ಮಗಳನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಜೂನ್ 28 ರಂದು ಸಂತ್ರಸ್ತೆಯ ಪತಿ ಮೃತಪಟ್ಟಿದ್ದಾರೆ. ಆಗ ಸಂತ್ರಸ್ತೆ ಭಯದಿಂದ ತನ್ನ ತವರ ಮನೆಗೆ ಹೋಗಿ ವಾಸಿಸುತ್ತಿದ್ದರು. ಆದರೆ ಆರೋಪಿ ಪದೇ ಪದೇ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‍ಮೇಲ್ ಮಾಡುತ್ತಿದ್ದನು. ಹೀಗಾಗಿ ಸಂತ್ರಸ್ತೆ ಕೊನೆಗೆ ಪೊಲೀಸರನ್ನ ಸಂಪರ್ಕಿಸಿ ದೂರು ದಾಖಲಿಸಿದ್ದಾರೆ.

Police Jeep 1

ಎಸ್‍ಎಚ್‍ಒ ಸೆಕ್ಟರ್ 10 ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ. ಈಗಾಗಲೇ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಅವನಿಗೆ ಕ್ರಿಮಿನಲ್ ಹಿನ್ನೆಲೆ ಇದೆ. ಐಪಿಸಿ ಸೆಕ್ಷನ್ ಮತ್ತು ಪೋಕ್ಸೋ ಕಾಯ್ದೆಯಡಿಯಲ್ಲಿ ಆತನ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಸಂಜಯ್ ಕುಮಾರ್ ತಿಳಿಸಿದ್ದಾರೆ.

jail 1

Share This Article
Leave a Comment

Leave a Reply

Your email address will not be published. Required fields are marked *