– ಸಾವಿನ ಬಳಿಕ ಪೊಲೀಸರಿಂದ ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ
ಮಾಸ್ಕೋ: ಬಾತ್‍ಟಬ್ ನಲ್ಲಿ ಐಫೋನ್ ಬಿದ್ದಿದ್ದರಿಂದ ವಿದ್ಯುತ್ ಪ್ರವಹಿಸಿ 24 ವರ್ಷದ ಯುವತಿ ಸಾವನ್ನಪ್ಪಿರುವ ಘಟನೆ ರಷ್ಯಾದ ಅರ್ಖಾಂಗೆಲ್ಕಸ್ ನಗರದಲ್ಲಿ ನಡೆದಿದೆ.
ಓಲೆಸ್ಯಾ ಸೆಮೆನೋವಾ ಮೃತ ಯುವತಿ. ಸ್ನಾನಕ್ಕೂ ಮುನ್ನ ತನ್ನ ಐ ಫೋನ್ -8 ಚಾರ್ಜಿಂಗ್ ಹಾಕಿದ್ದರು. ಚಾರ್ಜಿಂಗ್ ಹಾಕಿದ್ದ ಮೊಬೈಲ್ ವೈಯರ್ ನಿಂದ ಕಳಚಿ ಬಾತ್‍ಟಬ್ ನೊಳಗೆ ಬಿದ್ದಿದೆ. ಮೊಬೈಲ್ ನಿಂದ ಹರಿದ ವಿದ್ಯುತ್ ನಿಂದ ಓಲೆಸ್ಯಾ ಮೃತಪಟ್ಟಿದ್ದಾಳೆ. ಅಲೆಸ್ಯಾಳ ಮೃತದೇಹವನ್ನ ಮೊದಲು ಆಕೆಯ ಗೆಳತಿ ಡಾರಿಯಾ ನೋಡಿ ಎಮೆರ್ಜೆನ್ಸಿ ನಂಬರ್ ಗೆ ಕರೆ ಮಾಡಿ ಸಹಾಯ ಕೇಳಿದ್ದಾಳೆ.
Advertisement
Advertisement
ಸ್ಥಳಕ್ಕಾಗಮಿಸಿದ ವೈದ್ಯರು ಅಲೆಸ್ಯಾ ಮೃತಪಟ್ಟಿರೋದನ್ನ ಖಚಿತ ಪಡಿಸಿದ್ದಾರೆ. ಅಲೆಸ್ಯಾ ಅರ್ಖಾಂಗೆಲ್ಕಸ್ ನಗರದ ಬಟ್ಟೆ ಮಳಿಗೆಯಲ್ಲಿ ಕೆಲಸ ಮಾಡಿಕೊಂಡು ಗೆಳತಿ ಜೊತೆ ವಾಸವಾಗಿದ್ದಳು. ಅಲೆಸ್ಯಾ ಮೃತದೇಹ ಹಳದಿ ಬಣ್ಣಕಕ್ಕೆ ತಿರುಗಿತ್ತು. ಆಕೆಯ ನಾಡಿ ಬಡಿತ ಸಹ ನಿಂತಿತ್ತು ಎಂದು ಡಾರಿಯಾ ಹೇಳಿದ್ದಾಳೆ.
Advertisement
Advertisement
ಪೊಲೀಸರಿಂದ ಎಚ್ಚರಿಕೆ ಸಂದೇಶ: ಅಲೆಸ್ಯಾ ಸಾವಿನ ಬಳಿಕ ಪೊಲೀಸರು ಸಾರ್ವಜನಿಕ ಪ್ರಕಟನೆ ಹೊರಡಿಸಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಮೊಬೈಲ್ ನೀರಿನಲ್ಲಿ ಬಂದ್ರೆ ಅದು ಹಾಳಾಗುತ್ತೆ ಎಂದು ನಿಮಗೆ ತಿಳಿದಿರುತ್ತೆ. ಕೆಲ ಮೊಬೈಲ್ ಗಳು ನೆಟ್‍ವರ್ಕ್ ಜೊತೆ ಸಂಪರ್ಕದಲ್ಲಿದ್ದ ವೇಳೆ ನೀರಿನಲ್ಲಿ ಬಿದ್ದರೆ ವಿದ್ಯುತ್ ಪ್ರವಹಿಸುತ್ತದೆ. ಹಾಗಾಗಿ ಸಣ್ಣ ತಪ್ಪುಗಳಿಂದ ಜೀವವೇ ಹೋಗುತ್ತದೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದೆ.
ಈ ಘಟನೆಗೂ ಮುನ್ನ 15 ವರ್ಷದ ಎನಾ ಸಾವು ಇದೇ ರೀತಿ ಸಂಭವಿಸಿತ್ತು. ಕಳೆದ ವರ್ಷ ಪೋಕರ್ ಸ್ಟಾರ್ ಲಿಲಿಯಾ ನೊವಿಕೊವಾ ಸಹ ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿದ್ದರು.