ಪಂಜಾಬ್: ಸ್ನಾನದ ಮನೆಯಲ್ಲಿ ಇರುವ ಫೋಟೋಗಳನ್ನು ಬಳಸಿಕೊಂಡು ನನಗೆ 20 ಲಕ್ಷ ಕೋಡುವಂತೆ ಬೆದರಿಕೆ ಹಾಕುತ್ತಿದ್ದಾನೆ ಎಂದು ಮಹಿಳೆಯೊಬ್ಬಳು ತನ್ನ ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿರುವ ಘಟನೆ ಪಂಜಾಬ್‍ನ ಲೂಧಿಯಾನದಲ್ಲಿ ನಡೆದಿದೆ.
ನಾನು ಪತಿಯೊಂದಿಗೆ ವಾಸಿಸುತ್ತಿದ್ದಾಗ ನನಗೆ ಅರಿವಿಲ್ಲದೆ ಕೆಲವೊಂದು ಫೋಟೋಗಳನ್ನು ಕ್ಲಿಕ್ ಮಾಡಿದ್ದಾನೆ. ಇದೀಗ ಆ ಫೋಟೋಗಳನ್ನು ಇಟ್ಟುಕೊಂಡು ನನಗೆ ಪತಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.
ಪತಿ ಸ್ನಾನದ ಮನೆಯಲ್ಲಿ ಕ್ಯಾಮೆರಾ ಇಟ್ಟಿದ್ದಾನೆ. ಅಲ್ಲಿ ತೆಗೆದಿರುವ ಕೆಲವು ಫೋಟೋಗಳನ್ನು ಬೆದರಿಕೆ ಹಾಕಲು ಬಳಸುತ್ತಿದ್ದಾನೆ. 20 ಲಕ್ಷ ರೂ. ಹಣವನ್ನು ಕೇಳುತ್ತಿದ್ದಾನೆ. ನಾನು ಹಣವನ್ನು ಕೊಡದೆ ಇದ್ದಲ್ಲಿ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದಾಗಿ ಬೆದರಿಸುತ್ತಿದ್ದಾನೆ. ಕೆಲವು ಫೋಟೋಗಳನ್ನು ಈಗಾಗಲೇ ವಾಟ್ಸಾಪ್ ಸ್ಟೇಟಸ್ ನಲ್ಲಿ ಪೋಸ್ಟ್ ಮಾಡಿದ್ದಾನೆ ಎಂದು 23 ವರ್ಷದ ಮಹಿಳೆ ಪತಿಯ ವಿರುದ್ಧ ಠಾಣೆ ಮೆಟ್ಟಿಲೇರಿದ್ದಾಳೆ.
ಮಹಿಳೆ ತನ್ನ ಅತ್ತೆ, ಪತಿ ಮತ್ತು ಇನ್ನೂ ಕೆಲವು ವ್ಯಕ್ತಿಗಳ ಮೇಲೆ ಆರೋಪ ಮಾಡುತ್ತಿದ್ದಾಳೆ. ತನಿಖೆ ನಂತರ ಅವರ ಹೆಸರನ್ನು ಪ್ರಕರಣದಲ್ಲಿ ಸೇರಿಸುತ್ತೆವೆ. ಸೆಕ್ಷನ್ 67 ಮತ್ತು 67-ಎ (ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತನಿಖಾಧಿಕಾರಿ, ಸಹಾಯಕ ಸಬ್ ಇನ್ಸ್‍ಪೆಕ್ಟರ್ (ಎಎಸ್‍ಐ) ಗುರುದೇವ್ ಸಿಂಗ್ ಹೇಳಿದ್ದಾರೆ.