ಬೆಂಗಳೂರು: ಸ್ಥಳೀಯ ಮುಸ್ಲಿಂ ಯುವಕರು ನನ್ನ ರಕ್ಷಣೆ ಬರದಿದ್ದಿದ್ದರೆ ನಾನು ಇಂದು ಬದುಕುಳಿಯುತ್ತಿರಲಿಲ್ಲ ಎಂದು ಫೇಸ್‍ಬುಕ್ ನಲ್ಲಿ ಪೋಸ್ಟ್ ಹಾಕಿ ಗಲಭೆಗೆ ಪ್ರಚೋದನೆ ನೀಡಿದ್ದ ಎನ್ನಲಾದ ನವೀನ್ ತಾಯಿ ಹೇಳಿದ್ದಾರೆ.
Advertisement
ಕಾವಲ್ ಬೈರಸಂದ್ರ ನಿವಾಸಿಯಾಗಿರೋ ಜಯಂತಿ ಅವರು ಸಹೋದರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಮನೆಯಿಂದ 500 ಮೀಟರ್ ದೂರದಲ್ಲಿ ಕುಟುಂಬದೊಂದಿಗೆ ನೆಲೆಸಿದ್ದಾರೆ. ಮಂಗಳವಾರ ಸಂಜೆ ಮನೆಯವರೆಲ್ಲರೂ ಟಿವಿ ನೋಡುತ್ತಿದ್ದರು. ಇತ್ತ ನವೀನ್ ಹಾಗೂ ಪತ್ನಿ ದಿನಸಿ ಖರೀದಿಗಾಗಿ ಅಂಗಡಿಗೆ ತೆರಳಿದ್ದರು. ಇದನ್ನು ಓದಿ: 80 ಮಂದಿ ದುಷ್ಕರ್ಮಿಗಳು ಬಂದು ನನ್ನ ಆಟೋಗೆ ಬೆಂಕಿ ಹಚ್ಚಿದರು: ಚಾಲಕ ಕಣ್ಣೀರು
Advertisement
Advertisement
ಇತ್ತ ವಿಜಯನಗರದಲ್ಲಿರುವ ಮಗಳ ಮನೆಯ ಪಕ್ಕದ ಮನೆ ನಿವಾಸಿಯೊಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯೂ ಮನೆಗೆ ಬಂದಿದ್ದಳು. ಹೀಗೆ ನಾವೆಲ್ಲರೂ ಕುಳಿತು ಧಾರಾವಾಹಿ ನೋಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಮನೆಯ ಮುಂದೆ ಜನ ಜಮಾಯಿಸಿರುವುದು ಕಂಡು ಬಂತು. ಅಲ್ಲದೆ ರಾತ್ರಿ 8.30 ಸುಮಾರಿಗೆ ಮನೆ ಮುಂದೆ ನಿಂತಿದ್ದ ಬೈಕ್ ಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಲು ಆರಂಭಿಸಿದರು. ಕೂಡಲೇ ನಾನು ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಪಕ್ಕದ ಮನೆಯ ಟೆರೇಸ್ ಗೆ ಹೋಗುವಂತೆ ಹೇಳಿದೆ. ಇದನ್ನು ಓದಿ: ಒಂದು ರಾತ್ರಿಯ ಬೆಂಗಳೂರು ದಂಗೆ – ಎಷ್ಟು ಕೋಟಿ ನಷ್ಟ?
Advertisement
ಮನೆಯಲ್ಲಿ ಆಭರಣಗಳು ಹಾಗೂ ಹಣ ಇದ್ದುದ್ದರಿಂದ ನಾನು ಮನೆಯಲ್ಲೇ ಉಳಿದೆ. ಹೊರಗೆ ಸಾಕಷ್ಟು ಗದ್ದಲ ಇದ್ದರೂ ಅವರು ಮನೆಗೆ ಹಾನಿ ಮಾಡಲ್ಲ ಅಂತ ಭಾವಿಸಿದ್ದೆ. ಅಲ್ಲದೆ ಈ ಗಲಭೆ ನನ್ನ ಮನೆಗೆ ಸಂಬಂಧಿಸಿದ್ದು ಎಂದು ತಿಳಿದಿರಲಿಲ್ಲ. ಹೀಗಾಗಿ ನಾನು ಬೀದಿಯಲ್ಲಿರುವ ಕೆಲ ವ್ಯಕ್ತಿಗಳ ಜೊತೆ ವಿಚಾರಿಸಲು ಪ್ರಯತ್ನಿಸಿದೆ. ಆದರೆ ಅವರು ನನ್ನನ್ನು ನೋಡಲೇ ಇಲ್ಲ. ಅಲ್ಲಿದ್ದವರಲ್ಲಿ ಈ ಹಿಂದೆ ನಾನು ಯಾರನ್ನೂ ನೋಡಿರಲಿಲ್ಲ. ಆದರೆ ಪರಿಸ್ಥಿತಿ ಹದಗೆಡುತ್ತಾ ಹೋಗುತ್ತಿದ್ದಂತೆ ನಾನು ಭಯಭೀತಳಾದೆ. ಬೀದಿಗಳಲ್ಲಿ ನೂರಾರು ಜನ ಕಾರು, ಬೈಕ್‍ಗಳಿಗೆ ಬೆಂಕಿ ಹಚ್ಚಿ ಧ್ವಂಸ ಮಾಡುತ್ತಿದ್ದು, ಅಲ್ಲಿಂದ ಎಸ್ಕೇಪ್ ಆಗಲು ಯಾವುದೇ ದಾರಿ ನನಗಿರಲಿಲ್ಲ ಎಂದು ಜಯಂತಿ ಘಟನೆಯ ಬಗ್ಗೆ ಮೆಲುಕು ಹಾಕಿಕೊಂಡರು. ಇದನ್ನು ಓದಿ: ಗೋಲಿಬಾರ್‌ಗೆ ಮೂವರು ಬಲಿ – ಮೃತಪಟ್ಟವರು ಯಾರು? ಉದ್ಯೋಗ ಏನು?
ರಾತ್ರಿ 10.30ರ ಸುಮಾರಿಗೆ ನಾಲ್ಕೈದು ಮಂದಿ ಸ್ಥಳೀಯ ಮುಸ್ಲಿಂ ಯುವಕರು ಮನೆಗೆ ಬಂದು ಪರಿಸ್ಥಿತಿ ಬಿಗಡಾಯಿಸುತ್ತಿದೆ. ಹೀಗಾಗಿ ನೀವು ಈ ಕೂಡಲೇ ನಮ್ಮೊಂದಿಗೆ ಬನ್ನಿ ಎಂದರು. ಅದಾಗಲೇ ಗುಂಪೊಂದು ಮನೆಯ ಕಾಂಪೌಂಡ್ ಪ್ರವೇಶಿಸಿತ್ತು. ಇದೇ ವೇಳೆ ವ್ಯಕ್ತಿಯೊಬ್ಬ, ನವೀನ್ ತಾಯಿಯನ್ನು ರಕ್ಷಣೆ ಮಾಡುವ ಮೂಲಕ ನಮ್ಮ ಧರ್ಮಕ್ಕೆ ಅನ್ಯಾಯ ಮಾಡುತ್ತಿದ್ದಾನೆ ಎಂದು ಕೂಗಾಡಿದನು. ಈ ವೇಳೆ ನನ್ನನ್ನು ಕರೆದೊಯ್ಯಲು ಬಂದವರು ಯಾವುದೇ ಮಹಿಳೆ ಹಾಗೂ ಮಕ್ಕಳನ್ನು ಮುಟ್ಟಬಾರದು ಎಂದು ಗುಂಪಿಗೆ ಎಚ್ಚರಿಕೆ ನೀಡಿದರು ಎಂದು ಜಯಂತಿ ತಿಳಿಸಿದರು. ಇದನ್ನು ಓದಿ: ಅಖಂಡ ಶ್ರೀನಿವಾಸ ಮೂರ್ತಿ ಬದುಕು ಅಕ್ಷರಶಃ ಬೀದಿಗೆ
ಪಕ್ಕದ ಮನೆಗೆ ನಾನು ಹೋಗುತ್ತಿದ್ದಂತೆಯೇ ಗುಂಪು ನಮ್ಮ ಮನೆಗೆ ಬೆಂಕಿ ಹಚ್ಚಿಯೇ ಬಿಟ್ಟಿತ್ತು. ಒಟ್ಟಿನಲ್ಲಿ ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದೆ ಎಂದು ಜಯಂತಿ ಗಂಭೀರ ಆರೋಪ ಮಾಡಿದ್ದಾರೆ. ಇದನ್ನು ಓದಿ: ಮನೆಗೆ ಪೆಟ್ರೋಲ್ ಬಾಂಬ್ ಹಚ್ಚಿದ್ರು, ನಾನು ಬದುಕಿರೋದೆ ಹೆಚ್ಚು- ಶಾಸಕ ಶ್ರೀನಿವಾಸ ಕಣ್ಣೀರು