ಬೆಂಗಳೂರು: ಇಲ್ಲಿಯವರೆಗೆ ಸ್ಥಳೀಯವಾಗಿ ಸಿಗಬಹುದಾದ ವಸ್ತುಗಳನ್ನು ಸ್ಥಳಕ್ಕೆ ಹೋಗಿ ಖರೀದಿಸಬೇಕಿತ್ತು. ಆದರೆ ಇನ್ನು ಮುಂದೆ ನೀವು ಕುಳಿತ ಸ್ಥಳದಲ್ಲೇ ಸ್ಥಳೀಯ ಉತ್ಪನ್ನಗಳನ್ನ ತಯಾರಿಸುವ ತಯಾರಕರ ಜೊತೆ ಮಾತನಾಡಿ ಉತ್ಪನ್ನಗಳನ್ನು ಬುಕ್ ಮಾಡಬಹುದು.
ಹೌದು. ಕೊರೊನಾ ವಿರುದ್ಧ ಭಾರತ ಸಮರ ಮಾಡುವುದರ ಜೊತೆ ಈಗ ದೇಶವ್ಯಾಪಿ ಸ್ಥಳೀಯ ಉತ್ಪನ್ನಗಳಿಗೆ ಬೇಡಿಕೆ ಸಿಗಬೇಕೆಂಬ ಪ್ರಬಲವಾದ ಧ್ವನಿ ಎದ್ದಿದೆ. ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ವಸ್ತುಗಳು ತಯಾರಾಗುತ್ತಿದ್ದರೂ ಪ್ರಚಾರ ಮತ್ತು ಸಂವಹನಕ್ಕೆ ಸರಿಯಾದ ವೇದಿಕೆ ಇಲ್ಲದ ಕಾರಣ ಇವುಗಳ ಬಗ್ಗೆ ಜನರಿಗೆ ಮಾಹಿತಿ ತಿಳಿಯುತ್ತಿರಲಿಲ್ಲ. ಈಗ ಇವುಗಳಿಗೆ ಒಂದು ಅತ್ಯುತ್ತಮ ವೇದಿಕೆಯಾಗಲು ಯುವಾ ಬ್ರಿಗೇಡ್ Glocal India ಹೆಸರಿನ ಸಂಸ್ಥೆಯನ್ನು ಆರಂಭಿಸಿದೆ.
Advertisement
Advertisement
ಸದ್ಯ ಇರುವ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ನಂತೆ ಈ www.glocalindia.org ಕಾರ್ಯ ನಿರ್ವಹಿಸುವುದಿಲ್ಲ. ನೇರವಾಗಿ ಈ ವೆಬ್‌ಸೈಟ್ ಮೂಲಕ ಉತ್ಪನ್ನಗಳನ್ನು ಖರೀದಿಸಲು ಸಾಧ್ಯವಿಲ್ಲ. ಇದು ಗ್ರಾಹಕರು ಮತ್ತು ತಯಾರಕರ ಮಧ್ಯೆ ಸಂವಹನ ಕಲ್ಪಿಸುವ ವೇದಿಕೆಯಾಗಿ ಕೆಲಸ ಮಾಡುತ್ತದೆ.
Advertisement
ಪ್ರತಿಯೊಂದು ಉತ್ಪನ್ನದ ಬಗ್ಗೆ ಇದರಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ತಯಾರಕರ ಸಂಪರ್ಕದ ವಿಳಾಸವನ್ನು ನೀಡಲಾಗಿದೆ. ಇದು ಸ್ಥಳೀಯ ಉತ್ಪನ್ನಗಳಿಗೆ ಮಾತ್ರ ವೇದಿಕೆಯಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಪ್ರಮುಖವಾಗಿ ಮನೆ, ಪೀಠೋಪಕರಣ, ಆಹಾರ, ಫ್ಯಾಶನ್, ಆಟಿಕೆ, ಸೇವೆ, ಎಲೆಕ್ಟ್ರಿಕಲ್, ಆರೋಗ್ಯ ಮತ್ತು ಇತರೇ ವಿಭಾಗಗಳಿವೆ.
Advertisement
ಸಂಸ್ಥೆ ಹೇಳಿದ್ದು ಏನು?
ಪ್ರಧಾನಮಂತ್ರಿ ನರೇಂದ್ರಮೋದಿಯವರ ಆತ್ಮನಿರ್ಭರ ಭಾರತ ಕನಸಿನೊಂದಿಗೆ ಯುವಾಬ್ರಿಗೇಡ್ ಹುಟ್ಟುಹಾಕಿದ ಸಂಸ್ಥೆ Glocal India. ಇದು Global ಮಟ್ಟಕ್ಕೇರಬಲ್ಲ Local ವಸ್ತುಗಳಿಗೆ Vocal ಆಗುವ ಪ್ರಯತ್ನ. ಇಲ್ಲಿ ಜಿಲ್ಲಾಶಹ ಸ್ಥಳೀಯ ಉತ್ಪನ್ನಗಳನ್ನು ಪಟ್ಟಿಮಾಡಿ ಅವುಗಳು ಸಿಗುವ ಸ್ಥಳಗಳನ್ನು ತಿಳಿಸಲು ವೇದಿಕೆ ರೂಪಿಸಿಕೊಡಲಾಗಿದೆ.
ಆಯಾ ಸ್ಥಳೀಯ ಕಂಪೆನಿಗಳು ತಾವು Global ಆಗುವ ಅರ್ಹತೆ ಇದೆಯೋ ಇಲ್ಲವೋ ಎಂಬುದನ್ನು ಕೂಡ ತಜ್ಞರ ಸಮಿತಿ ನಿರ್ಧರಿಸಿ ಅವರಿಗೆ ಗುಣಮಟ್ಟ ಪತ್ರವನ್ನು ಕೊಡಲಾಗುತ್ತದೆ. ಮತ್ತು ಈ ವೆಬ್‌ಸೈಟ್‌ನಲ್ಲಿ ಅಂತಹ ಉತ್ತಮ ಗುಣಮಟ್ಟದ ವಸ್ತುಗಳನ್ನು ಪ್ರತ್ಯೇಕವಾಗಿ ಬಿಂಬಿಸಲಾಗುತ್ತದೆ. ಇದು ಸ್ಥಳೀಯ ವಸ್ತುಗಳಿಗೆ ವೇದಿಕೆ ಮಾತ್ರ ಆಗಿದ್ದು ಇದರ ಮೂಲಕ ಮಾರಾಟ ನಡೆಯುವುದಿಲ್ಲ. ಬದಲಿಗೆ ಉತ್ಪಾದಕರ ನೇರ ಸಂಪರ್ಕವನ್ನು ಗ್ರಾಹಕರಿಗೆ ಈ ಮೂಲಕ ಕಲ್ಪಿಸಿಕೊಡಲಾಗುತ್ತದೆ.