ಮೈಸೂರು: ಜಗತ್ತಿನ ಅನೇಕ ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದ ನಲುಗುತ್ತಿದ್ದಾರೆ. ಈ ರೋಗದಿಂದ ಪಾರಾಗಲು ಔಷಧಿಗಳು ಇದ್ದರೂ ಅದು ಅಲ್ಪ ಪ್ರಮಾಣದಲ್ಲಿ ಮಾತ್ರ ರೋಗ ಶಮನ ಮಾಡುತ್ತಿದೆ. ಇದೀಗ ಇದಕ್ಕೆ ಅಲ್ಪ ಪ್ರಮಾಣಕ್ಕಿಂತ ದೊಡ್ಡ ಮಟ್ಟದಲ್ಲಿ ಔಷಧ ಲಭ್ಯವಾಗಿದ್ದು, ಮೈಸೂರು ವಿವಿಯ ರಾಸಾಯನಿಕ ವಿಭಾಗದ ಪ್ರೊಫೆಸರ್ ಇದನ್ನ ಕಂಡು ಹಿಡಿದಿದ್ದಾರೆ.
Advertisement
ಸ್ತನ ಕ್ಯಾನ್ಸರ್ ಜಾಗತಿಕ ಕಾಲಮಾನದಲ್ಲಿ ಹೆಚ್ಚು ಸಮಸ್ಯೆ ಒಡ್ಡುತ್ತಿದೆ. ಕಳೆದ ವರ್ಷ ಜಗತ್ತಿನಲ್ಲಿ 6,84,996 ಈ ರೋಗದಿಂದ ಮೃತಪಟ್ಟಿದ್ದಾರೆ. ಈ ರೋಗಕ್ಕೆ ಈಗ ಮೈಸೂರಿನ ವಿಜ್ಞಾನಿಯೊಬ್ಬರ ಸಂಶೋಧನೆ ಮಾಡಿದ್ದಾರೆ. ಈಗಿರುವ ಔಷಧಕ್ಕಿಂತ ಹೆಚ್ಚಿನ ಪಟ್ಟು ಸಮಸ್ಯೆ ನೀಗಿಸುವಲ್ಲಿ ಕೆಲಸ ಮಾಡಲಿದ್ದು, ಇದಕ್ಕಾಗಿ ಹೊಸದಾದ ಸಂಶೋಧನೆ ಮಾಡಿದ್ದಾರೆ. ಮೈಸೂರಿನ ವಿಶ್ವವಿದ್ಯಾಲಯದ ಸಾವಯವ ರಸಾಯನ ಶಾಸ್ತ್ರ ವಿಭಾಗದ ಅಧ್ಯಕ್ಷ ಡಾ.ಬಸಪ್ಪ ರೋಗಕ್ಕೆ ಮದ್ದು ಕಂಡು ಹಿಡಿದಿದ್ದಾರೆ.
Advertisement
Advertisement
ಸ್ತನ ಕ್ಯಾನ್ಸರ್ ಹೋಗಲಾಡಿಸಲು ಔಷಧ ಬೀಜವನ್ನು ಪತ್ತೆ ಹಚ್ಚಿ, ಈ ಹಿಂದಿನ ಔಷಧಿಯಾದ ಟ್ಯಾಮೊಕ್ಸಿಫೆನ್‍ಗೆ ಹೋಲಿಸಿದಾಗ ಇದಕ್ಕಿಂತ ತಾವು ಕಂಡು ಹಿಡಿದ ಔಷಧ ಹೆಚ್ಚು ಉಪಯುಕ್ತವಾಗಿದೆ. ಎಎಂಟಿಎ ಎಂಬ ಹೆಸರಿನ ಔಷಧಿ ಬೀಜವನ್ನ ಪ್ರಯೋಗಾಲಯದಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿಗೊಳಿಸಿದ್ದೇವೆ. ಇದು ಟ್ಯಾಮೊಕ್ಸಿಫೆನ್‍ಗಿಂತ ಹೆಚ್ಚು ಸಾಂದ್ರತೆ ಹಾಗೂ ಸ್ತನ ಕ್ಯಾನ್ಸರ್ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ನಮ್ಮ ತಂಡದ ಸಾಧನೆ ಎಂದು ಬಸಪ್ಪ ಅವರು ಹೇಳಿದ್ದಾರೆ.
Advertisement
ಫ್ರೋ.ಪೀಟರ್, ಲೋಬಿ, ಡಾ.ವಿಜಯ್, ಜೊತೆಯಲ್ಲಿ ವಿಶನ್ ಗ್ರೂಪ್ ಆನ್ ಸೈನ್ಸ್ ಅಂಡ್ ಟೆಕ್ನಾಲಜಿ ಜೊತೆಯಾಗಿದೆ. ಕರ್ನಾಟಕ ಮತ್ತು ಭಾರತ ಸರ್ಕಾರದ ನಿಧಿ ಹಾಗೂ ಸಹಕಾರ ನೀಡಿದೆ. ಈ ಔಷಧ ಸ್ತನ ಕ್ಯಾನ್ಸರ್ ಇದ್ದವರಿಗೆ ಚೇತರಿಕೆಗೆ ಹೆಚ್ಚು ವೇಗವಾಗಿ ಸಹಕಾರಿಯಾಗಲಿದೆ ಎಂದು ಡಾ.ಬಸಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ, ಮೈಸೂರು ವಿವಿಯ ಪ್ರೊಫೆಸರ್‍ಗಳು ಹಾಗೂ ವಿಜ್ಞಾನಿಗಳು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುವ ಹೆಜ್ಜೆ ಇಡುತ್ತಿದ್ದಾರೆ. ಇದು ಮೈಸೂರಿಗೆ ಮತ್ತೊಂದು ಹೆಮ್ಮೆಯನ್ನ ತಂದುಕೊಟ್ಟಿದೆ. ಮೈಸೂರು, ರಾಜ್ಯ ಮಾತ್ರವಲ್ಲದೇ ದೇಶ ವಿದೇಶದಲ್ಲಿಯೂ ಮತ್ತಷ್ಟು ಹೆಸರು ಮಾಡುತ್ತಿದೆ. ಈ ಔಷಧ ಜಗತ್ತಿನಲ್ಲಿ ದೊಡ್ಡ ಪಿಡುಗಿಗಾಗಿ ಕಾಡುತ್ತಿರುವ ಬ್ರೆಸ್ಟ್ ಕ್ಯಾನ್ಸರ್‌ನಿಂದ ಬಳಲುತ್ತಿರುವವರ ಆರೋಗ್ಯ ಚೇತರಿಕೆಗೆ ಸಹಾಯಕವಾಗಲಿದೆ.