ಧಾರವಾಡ: ಸ್ಟೋನ್ ಕ್ರಶರ್ ಮೇಲೆ ದಾಳಿ ಮಾಡಿದ ಧಾರವಾಡ ಜಿಲ್ಲಾ ಪೊಲೀಸರು, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 200 ಕಿಲೋ ಜಿಲೆಟಿನ್ ಕಡ್ಡಿ ವಶಕ್ಕೆ ಪಡೆದು ಕ್ರಷರ್ ಮಾಲಿಕರ ಮೇಲೆ ಕೇಸ್ ದಾಖಲಿಸಿಕೊಂಡಿದ್ದಾರೆ.
Advertisement
ಜಿಲ್ಲೆಯ ಅಮ್ಮಿನಬಾವಿ ಗ್ರಾಮದ ದಯಾನಂದ ಮಾಸೂರ ಎಂಬುವವರಿಗೆ ಸೇರಿದ ಕ್ರಶರ್ ಮೇಲೆ ದಾಳಿ ಮಾಡಿದ್ದ ಪೊಲೀಸರು, ಸ್ಥಳದಿಂದ 1650 ಜಿಲೆಟಿನ್ ಕಡ್ಡಿಗಳು ಹಾಗೂ 700 ಎಲೆಕ್ಟ್ರಾನಿಕ್ ಡಿಟೋನೇಟರ್ ಗಳನ್ನು ವಶಪಡಿಸಿಕೊಂಡಿದ್ದಾರೆ.
Advertisement
ಕ್ರಶರ್ ಇರುವ ಸ್ಥಳದಲ್ಲಿ ಈ ಜಿಲೆಟಿನ್ ಕಡ್ಡಿಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆರೋಪದಡಿ ಮಾಲೀಕ ಸೇರಿ ಮೂರು ಜನರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.
Advertisement
Advertisement
ಈ ಬಗ್ಗೆ ಮಾಹಿತಿ ನೀಡಿದ ಧಾರವಾಡ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ್, ಲೈಸನ್ಸ್ ಇದ್ದವರು ಮಾತ್ರ ಜಿಲೆಟಿನ್ ಕಡ್ಡಿಗಳನ್ನು ಸಂಗ್ರಹ ಮಾಡಿ ಬ್ಲಾಸ್ಟ್ ಮಾಡಬಹುದು. ಆದರೆ ಇಲ್ಲಿ ಲೈಸನ್ಸ್ ಇಲ್ಲದೆ ಅಕ್ರಮವಾಗಿ ಈ ರೀತಿ ಇಟ್ಟಿರುವುದರಿಂದಾಗಿ ಕ್ರಶರ್ ಮಾಲಿಕ, ಜಿಲೆಟಿನ್ ಪೂರೈಕೆ ಮಾಡಿದವರು ಹಾಗೂ ಕ್ರಶರ್ ನಲ್ಲಿ ಕೆಲಸ ಮಾಡುವವರ ಮೇಲೆ ಸದ್ಯ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಹೇಳಿದರು.