ಶಾರ್ಜಾ: ರಾಜಸ್ಥಾನ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಸೋಲುಂಡರೂ, ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಅಭಿಮಾನಿಗಳ ಬೇಸರವನ್ನು ದೂರ ಮಾಡಲು ಧೋನಿ ಯಶಸ್ವಿಯಾಗಿದ್ದಾರೆ.
ರಾಯಲ್ಸ್ ವಿರುದ್ಧ ಟಾಮ್ ಕರ್ರನ್ ಎಸೆದ ಅಂತಿಮ ಓವರಿನಲ್ಲಿ ಧೋನಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ್ದರು. ಓವರಿನ 3ನೇ ಎಸೆತದಲ್ಲಿ ಮಿಡ್ ವಿಕೆಟ್‍ನತ್ತ ಸಿಕ್ಸರ್ ಬಾರಿಸಿದರೆ, 4ನೇ ಎಸೆತದಲ್ಲಿ ಬರೋಬ್ಬರಿ 92 ಮೀಟರ್ ದೂರಕ್ಕೆ ಸಿಕ್ಸರ್ ಸಿಡಿದ್ದರು.
Advertisement
Advertisement
ಧೋನಿ ಸಿಡಿಸಿದ ಸಿಕ್ಸರ್‌ಗೆ ಚೆಂಡು ಕ್ರೀಡಾಂಗಣದ ಹೊರಕ್ಕೆ ಬಿದ್ದಿತ್ತು. ಕೂಡಲೇ ವ್ಯಕ್ತಿಯೊಬ್ಬ ಚೆಂಡನ್ನು ಮನೆಗೆ ಕೊಂಡೊಯ್ದಿದ್ದಾನೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ವೀಕ್ಷಕ ವಿವರಣೆಕಾರರು, ಈ ಚೆಂಡನ್ನು ಅಭಿಮಾನಿ ಖಂಡಿತ ಕೊಡುವುದಿಲ್ಲ. ಜೀವಮಾನದಲ್ಲಿ ಆತನಿಗೆ ಸಿಕ್ಕ ಅತ್ಯಮೂಲ್ಯ ಬಹುಮಾನವಿದು ಎಂದು ಹೇಳಿದ್ದಾರೆ.
Advertisement
https://www.instagram.com/p/CFcvaJpFsD2/?utm_source=ig_web_copy_link
Advertisement
ಪಂದ್ಯದಲ್ಲಿ ಧೋನಿ 17 ಎಸೆತಗಳಲ್ಲಿ 3 ಸಿಕ್ಸರ್ ಗಳೊಂದಿಗೆ 29 ರನ್ ಗಳಿಸಿದ್ದರು. ಅಂತಿ ಓವರ್ ವೇಳೆಗೆ ಚೆನ್ನೈ ಗೆಲುವಿಗೆ 6 ಎಸೆತಗಳಲ್ಲಿ 38 ರನ್ ಬೇಕಾಗಿತ್ತು. ಸೋಲು ಖಚಿತವಾದರೂ ತಂಡದ ರನ್ ರೇಟ್ ಕಡಿಮೆಯಾಗದಂತೆ ನೋಡಿಕೊಂಡ ಧೋನಿ, ಹ್ಯಾಟಿಕ್ ಸಿಕ್ಸರ್ ಸಿಡಿಸಿದ್ದರು. ಧೋನಿಯ ಸಿಕ್ಸರ್ ಗಳು ಚೆನ್ನೈ ಅಭಿಮಾನಿಗಳ ಸೋಲಿನ ಬೇಸರವನ್ನು ಸ್ವಲ್ಪ ಕಡಿಮೆ ಮಾಡಿದೆ.
Never going to delete this clip..
Damm that six ..
Dam damm..
At the end , the ball .????????????..#Dhoni #csk#ipl2020 #CSKvsRR #MSDhoni #RRvCSK #ChennaiSuperKings #Dhoni #dhoniisback @ChennaiIPL#WhistleFromHome #WhistlePodu #Yellove #RRvCSK#ThalaDhoni pic.twitter.com/Qe83N80QPY
— Dhruvil Gajjar (@meggi_07) September 22, 2020
ಉಳಿಂತೆ ಚೆನ್ನೈ, ರಾಜಸ್ಥಾನ ನಡುವಿನ ಪಂದ್ಯದಲ್ಲಿ ಬರೋಬ್ಬರಿ 33 ಸಿಕ್ಸರ್ ಗಳನ್ನು ಇತ್ತಂಡಗಳ ಬ್ಯಾಟ್ಸ್ ಮನ್ಸ್ ಸಿಡಿಸಿದ್ದು ಹೊಸ ದಾಖಲೆಯಾಗಿದೆ. ಆರ್‍ಆರ್ ತಂಡ 17 ಸಿಕ್ಸರ್ ಸಿಡಿಸಿದರೇ, ಸಿಎಸ್‍ಕೆ ತಂಡ 16 ಸಿಕ್ಸರ್ ಬಂದಿದ್ದವು. ಈ ಹಿಂದೆ 2018ದಲ್ಲಿ ಚೆನ್ನೈ ಹಾಗೂ ಆರ್.ಸಿ.ಬಿ ನಡುವಿನ ಪಂದ್ಯದಲ್ಲಿ 33 ಸಿಕ್ಸರ್ ಗಳನ್ನು ಸಿಡಿಸಲಾಗಿದ್ದು, ಇದೇ ಆವೃತ್ತಿಯ ಚೆನ್ನೈ ಮತ್ತು ಕೋಲ್ಕತ್ತಾ ನಡುವಿನ ಪಂದ್ಯದಲ್ಲಿ 31 ಸಿಕ್ಸರ್ ಸಿಡಿಸಲಾಗಿತ್ತು.