ಬೆಂಗಳೂರು: ಶಾಲೆ ಆರಂಭ ಮಾಡಲು ಸರ್ಕಾರ ಅನುಮತಿ ನೀಡುತ್ತಿದ್ದಂತೆಯೇ ಇತ್ತ ಪೂರ್ತಿ ಹಣ ಕಟ್ಟುವಂತೆ ಪೋಷಕರಿಗೆ ಒತ್ತಡ ಹಾಕಿರುವ ಆರೋಪವೊಂದು ಖಾಸಗಿ ಶಾಲೆಯ ವಿರುದ್ಧ ಕೇಳಿಬಂದಿದೆ.
Advertisement
ಕೊರೊನಾ ಸಮಯದಲ್ಲೂ ಖಾಸಗಿ ಶಾಲೆಗಳ ಧನದಾಯಿತನ ನಿಂತಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ. ಮುಂದಿನ ಕ್ಲಾಸಿಗೆ ಹೊಗಬೇಕು ಅಂದ್ರೆ ಫುಲ್ ಫೀಸ್ ಕಟ್ಟಲೇಬೇಕು ಎಂದು ಸಿಲಿಕಾನ್ ಸಿಟಿಯಲ್ಲಿರುವ ಖಾಸಗಿ ಶಾಲೆಯೊಂದು ಒತ್ತಡ ಹಾಕುತ್ತಿರುವುದಾಗಿ ಪೋಷಕರು ದೂರಿದ್ದಾರೆ.
Advertisement
Advertisement
ಸರ್ಕಾರ ಕೇವಲ ಮೊದಲ ಕಂತಿನ ಶುಲ್ಕ ಕಟ್ಟಿಸಿಕೊಳ್ಳಿ ಎಂದು ಆದೇಶ ನೀಡಿದೆ. ಆದರೆ ಸರ್ಕಾರದ ಆದೇಶವನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಶಾಲೆ, ಫುಲ್ ಫೀಸ್ ಕಟ್ಟುವಂತೆ ಪೋಷಕರಿಗೆ ಒತ್ತಡ ಹಾಕುತ್ತಿದೆ. 1 ನೇ ತರಗತಿಗೆ 30 ಸಾವಿರ ಫುಲ್ ಫೀಸ್ ಕಟ್ಟುವಂತೆ ಒತ್ತಾಯ ಮಾಡಲಾಗುತ್ತಿದೆ.
Advertisement
ಫೀಸ್ ಕಟ್ಟದ ಹಿನ್ನೆಲೆಯಲ್ಲಿ ಆನ್‍ಲೈನ್ ಕ್ಲಾಸ್ ಐಡಿ ಕೂಡ ಡಿಲೀಟ್ ಮಾಡಿದೆ. ಪೋಷಕರಿಗೂ ಯಾವುದೇ ಮಾಹಿತಿ ನೀಡದೆ ಡಿಲೀಟ್ ಮಾಡಿರುವ ಖಾಸಗಿ ಶಾಲೆ, ಈ ಮೂಲಕ ಆನ್ ಲೈನ್ ಕ್ಲಾಸನ್ನು ನಿಲ್ಲಿಸಿದೆ. ಇತ್ತ ಏಕಾಏಕಿ ಐಡಿ ಡಿಲೀಟ್ ಮಾಡಿದ್ದರಿಂದ ಪೋಷಕರು ಕಂಗಾಲಾಗಿದ್ದಾರೆ.