– ಪೊಲೀಸರ ಮುಂದೆ ಹೇಳಿದ್ದೇನು..?
ಡೆಹ್ರಾಡೂನ್: ಕೊರೊನಾ ನಂತ್ರ ಅಪ್ಪನ ಸ್ಯಾಲರಿ ಕಡಿತವಾಗಿದ್ದರಿಂದ ಅವರಿಗೆ ಶಾಲೆ ಶುಲ್ಕ ಕಟ್ಟೋಕೆ ಸಾಧ್ಯವಿಲ್ಲ ಎಂದು ಮಗ ದರೋಡೆ ಮಾಡಿರುವ ಘಟನೆ ಉತ್ತರಾಖಂಡದ ರುದ್ರಪುರದಲ್ಲಿ ನಡೆದಿದೆ.
Advertisement
ತನ್ನ ತಂದೆಗೆ ಶಾಲೆಯ ಶುಲ್ಕ ಕಟ್ಟೋಕೆ ಸಾಧ್ಯವಿಲ್ಲ ಎನ್ನುವುದನ್ನು ಅರಿತುಕೊಂಡಿರುವ ಮಗ, ದರೋಡೆ ಮಾಡಲು ಮುಂದಾಗಿದ್ದಾನೆ. ಬಲ್ವಂತ್ ಎನ್‍ಕ್ಲೇವ್ ಕಾಲೋನಿಯ ಕಂಪನಿ ಉದ್ಯೋಗಿ ಸಚಿನ್ ಶರ್ಮಾ ಅವರಿಗೆ ಗನ್ ತೋರಿಸಿ 5.35 ಲಕ್ಷ ಹಣವನ್ನು ದೋಚಿದ್ದರು. ಇದೀಗ ಪೊಲೀಸರ ಬಲೆಗೆ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. 5.35 ಲಕ್ಷ ರೂಪಾಯಿ ಹಣ ಲೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.
Advertisement
Advertisement
ಆರೋಪಿಗಳ ವಿಚಾರಣೆ ವೇಳೆ ವಿದ್ಯಾರ್ಥಿಯೊಬ್ಬ ತನ್ನ ಶಾಲೆ ಶುಲ್ಕವನ್ನು ಕಟ್ಟಲು ಕಳ್ಳತನ ಮಾಡಿದ್ದೇನೆ ಎಂದು ಹೇಳಿದ್ದಾನೆ. ಈತನ ತಂದೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾರೆ. ಕಾರ್ಖಾನೆಯಲ್ಲಿ ಆಗಿರುವ ನಷ್ಟದಿಂದ ಅವರ ಸಂಬಳ ಕಡಿಮೆ ಮಾಡಲಾಗಿತ್ತು. ತಂದೆಯಿಂದ ಶಾಲೆ ಶುಲ್ಕ ಕಟ್ಟಲು ಸಾಧ್ಯವಿಲ್ಲ. ತಂದೆಗೆ ಕಷ್ಟ ನೀಡುವುದು ಬೇಡವೆಂದು ಈ ಕೆಲಸ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement