ಸೌಲಭ್ಯಗಳಿಗೆ ಅನುಗುಣವಾಗಿ ರೋಗಿಗಳನ್ನ ದಾಖಲಿಸಿಕೊಳ್ಳಿ : ಖಾಸಗಿ ಆಸ್ಪತೆಗಳಿಗೆ ಡಿಸಿ ಎಚ್ಚರಿಕೆ

Public TV
Public TV - Digital Head
2 Min Read

ಚಿಕ್ಕಮಗಳೂರು: ಖಾಸಗಿ ಆಸ್ಪತ್ರೆ ಸೋಂಕಿತರನ್ನ ದಾಖಲಿಸಿಕೊಂಡು ಚಿಕಿತ್ಸೆ ನೀಡಿ ಆಕ್ಸಿಜನ್ ಇಲ್ಲ, ವೆಂಟಿಲೇಟರ್ ಇಲ್ಲ ಎಂದು ಡಿಸ್ಚಾರ್ಜ್‍ಮಾಡಿ ಹೋಗಪ್ಪ ಅಂತ ರಸ್ತೆಯಲ್ಲಿ ಬಿಟ್ಟರೆ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಎಚ್ಚರಿಕೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಯವರು ರೋಗಿಗಳನ್ನು ಟ್ರೀಟ್ ಮಾಡಿದ ಬಳಿಕ ಅವರ ಬಗ್ಗೆ ಕೇರ್ ತೆಗೆದುಕೊಳ್ಳಬೇಕು, ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ಡಿಸ್ಚಾರ್ಜ್‍ಮಾಡಿ ಹೋಗಪ್ಪ ಅಂತ ರಸ್ತೆಯಲ್ಲಿ ಬಿಟ್ಟರೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಖಾಸಗಿ ಆಸ್ಪತ್ರೆಯೊಂದರಲ್ಲಿ ಆಕ್ಸಿಜನ್ ಸಮಸ್ಯೆ ಉಂಟಾಗಿತ್ತು. ಸಂಜೆ ವೇಳೆಗೆ ಆಕ್ಸಿಜನ್ ಸಿಗದಿದ್ದರೆ ಕಷ್ಟ ಎಂದು ಆಸ್ಪತ್ರೆಯ ಮುಖ್ಯಸ್ಥ ವೈದ್ಯರು ಹೇಳಿದ್ದರು. ಕೆಲ ಸೋಂಕಿತರನ್ನ ಬೇರೆ ಆಸ್ಪತ್ರೆಗೆ ರವಾನಿಸಿ, ಉಳಿದ ಸೋಂಕಿತರ ಸಂಬಂಧಿಕರಿಗೆ ಬೇರೆ ಕಡೆ ಕರೆದುಕೊಂಡು ಹೋಗಲು ಮನವಿ ಮಾಡುತ್ತೇವೆ. ಸರ್ಕಾರ ಆಕ್ಸಿಜನ್ ಪೂರೈಸುತ್ತಿಲ್ಲ ಎಂದು ಆರೋಪಿಸಿದ್ದರು. ಜಿಲ್ಲಾಧಿಕಾರಿ ರಮೇಶ್, ಖಾಸಗಿ ಆಸ್ಪತ್ರೆಗಳು ಸೌಲಭ್ಯಗಳು ಹಾಗೂ ಅವಶ್ಯಕತೆಗಳಿಗೆ ಅನುಗುಣವಾಗಿ ರೋಗಿಗಳನ್ನು ತುಂಬಿಸಬೇಕು. ಕಮರ್ಷಿಯಲ್ ಆಧಾರದಲ್ಲಿ ಪೇಶೆಂಟ್‍ಗಳನ್ನ ತೆಗೆದುಕೊಳ್ಳಬಾರದು ಎಂದು ಸೂಚಿಸಿದ್ದಾರೆ.

ಸರ್ಕಾರದಿಂದ ಈವರೆಗೆ ನಾವು ಖಾಸಗಿ ಆಸ್ಪತ್ರೆಗೆ ಯಾವ ಸೋಂಕಿತರನ್ನೂ ರೆಫರ್ ಮಾಡಿಲ್ಲ. ಖಾಸಗಿ ಆಸ್ಪತ್ರೆಗಳು 50 ಪಸೆರ್ಂಟ್ ಕೋಟಾ ಖಾಲಿ ಇಡಬೇಕು ಇಟ್ಟಿದ್ದಾರೆ ಎಂದು ನಂಬಿದ್ದೇವೆ ಎಂದರು. ಒಂದು ವೇಳೆ, ಖಾಸಗಿ ಆಸ್ಪತ್ರೆಯ ಯಾವುದೇ ರೋಗಿಗಳಿಗೆ ತೀವ್ರ ಸಮಸ್ಯೆಯಾದಾಗ ಜೀವ ಹೋಗಬಾರದು ಎಂದು ಮಾನವೀಯತೆ ದೃಷ್ಟಿಯಿಂದ ಸರ್ಕಾರ ಸ್ಪಂದಿಸುತ್ತೆ. ಆದರೆ ಖಾಸಗಿ ಆಸ್ಪತ್ರೆಯವರು ತಮ್ಮ ಎಲ್ಲಾ ಸೌಲಭ್ಯಗಳಿಗೆ ಅನುಗುಣವಾಗಿ ರೋಗಿಗಳನ್ನು ತೆಗೆದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆ ಬರಬಾರದು ಎಂದು ನಾವು ಮುಂಜಾಗೃತ ಕ್ರಮ ಕೈಗೊಂಡಿದ್ದೇವೆ. ಪ್ರತಿ ದಿನ ಬೆಳಗ್ಗೆ-ಸಂಜೆ ಎಷ್ಟು ಆಕ್ಸಿಜನ್ ಇದೆ. ಎಷ್ಟ ಬಳಕೆ ಆಗುತ್ತಿದೆ. ಇರುವ ಸ್ಟಾಕ್ ಎಷ್ಟು ದಿನ-ಗಂಟೆ ಬರುತ್ತೆ ಎಂದು ಮಾನೀಟರ್ ಮಾಡಿ, ಕಾಲ-ಕಾಲಕ್ಕೆ ಆಕ್ಸಿಜನ್ ತರಿಸುತ್ತಿದ್ದೇವೆ. ಏಪ್ರಿಲ್ 19ರಂದು 49ಪ್ರಕರಣಗಳಿದ್ದವು. ಆದರೆ ಇಂದು 1009 ಪ್ರಕರಣಗಳಿವೆ. ದಿನೇ-ದಿನೇ ಆಕ್ಸಿಜನ್ ಹೆಚ್ಚಾಗಿ ಬೇಕಾಗುತ್ತಿದೆ. ಇಂದಿಗೂ ಜಿಲ್ಲಾದ್ಯಂತ ಎಲ್ಲೂ ಸಮಸ್ಯೆ ಆಗಬಾರದೆಂದು ತಂಡ ಮಾಡಿ ಹಗಲಿರುಳು ಪೂರೈಕೆ ವ್ಯವಸ್ಥೆ ಮಾಡಿದ್ದೇವೆ. ಖಾಸಗಿ ಆಸ್ಪತ್ರೆಯಲ್ಲಿ ಕೊರತೆ ಇದೆ ಎಂದು ಫೋನ್ ಬರುತ್ತಿದೆ. ಖಾಸಗಿ ಆಸ್ಪತ್ರೆಗಳು 50 ಪಸೆರ್ಂಟ್ ಕೋಟಾ ಖಾಲಿ ಇಡಬೇಕು, ಇಟ್ಟಿದ್ದಾರೆ ಎಂದು ನಂಬಿದ್ದೇವೆ ಪರೀಶಿಲನೆ ತಂಡಗಳನ್ನೂ ಕಳಿಸಿದ್ದೇವೆ. ಖಾಸಗಿ ಆಸ್ಪತ್ರೆಗಳು ಆಕ್ಸಿಜನ್ ಕೆಪಾಸಿಟಿ ಪೂರೈಸುವ ಕೆಪಾಸಿಟಿ ಆಧಾರದ ಮೇಲೆ ಪೇಶೆಂಟ್‍ಗಳನ್ನ ತೆಗೆದುಕೊಳ್ಳಬೇಕು ಎಂದಿದ್ದಾರೆ.

Share This Article