ಅಬುಧಾಬಿ: ಐಪಿಎಲ್ 2020ರ ಆವೃತ್ತಿಯ ಡೆಬ್ಯು ಪಂದ್ಯದಲ್ಲಿ ಸೋಲುಂಡಿರುವ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತಾ ತಂಡಗಳು ಇಂದಿನ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಎರಡೂ ತಂಡಗಳಲ್ಲಿ ಕೆಲ ಬದಲಾವಣೆಗಳುವ ಸಾಧ್ಯತೆ ಇದೆ.
Advertisement
ಕೆಕೆಆರ್ ತನ್ನ ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ 49 ರನ್‍ಗಳಿಂದ ಕಳೆದುಕೊಂಡರೆ, ಆರ್‌ಸಿಬಿ ವಿರುದ್ಧ ಎಸ್‌ಆರ್‌ಎಚ್ 10 ರನ್‍ಗಳಿಂದ ಸೋಲುಂಡಿತ್ತು. ಇಂದು ಸೋಲಿನ ಕಹಿ ಅನುಭವಿಸಿದ್ದ ಇತ್ತಂಡಗಳು ಮುಖಾಮುಖಿ ಆಗುತ್ತಿರುವುದರಿಂದ ಯಾರಿಗೆ ಗೆಲುವು ಸಿಗಲಿದೆ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ. ಇದನ್ನೂ ಓದಿ: ಸನ್ ರೈಸರ್ಸ್‍ಗೆ ಆರಂಭಿಕ ಆಘಾತ – ಐಪಿಎಲ್‍ನಿಂದ ಮಿಚೆಲ್ ಮಾರ್ಷ್ ಔಟ್
Advertisement
ಇದುವರೆಗೂ ಇತ್ತಂಡಗಳು 17 ಬಾರಿ ಮುಖಾಮುಖಿಯಾಗಿದ್ದು, 10 ಕೋಲ್ಕತ್ತಾ, 7 ಪಂದ್ಯಗಳಲ್ಲಿ ಹೈದರಾಬಾದ್ ಗೆಲವು ಪಡೆದಿದೆ. ಅನುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ 2 ಪಂದ್ಯಗಳನ್ನು ಗಮನಿಸುವುದಾದರೇ ಪಿಚ್ ಬ್ಯಾಟ್ಸ್ ಮನ್ ಮತ್ತು ಬೌಲರ್ ಗಳಿಗೆ ಸಹಕಾರಿಯಾಗಿದೆ. ಟಾಸ್ ಗೆದ್ದ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಕ್ರೀಡಾಂಗಣದಲ್ಲಿ ಸರಾಸರಿ 150 ಮೊತ್ತದಲ್ಲಿ ಟಾರ್ಗೆಟ್ ಲಭಿಸಿದೆ.
Advertisement
Matchday 2️⃣ and ready to get back into the groove!
Come on Knights! ????????#KKRHaiTaiyaar #Dream11IPL #KKRvSRH @RealShubmanGill pic.twitter.com/agdnW5suW5
— KolkataKnightRiders (@KKRiders) September 26, 2020
Advertisement
ಟೂರ್ನಿಯ ಆರಂಭದಲ್ಲೇ ಆಸೀಸ್ ಆಟಗಾರ ಮಿಚೆಲ್ ಮಾರ್ಷ್ ಗಾಯದ ಮಸ್ಯೆಯಿಂದ ಟೂರ್ನಿಯಿಂದ ಹೊರಗುಳಿದ ಪರಿಣಾಮ ಹೈದರಾಬಾದ್ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ಮಾರ್ಷ್ ಸ್ಥಾನಕ್ಕೆ ಜೇಸನ್ ಹೋಲ್ಡರ್ ಆಗಮಿಸಿದ್ದಾರೆ. ಗಾಯದ ಸಮಸ್ಯೆಯಿಂದ 2017ರ ಐಪಿಎಲ್ ಟೂರ್ನಿಯಿಂದ ಹೊರ ನಡೆದಿದ್ದ ಮಾರ್ಷ್ 2ನೇ ಬಾರಿಗೆ ಐಪಿಎಲ್‍ನಿಂದ ದೂರವಾಗಿದ್ದಾರೆ.
1️⃣ day to go for #KKRvSRH ????????
Watch Trevor Bayliss’ views on the KKR clash ⚔️#OrangeArmy #KeepRising #Dream11IPL #IPL2020 pic.twitter.com/L7CVS26FwV
— SunRisers Hyderabad (@SunRisers) September 25, 2020
ಕೋಲ್ಕತ್ತಾ ತಂಡ ವಿಶ್ವದರ್ಜೆಯ ಆಟಗಾರರನ್ನು ಹೊಂದಿದ್ದು, ದಿನೇಶ್ ಕಾರ್ತಿಕ್, ಆ್ಯಂಡ್ರೆ ರಸೆಲ್, ಕಮಿನ್ಸ್, ಸುನಿಲ್ ನಾರಾಯಣ್ ಸೇರಿದಂತೆ ಪಂದ್ಯ ಗೆಲ್ಲಿಸಿಕೊಡುವ ಸಾಮಥ್ರ್ಯವಿರುವ ಆಟಗಾರರನ್ನು ಹೊಂದಿದೆ. ಯುವ ಆಟಗಾರ ಶುಭಮನ್ ಗಿಲ್, ನಿತೀಶ್ ರಾಣಾ ಸೇರಿದಂತೆ ಮಾರ್ಗನ್ ಅವರು ತಮ್ಮ ಲಯಕ್ಕೆ ಮರಳಬೇಕಿದೆ. ಬೌಲಿಂಗ್ ವಿಭಾಗದಲ್ಲಿ ಕಮಿನ್ಸ್ ಕಳೆದ ಪಂದ್ಯದಲ್ಲಿ ಭರವಸೆ ಮೂಡಿಸಿದ್ದು, ಶಿವಂ ಮಾವಿ, ಕುಲದೀಪ್ ಯಾದವ್ ತಂಡದ ಗೆಲುವಿಗೆ ಕಾಣಿಕೆ ನೀಡಬೇಕಿದೆ.
Firing on all cylinders as we gear up for tomorrow’s #KKRvSRH action! ????????????#KKRHaiTaiyaar #Dream11IPL pic.twitter.com/h15Ew4sa8a
— KolkataKnightRiders (@KKRiders) September 25, 2020
ಹೈದರಾಬಾದ್ ತಂಡ ಉತ್ತಮ ಬ್ಯಾಟಿಂಗ್ ಲೈನ್‍ಅಪ್ ಹೊಂದಿದ್ದರು ಕೂಡ ಕಳೆದ ಪಂದ್ಯದಲ್ಲಿ ಆರ್ ಸಿಬಿ ಬೌಲಿಂಗ್ ವಿರುದ್ಧ ದಿಢೀರ್ ಕುಸಿತ ಕಂಡಿತ್ತು. ವಾರ್ನರ್ ಅನೂಹ್ಯ ರೀತಿಯಲ್ಲಿ ರನೌಟ್ ಆಗಿದ್ದು ಬಹುದೊಡ್ಡ ಪೆಟ್ಟು ನೀಡಿತ್ತು. ಕೇವಲ 32 ಎಸೆಗಳಲ್ಲಿ 7 ವಿಕೆಟ್ ಕಳೆದುಕೊಂಡಿದ್ದ ಹೈದರಾಬಾದ್ ಸೋಲುಂಡಿತ್ತು. ಈ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್‍ಗೆ ಅವಕಾಶ ಲಭಿಸೋ ನಿರೀಕ್ಷೆ ಇದೆ. ಭುವನೇಶ್ವರ್ ನೇತೃತ್ವದ ಬೌಲಿಂಗ್ ಪಡೆಯಲ್ಲಿ ಖಲೀಲ್ ಅಹಮದ್, ರಶೀದ್ ಖಾನ್, ಸಿದ್ಧಾರ್ಥ್ ಕೌಲ್ ಮಿಂಚುವ ಅಗತ್ಯವಿದೆ.
Say ???? to @Jaseholder98, #OrangeArmy! #ReturnOfTheRiser #KeepRising #IPL2020 pic.twitter.com/jqlfpuKw7B
— SunRisers Hyderabad (@SunRisers) September 26, 2020
ಸಂಭಾವ್ಯ ತಂಡ:
ಹೈದರಾಬಾದ್: ಸುನಿಲ್ ನರೇನ್, ಶುಭ್‍ಮನ್ ಗಿಲ್, ನಿತಿಶ್ ರಾಣಾ, ಮಾರ್ಗನ್, ಆ್ಯಂಡ್ರೆ ರಸೆಲ್, ದಿನೇಶ್ ಕಾರ್ತಿಕ್ (ನಾಯಕ), ಕಮಿನ್ಸ್, ಕುಲ್ದೀಪ್ ಯಾದವ್, ಸಂದೀಪ್, ಶಿವಂ ಮಾವಿ, ನಿಖಿಲ್ ನಾಯ್ಕ್.
ಕೋಲ್ಕತ್ತಾ: ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್ಸ್ಟೋವ್, ಮನೀಷ್ ಪಾಂಡೆ, ವಿಜಯ್ ಶಂಕರ್, ಪ್ರಿಯಮ್ ಗಾರ್ಗ್, ಅಭಿಶೇಕ್ ಶರ್ಮಾ, ರಷೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ದಾರ್ಥ್ ಕೌಲ್, ಸಂದೀಪ್ ಶರ್ಮಾ, ಜೇಸನ್ ಹೋಲ್ಡರ್.