ಬೀದರ್: ಸಚಿವ ಪ್ರಭು ಚವ್ಹಾಣ್ ಉಸ್ತುವಾರಿ ವಹಿಸಿಕೊಂಡಿರುವ ಬೀದರ್ ಜಿಲ್ಲೆಯಲ್ಲಿ ರೈತರು, ನಾಟಿ ಮಾಡಲು ಸೋಯಾ ಬೀಜ ಸಿಗದಿದ್ದಕ್ಕೆ ನೊಂದು ಕೃಷಿ ಅಧಿಕಾರಿಯನ್ನು ರೈತ ಸಂಪರ್ಕ ಕೇಂದ್ರದ ಗೇಟಿಗೆ ಕಟ್ಟಿ ಹಾಕಿ ಆಕ್ರೋಶ ಹೊರಹಾಕಿದ್ದಾರೆ.
Advertisement
ಬೀದರ್‍ನ ರೈತರು ನಾಟಿ ಮಾಡಲು ಬೀಜ ಸಿಗದೆ ನೊಂದು ಹೋಗಿದ್ದಾರೆ. ಕಳೆದ ಒಂದು ವಾರದಿಂದ ಔರಾದ್ ತಾಲೂಕಿನ ರೈತ ಸಂಪರ್ಕ ಕೇಂದ್ರಕ್ಕೆ ಬಿತ್ತನೆ ಬೀಜಕ್ಕಾಗಿ ಕುಗ್ರಾಮಗಳ ಹಾಗೂ ತಾಂಡಾದ ರೈತರು ಅಲೆದು ಅಲೆದು ಸುಸ್ತಾಗಿ ಹೋಗಿದ್ದಾರೆ. ಇದರಿಂದ ಆಕ್ರೋಶಗೊಂಡು ಇಂದು ಬೀಜ ಸಿಗದಿದಕ್ಕೆ ರೈತರು ಅಧಿಕಾರಿಯನ್ನು ಗೇಟಿಗೆ ಕಟ್ಟಿ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಬೀದರ್‌ನಲ್ಲಿ ಅಪರೂಪದ ನೀಲ್‍ಗಾಯ್ ಪ್ರತ್ಯಕ್ಷ- ರೈತರಲ್ಲಿ ಆತಂಕ
Advertisement
Advertisement
ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ ಭೀಮರಾವ್ ಶಿಂಧೆಯನ್ನು ಗೇಟಿಗೆ ಕಟ್ಟಿ ಹಾಕಿ ರೈತರು ಬೀತ್ತನೆ ಬೀಜಕ್ಕಾಗಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಮೊದಲೇ ಕೋವಿಡ್ ನಿಂದ ಸಂಕಷ್ಟ ಅನುಭವಿಸುತ್ತಿರುವ ರೈತರು, ಕೃಷಿ ಅಧಿಕಾರಿಗಳ ಮಹಾ ನಿರ್ಲಕ್ಷ್ಯಕ್ಕೆ ಬೇಸತ್ತು ಹೋಗಿ ಅಧಿಕಾರಿಗಳ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.
Advertisement