ಮುಂಬೈ: ಸೋನು ಸೂದ್ ಎಂದರೆ ಒಂದು ಭರವಸೆ ಎನ್ನುವ ನಂಬಿಕೆ ಜನರಲ್ಲಿ ಮೂಡಿದೆ. ಆದರೆ ಆ ನಂಬಿಕೆಯನ್ನೇ ದುರ್ಬಳಕೆ ಮಾಡಿಕೊಳ್ಳುವ ಜಾಲಗಳು ಹುಟ್ಟಿಕೊಂಡಿವೆ. ಈ ಕುರಿತಾಗಿ ಸೋನು ಅವರು ಟ್ವೀಟ್ ಮಾಡಿದ್ದಾರೆ.
Oxygen on your way ???????? pic.twitter.com/HCvuzGry3u
— sonu sood (@SonuSood) May 16, 2021
Advertisement
ದೇಶಾದ್ಯಂತ ಕೊರೊನಾ ವೈರಸ್ ಎರಡನೇ ಅಲೇ ಜೋರಾಗಿ ಹಬ್ಬಿರುವ ಈ ಸಂದರ್ಭದಲ್ಲಿ ಅನೇಕರಿಗೆ ಸೋನು ಸೂದ್ ನೆರವು ನೀಡುತ್ತಿದ್ದಾರೆ. ಆಕ್ಸಿಜನ್, ಔಷಧಿ, ಬೆಡ್ ವ್ಯವಸ್ಥೆ ಸೇರಿದಂತೆ ಅನೇಕ ಸಹಾಯಗಳನ್ನು ಅವರು ಮಾಡುತ್ತಿದ್ದಾರೆ. ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಜನರಿಂದ ಹಣ ಕಬಳಿಸಲು ಕೆಲವರು ಸ್ಕೆಚ್ ಹಾಕಿದ್ದಾರೆ. ಈ ಮೋಸದ ಜಾಲದ ಬಗ್ಗೆ ಸ್ವತಃ ಸೋನು ಸೂದ್‍ಗೆ ಈಗ ಮಾಹಿತಿ ಸಿಕ್ಕಿದೆ.
Advertisement
???? WARNING ???? pic.twitter.com/ADnycHK0f2
— sonu sood (@SonuSood) May 17, 2021
Advertisement
ಸೋನು ಸೂದ್ ಅವರ ತಂಡಕ್ಕೆ ನೀವು ದೇಣಿಗೆ ನೀಡಬಹುದು. ಒಂದು ರೂಪಾಯಿಯಿಂದ ನಿಮಗೆ ಎಷ್ಟು ಸಾಧ್ಯವೋ ಅಷ್ಟು ಹಣವನ್ನು ನೀಡಬಹುದು. ಈ ಕೆಳಗಿನ ನಂಬರ್‍ಗೆ ಫೋನ್‍ಪೇ ಮಾಡಿ ಎಂದು ಬರೆದಿರುವ ಫೋಸ್ಟರ್ ಇಂಟರ್ನೆಟ್ನಲ್ಲಿ ಹರಿದಾಡುತ್ತಿದೆ. ಸೋನು ಸೂದ್ ಅವರ ಫೋಟೋ ಕೂಡ ಇದೆ. ಸೋಶಿಯಲ್ ಮೀಡಿಯಾದಲ್ಲಿ ಅದರ ಸ್ಕ್ರೀನ್ ಶಾಟ್ ಹಂಚಿಕೊಂಡಿರುವ ಸೋನು ಸೂದ್ ಅವರು ಫೇಕ್ ಎಂದು ಹೇಳಿದ್ದಾರೆ. ಇಂಥ ಜಾಲದ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ಜನರಿಗೆ ಅವರು ವಾನಿರ್ಂಗ್ ನೀಡಿದ್ದಾರೆ.