– ಎಲ್ಲ ಪ್ಲಾನ್ ಮಾಡಿದ್ರೂ ಜೈಲು ಸೇರಿದ್ದೇಗೆ ಲೇಡಿ ಆ್ಯಂಡ್ ಟೀಂ?
– ಕೊಲೆಗೆ ಕೊಲೆ ಅಂತ ಹಠ ಹಿಡಿದಿದ್ದ ಲೇಡಿ
ಮುಂಬೈ: ಸೋದರನನ್ನ ಕೊಂದಿದ್ದ ಹಂತಕನನ್ನ ಕೊಲೆ ಮಾಡಲು ಪಣ ತೊಟ್ಟಿದ್ದ ಯುವತಿ ಮತ್ತು ಆಕೆಯ ಗ್ಯಾಂಗ್ ಜೈಲು ಸೇರಿದೆ. ಸತತ ಒಂದು ವರ್ಷದಿಂದ ಕೊಲೆಗೆ ಯುವತಿಪ್ಲಾನ್ ಮಾಡಿಕೊಂಡಿದ್ದರೂ, ಪೊಲೀಸರ ಕ್ಷಿಪ್ರ ಕಾರ್ಯಚರಣೆಯಿಂದ ಆರೋಪಿ ಪ್ರಾಣಾಪಾಯದಿಂದ ಪಾರಾಗಿ ನಿಟ್ಟುಸಿರು ಬಿಟ್ಟಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹಿಳೆ ಸೇರಿದಂತೆ ಆರು ಜನರನ್ನ ಬಂಧಿಸಿದ್ದಾರೆ.
Advertisement
ಕೊಲೆ ಪ್ರತೀಕಾರಕ್ಕೆ ತಂಗಿಯ ಶಪಥ: ಜೂನ್ 2020ರಲ್ಲಿ ಮುಂಬೈನ ಮಲಾಡ್ ನಲ್ಲಿ ಪಾರ್ಕಿಂಗ್ ವಿಚಾರವಾಗಿ ಮೊಹ್ಮದ್ ಸಾದಿಕ್ ಮತ್ತು ಅಲ್ತಾಫ್ ಶೇಖ್ ಮಧ್ಯೆ ಗಲಾಟೆ ನಡೆದಿತ್ತು. ಗಲಾಟೆಯಲ್ಲಿ ಅಲ್ತಾಫ್ ಶೇಖ್ ನನ್ನು ಕೊಲೆಗೈದ ಸಿದ್ದಿಕಿ ಪರಾರಿಯಾಗಿ ದೆಹಲಿ ಸೇರಿಕೊಂಡಿದ್ದನು. ಸೋದರನ ಕೊಲೆಗೆ ಪ್ರತೀಕಾರ ತೆಗೆದುಕೊಳ್ಳಲು ನಿರ್ಧರಿಸಿದ ಅಲ್ತಾಫ್ ಸೋದರಿ ಯಾಸ್ಮಿನ್ ಶೇಖ್ ಸಂಚು ರೂಪಿಸಿದ್ದಳು.
Advertisement
Advertisement
ಸಿದ್ದಿಕಿಯ ಕೊಲೆಗಾಗಿ ಸೋದರನ ಗೆಳೆಯರಾದ ಫಾರೂಖ್ ಶೇಖ್ (20), ಓವೈಸ್ ಶೇಖ್ (18), ಮನೀಸ್ ಸೈಯದ್ (20), ಜಾಕೀರ್ ಖಾನ್ (32) ಮತ್ತು ಸತ್ಯಂ ಪಾಂಡೆ (23) ಎಲ್ಲರನ್ನ ಭೇಟಿಯಾಗಿ ಸೇಡು ತೀರಿಸಿಕೊಳ್ಳಲು ಸಹಾಯ ಕೇಳಿದ್ದಾಳೆ. ಎಲ್ಲರೂ ಸಹ ಯಾಸ್ಮೀನ್ ಪ್ಲಾನ್‍ಗೆ ಕೈ ಜೋಡಿಸಿದ್ದಾರೆ.
Advertisement
ದೆಹಲಿಯಿಂದ ಬರುವಂತೆ ಮಾಡಿದ್ಳು: ಯೆಸ್, ಕೊಲೆಯ ಬಳಿಕ ದೆಹಲಿ ಸೇರಿಕೊಂಡಿದ್ದ ಸಿದ್ದಿಕಿಯನ್ನ ಮುಂಬೈಗೆ ಬರುವಂತೆ ಮಾಡಲು ನಕಲಿ ಇನ್‍ಸ್ಟಾಗ್ರಾಂ ಖಾತೆಯನ್ನ ಯಾಸ್ಮಿನ್ ತೆರೆದಿದ್ದಳು. ಇನ್‍ಸ್ಟಾಗ್ರಾಂ ಮೂಲಕ ಸಿದ್ದಿಕಿ ಜೊತೆ ಸ್ನೇಹ ಬೆಳೆಸಿದ ಯಾಸ್ಮಿನ್ ಪ್ರೀತಿಯ ನಾಟಕ ಆಡಿದ್ದಾಳೆ. ತನ್ನನ್ನು ಭೇಟಿಯಾಗಲು ಮುಂಬೈಗೆ ಬರುವಂತೆ ಸಿದ್ದಿಕಿಯನ್ನ ಆಹ್ವಾನಿಸಿದ್ದಾಳೆ. ಯಾಸ್ಮಿನ್ ಸೌಂದರ್ಯಕ್ಕೆ ಮಾರು ಹೋಗಿದ್ದ ಸಿದ್ದಿಕಿ ದೆಹಲಿಯಿಂದ ಮುಂಬೈಗೆ ಓಡೋಡಿ ಬಂದಿದ್ದನು. ಶನಿವಾರ ಸಿದ್ದಿಕಿ ಮುಂಬೈಗೆ ಬರೋದು ಖಚಿತವಾಗ್ತಿದ್ದಂತೆ ಮತ್ತೆ ತನ್ನ ಟೀಂ ಜೊತೆ ಯಾಸ್ಮಿನ್ ಕೊಲೆಯ ಪ್ಲಾನ್ ಮಾಡಿದ್ದಳು.
ಬಾ ಅಂದವ್ಳು ಬರಲೇ ಇಲ್ಲ: ಸಿದ್ದಿಕಿಗೆ ಮುಂಬೈನಲ್ಲಿರುವ ಚೋಟಾ ಕಾಶ್ಮೀರದಲ್ಲಿ ಭೇಟಿಯಾಗೋದಾಗಿ ಯಾಸ್ಮಿನ್ ಹೇಳಿದ್ದಳು. ಆದ್ರೆ ಸಿದ್ದಿಕಿ ಬಂದಾಗ ಯಾಸ್ಮಿನ್ ಬದಲಾಗಿ ಆಕೆ ತಂಡದ ಐವರು ಅಂಬುಲೆನ್ಸ್ ಜೊತೆ ಬಂದಿದ್ದರು. ಸಿದ್ದಿಕಿಯನ್ನ ನೋಡಿದ ಐವರು ಆತನನ್ನ ಬಲವಂತವಾಗಿ ಅಂಬುಲೆನ್ಸ್ ಹತ್ತಿಸಿಕೊಂಡಿದ್ದಾರೆ. ಸಿದ್ದಿಕಿಯನ್ನ ವಸಾಯಿ ನಯಾಗಾಂವ್ ಬಳಿಯ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡುವ ಬಗ್ಗೆ ಪ್ಲಾನ್ ಮಾಡಿಕೊಂಡಿದ್ದರು.
ತಗ್ಲಾಕೊಂಡಿದ್ದು ಎಲ್ಲಿ?: ಜನನಿಬಿಡ ಪ್ರದೇಶದಲ್ಲಿಯೇ ಐವರು ಸಿದ್ದಿಕಿಯನ್ ಎತ್ತಾಕೊಂಡು ಹೋಗುವುದನ್ನ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಕಾರ್ಯಪ್ರವೃತ್ತರಾಗಿ ಅನುಮಾನಾಸ್ಪದವಾಗಿ ಸಂಚರಿಸುತ್ತಿರುವ ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು.
ಸಿದ್ದಿಕಿಯನ್ನ ಕರೆದೊಯ್ಯುವ ಮಾರ್ಗ ಮಧ್ಯೆಯೇ ಅಂಬುಲೆನ್ಸ್ ಇಂಧನ ಖಾಲಿಯಾಗಿ ನಿಂತಿದೆ. ಹಾಗಾಗಿ ಅಲ್ಲಿಯೇ ಇನ್ನೋವಾ ಕಾರ್ ಪಡೆದುಕೊಂಡಿದ್ದರು. ಅಲರ್ಟ್ ಆಗಿದ್ದ ಪೊಲೀಸರು ಪಶ್ಚಿಮ ಎಕ್ಸಪ್ರೆಸ್ ಹೆದ್ದಾರಿಯಲ್ಲಿ ವಾಹನ ಪರಿಶೀಲನೆ ನಡೆಸುವಾಗ ಎಲ್ಲರನ್ನ ಬಂಧಿಸಿದ್ದಾರೆ. ಐವರ ಬಂಧನದ ಬಳಿಕ ಪ್ರಕರಣದ ಮೂಲ ಸೂತ್ರಧಾರಿ ಯಾಸ್ಮಿಳನ್ನ ಸಹ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.