– ಮಣಿಪಾಲ ಕಾಲೇಜು ಕ್ಯಾಂಪಸ್‍ನಲ್ಲಿ ಕೊರೊನಾ
ಉಡುಪಿ: ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚಾಗ್ತಾನೇ ಸಾಗ್ತಿದೆ. ಮಣಿಪಾಲ ವಿವಿ ಕ್ಯಾಂಪಸ್ ಕೊರೊನಾ ಹಾಟ್‍ಸ್ಪಾಟ್ ಆಗಿ ಪರಿಣಮಿಸಿದೆ.
ಹೌದು. ಶ್ರೀ ಕೃಷ್ಣನ ನಗರಿ ಉಡುಪಿಯಲ್ಲಿ ಕೊರೊನಾ ಮಹಾಮಾರಿ ತಾಂಡವವಾಡುತ್ತಿದ್ದು, ಪಾಸಿಟಿವ್ ಕೇಸ್‍ಗಳ ಸಂಖ್ಯೆ ಮೂರಂಕಿಯತ್ತ ಮುನ್ನುಗ್ಗುತ್ತಿದೆ.. ಅದರಲ್ಲೂ ಮಣಿಪಾಲ ವಿವಿಯ ಎಂಐಟಿ ಎಂಜಿನಿಯರಿಂಗ್ ಕ್ಯಾಂಪಸ್‍ನಲ್ಲಿ ಕೇರಳ, ಮಹಾರಾಷ್ಟ್ರದ ಹೆಮ್ಮಾರಿ ಸ್ಫೋಟಗೊಂಡಿದೆ.
ಸದ್ಯ ವಿವಿ ಕ್ಯಾಂಪಸನ್ನ ಜಿಲ್ಲಾಡಳಿತದ ಸೂಚನೆಯಂತೆ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಐಡಿ ಕಾರ್ಡ್ ಇದ್ದವರಿಗೆ ಮಾತ್ರ ಕ್ಯಾಂಪಸ್‍ಗೆ ಎಂಟ್ರಿ ಕೊಡಲಾಗ್ತಿದೆ. 5 ಸಾವಿರ ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತ ದಿನಕ್ಕೆ ಒಂದೂವರೆ ಸಾವಿರದಂತೆ ಒಂದು ವಾರಗಳ ಕಾಲ ಕ್ಯಾಂಪಸ್‍ನಲ್ಲಿ ಕೊರೊನಾ ಟೆಸ್ಟ್ ಗೆ ಮುಂದಾಗಿದೆ. ಆದರೆ ವಿದ್ಯಾರ್ಥಿಗಳು ಟೆಸ್ಟ್ ಮಾಡಿಸಿಕೊಳ್ಳಲು ಹಿಂದೇಟು ಹಾಕ್ತಿದ್ದಾರೆ.
ಮತ್ತೊಂದ್ಕಡೆ ಹೊರ ರಾಜ್ಯದಿಂದ ಬರುವವರು, ಸಾರ್ವಜನಿಕ ಸ್ಥಳ, ಸಮಾರಂಭಗಳ ಮೇಲೆ ಜಿಲ್ಲಾಡಳಿತ ಕಣ್ಣಿಟ್ಟಿದೆ. ಮಾಸ್ಕ್ ಸಾಮಾಜಿಕ ಅಂತರ ಸ್ಯಾನಿಟೈಸ್ ಕಡ್ಡಾಯಗೊಳಿಸಲಾಗಿದೆ. ಉಡುಪಿಯಲ್ಲಿ ಕೊರೊನಾ ಎರಡನೇ ಅಲೆ ಮರುಕಳಿಸಲು ಅವಕಾಶ ಕೊಡಬೇಡಿ ಅಂತ ಡಿಹೆಚ್‍ಓ ಡಾ.ಸುಧೀರ್ ಚಂದ್ರಚೂಡ ಮನವಿ ಮಾಡಿಕೊಂಡಿದ್ದಾರೆ.
ವಿದೇಶದಿಂದ ವಾಪಸ್ಸಾದವರ ಮಾಹಿತಿ ಕಲೆ ಹಾಕಲಾಗ್ತಿದೆ. ಕೊರೊನಾ ಲಕ್ಷಣಗಳು ಕಂಡು ಬಾರದಿದ್ದರೂ, ಅವರ ಕುಟುಂಬಸ್ಥರು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕಡ್ಡಾಯ ಐಸೋಲೇಶನ್‍ಗೆ ಒಳಪಡಿಸಲಾಗ್ತಿದೆ. ಈ ನಡುವೆ ಭಾನುವಾರ ಜಿಲ್ಲೆಯಲ್ಲಿ 170 ಪಾಸಿಟಿವ್ ಕೇಸ್‍ಗಳು ದಾಖಲಾಗಿವೆ. ಈ ಪೈಕಿ ಮಣಿಪಾಲ ಎಂಐಟಿ ಕ್ಯಾಂಪಸ್‍ನ 164 ವಿದ್ಯಾರ್ಥಿಗಳಿಗೆ ಕೊರೊನಾ ವಕ್ಕರಿಸಿದೆ.