– ರಾಜ್ಯದಲ್ಲಿ 12 ಮಂದಿ ಬಲಿ
– 12 ದಿನದ ಬಳಿಕ ಸಾವಿನ ವರದಿ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒಂದು ಕಡೆ ಸೋಂಕು ಹೆಚ್ಚಳವಾಗುತ್ತಿದ್ದರೆ ಇನ್ನೊಂದು ಕಡೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಗುರುವಾರ ಒಂದೇ ದಿನ ರಾಜ್ಯದಲ್ಲಿ 12 ಸಾವಿನ ಪ್ರಕರಣ ವರದಿಯಾಗಿದ್ದು ಈ ಪೈಕಿ 8 ಮಂದಿ ಬೆಂಗಳೂರಿನವರೇ ಆಗಿದ್ದಾರೆ. ಒಟ್ಟು ರಾಜ್ಯದಲ್ಲಿ 114 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
Advertisement
ಬೆಂಗಳೂರಿನಲ್ಲಿ ಇಲ್ಲಿಯವರೆಗೆ 844 ಮಂದಿಗೆ ಸೋಂಕು ಬಂದಿದ್ದು, 51 ಮಂದಿ ಮೃತಪಟ್ಟಿದ್ದಾರೆ. ಇಂದು 14 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು408 ಸಕ್ರಿಯ ಪ್ರಕರಣಗಳಿದ್ದು, 384 ಮಂದಿ ಬೆಂಗಳೂರಿನಲ್ಲಿ ಬಿಡುಗಡೆಯಾಗಿದ್ದಾರೆ. ಇಂದು ಬಿಡುಗಡೆಯಾದ ವರದಿಯಲ್ಲಿ ಜೂನ್ 6ಕ್ಕೆ ಮೃತಪಟ್ಟ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಲಾಗಿದೆ.
Advertisement
Advertisement
ಮೃತರ ವಿವರ:
1. ಬಿಹಾರ್‌ನಿಂದ ಮರಳಿದ ಹಿನ್ನೆಲೆ ಹೊಂದಿದ್ದ 57 ವರ್ಷದ ರೋಗಿ ಜೂನ್ 3 ರಂದು ಆಸ್ಪತ್ರೆಗೆ ದಾಖಲಾಗಿದ್ದು ಜೂನ್ 6 ರಂದು ಮೃತಪಟ್ಟಿದ್ದಾರೆ.
Advertisement
2. ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿದ್ದ 58 ವರ್ಷದ ಬೆಂಗಳೂರಿನ ವ್ಯಕ್ತಿ ಬಳ್ಳಾರಿಗೆ ಪ್ರಯಾಣಿಸಿದ ಹಿನ್ನೆಲೆ ಹೊಂದಿದ್ದು, ಜೂನ್ 6 ರಂದು ಆಸ್ಪತ್ರೆಗೆ ದಾಖಲಾಗಿ ಜೂನ್ 13 ರಂದು ಸಾವನ್ನಪ್ಪಿದ್ದಾರೆ.
3. ವಿಷಮಶೀತ ಜ್ವರ, ಕೆಮ್ಮಿನಿಂದ ಬಳಲುತ್ತಿದ್ದ 39 ವರ್ಷದ ಬೆಂಗಳೂರಿನ ವ್ಯಕ್ತಿ ಜೂನ್ 6 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಜೂನ್ 14 ರಂದು ಮರಣ ಹೊಂದಿದ್ದಾರೆ.
4. 40 ವರ್ಷದ ಬೆಂಗಳೂರಿನ ಮಹಿಳೆ ಜೂನ್ 8 ರಂದು ಆಸ್ಪತ್ರೆಗೆ ದಾಖಲಾಗಿ ಅಂದೇ ಮೃತಪಟ್ಟಿದ್ದಾರೆ.
5. 68 ವರ್ಷದ ವ್ಯಕ್ತಿ ಉಸಿರಾಟದ ಸಮಸ್ಯೆ ಮತ್ತು ಜ್ವರದಿಂದ ಬಳಲುತ್ತಿದ್ದರು. ಜೂನ್ 11 ರಂದು ಆಸ್ಪತ್ರೆಗೆ ಅಡ್ಮಿಟ್ ಆಗಿದ್ದ ಇವರು ಜೂನ್ 13 ರಂದು ಸಾವನ್ನಪ್ಪಿದ್ದಾರೆ.
6. ಉಸಿರಾಟ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ 50 ವರ್ಷದ ಕೊಪ್ಪಳ ಜಿಲ್ಲೆಯ ಮಹಿಳೆ ಜೂನ್ 13 ರಂದು ಆಸ್ಪತ್ರೆಗೆ ದಾಖಲಾಗಿ ಜೂನ್ 17 ರಂದು ಮೃತಪಟ್ಟಿದ್ದಾರೆ.
7. ಮಧುಮೇಹ ಮತ್ತು ರಕ್ತದೊತ್ತಡದಿಂದ ಬಳಲುತ್ತಿದ್ದ ಬೆಂಗಳೂರಿನ ವ್ಯಕ್ತಿ ಜೂನ್ 14 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಜೂನ್ 15ರಂದು ಮೃತಪಟ್ಟಿದ್ದಾರೆ.
8. ಬೆಂಗಳೂರಿನ 65 ವರ್ಷದ ಮಹಿಳೆಗೆ ಜ್ವರ ಮತ್ತು ರಕ್ತದೊತ್ತಡ ಇತ್ತು. ಜೂನ್ 13 ರಂದು ಆಸ್ಪತ್ರೆಗೆ ದಾಖಲಾಗಿದ್ದ ಇವರು ಜೂನ್ 17 ರಂದು ಮರಣ ಹೊಂದಿದ್ದಾರೆ.
9. ವಿಷಮಶೀತ ಜ್ವರದಿಂದ ಬಳಲುತ್ತಿದ್ದ 31 ವರ್ಷದ ಬೆಂಗಳೂರಿನ ವ್ಯಕ್ತಿ ಜೂನ್ 13 ರಂದು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದು, ಜೂನ್ 18 ರಂದು ಮೃತಪಟ್ಟಿದ್ದಾರೆ.
10. ಬೀದರ್ ಕಂಟೈನ್‌ಮೆಂಟ್ ಜೋನ್‌ನ 55 ವರ್ಷದ ವ್ಯಕ್ತಿಗೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಜೂನ್ 8 ರಂದು ಆಸ್ಪತ್ರೆಗೆ ದಾಖಲಾಗಿದ್ದ ಇವರು ಜೂನ್ 17 ರಂದು ನಿಧನರಾಗಿದ್ದಾರೆ.
11. ಉಸಿರಾಟದ ತೊಂದರೆ, ಮಧುಮೇಹ, ರಕ್ತದೊತ್ತಡದಿಂದ ಬಳಲುತ್ತಿದ್ದ 66 ವರ್ಷದ ವಿಜಯಪುರದ ಜಿಲ್ಲೆಯ ಮಹಿಳೆ ಜೂನ್ 15 ರಂದು ದಾಖಲಾಗಿದ್ದು, ಜೂನ್ 17 ರಂದು ಮೃತಪಟ್ಟಿದ್ದಾರೆ.
12. ಜ್ವರ, ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಕಲಬುರಗಿಯ 50 ವರ್ಷದ ವ್ಯಕ್ತಿ ಜೂನ್ 13 ರಂದು ದಾಖಲಾಗಿ ಜೂನ್ 15 ರಂದು ಮೃತಪಟ್ಟಿದ್ದಾರೆ.
ಐಸಿಯುನಲ್ಲಿ ಒಟ್ಟು 73 ಮಂದಿ ಇದ್ದು ಬೆಂಗಳೂರು ನಗರದಲ್ಲೇ 33 ಮಂದಿ ಇದ್ದಾರೆ. ಕಲಬರುಗಿ 12, ಬೀದರ್ 5, ಬಳ್ಳಾರಿ ಮತ್ತು ಶಿವಮೊಗ್ಗದಲ್ಲಿ ತಲಾ 4, ಧಾರವಾಡ, ದಾವಣಗೆರೆ, ಉಡುಪಿ ಯಲ್ಲಿ ತಲಾ 3, ವಿಜಯಪುರ ಮತ್ತು ದಕ್ಷಿಣ ಕನ್ನಡದಲ್ಲಿ ತಲಾ 2, ಹಾಸನ ಮತ್ತು ಗದಗ್‌ನಲ್ಲಿ ತಲಾ ಒಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.