ಸೋಂಕಿನಿಂದ ಸಾವನ್ನಪ್ಪಿದವರ ಶವಗಳನ್ನು ಗುಂಡಿಗೆ ಬಿಸಾಕಿದ್ರು!

Public TV
1 Min Read
BLY 1 2

ಬಳ್ಳಾರಿ: ಮಹಾಮಾರಿ ಕೊರೊನಾ ವೈರಸ್ ರಾಜ್ಯಕ್ಕೆ ವಕ್ಕರಿಸಿದ ಬಳಿಕ ದಿನಕ್ಕೊಂದು ಅಮಾನವೀಯ ಘಟನೆಗಳು ನಡೆಯುತ್ತಲೇ ಇವೆ. ಇದೇ ಸಾಲಿಗೆ ಇದೀಗ ಬಳ್ಳಾರಿಯಲ್ಲೊಂದು ನಡೆದಿರುವ ಘಟನೆ ಕೂಡ ಸೇರಿಕೊಂಡಿದೆ.

BLY 2 1

ಹೌದು. ಬಳ್ಳಾರಿಯಲ್ಲಿ ಕೊರೊನಾಗೆ ಬಲಿಯಾದವರ ಶವಗಳನ್ನು ಗುಂಡಿಗೆ ಬಿಸಾಕಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಜನಸಾಮಾನ್ಯರಲ್ಲಿ ಆತಂಕ ಹೆಚ್ಚಾಗಿದೆ.

BLY 3 1

ಬಳ್ಳಾರಿಯಲ್ಲಿ ಸೋಮವಾರ ಒಂದೇ ದಿನ 9 ಮಂದಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಒಂದೇ ಜಾಗದಲ್ಲಿ ಶವ ಸಂಸ್ಕಾರ ಮಾಡಿದೆ. ಬಳ್ಳಾರಿಯ ಹೊರವಲಯದಲ್ಲಿ ಶವ ಸಂಸ್ಕಾರ ಮಾಡಿದ್ದು, ಇದರ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

BLY 6

ಈ ಮೂಲಕ ಕೊರೊನಾ ಸೋಂಕಿನಿಂದ ಸತ್ತರೆ ಹೇಗೆ ಶವಸಂಸ್ಕಾರ ಮಾಡುತ್ತಾರೆ ಎನ್ನುವುದಕ್ಕೆ ಇದೊಂದು ವಿಡಿಯೋನೇ ಸಾಕ್ಷಿಯಾಗಿದ್ದು, ಜನ ಇಲಾಖೆ ವಿರುದ್ಧ ಕಿಡಿಕಾರುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *