ಮಂಗಳೂರು: ಕೋವಿಡ್ 19 ಸೋಂಕಿನಿಂದ ಮೃತಪಟ್ಟ ಮಹಿಳೆಯ ಅಂತ್ಯ ಸಂಸ್ಕಾರವನ್ನು ಪುತ್ತೂರಿನ ಶಾಸಕ ಸಂಜೀವ ಮಠಂದೂರು ನೆರವೇರಿಸಿದ್ದಾರೆ.
ಸಮಾಜಮುಖಿ ಚಿಂತನೆಯೊಂದಿಗೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕ್ರೀಯಾಶೀಲ ಶಾಸಕರಾಗಿ ಕೆಲಸ ಮಾಡುತ್ತಿರುವ ಸಂಜೀವ ಮಠಂದೂರು, ತಮ್ಮ ವಾರ್ ರೂಮ್ ಸೇವೆಯ ಮೂಲಕ ಜನರಿಗೆ ನೆರವಾಗುವ ಕೆಲಸ ಮಾಡುತ್ತಿದ್ದಾರೆ.
ಇದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿರುವ ನಡುವೆಯೇ, ಕೋವಿಡ್‍ನಿಂದ ಮೃತಪಟ್ಟ ಮಹಿಳೆಯೊಬ್ಬರ ಮೃತ ದೇಹದ ಅಂತ್ಯ ಸಂಸ್ಕಾರವನ್ನು ಸ್ವತಃ ತಾನೇ ಮುಂಚೂಣಿಯಲ್ಲಿ ನಿಂತು ಮಾಡಿದ್ದಾರೆ. ಇದನ್ನೂ ಓದಿ : ಕೊರೊನಾ ಜಾಗೃತಿ – ಪವರ್ ಸ್ಟಾರ್ ಹೇಳಿದ 5 ಸೂತ್ರಗಳ್ಯಾವುದು ಗೊತ್ತಾ?
ಚಿಕ್ಕಪುತ್ತೂರು ಮಡಿವಾಳ ಕಟ್ಟೆ ಸ್ಮಶಾನದಲ್ಲಿ ವಾರ್ ರೂಮ್ ಸದಸ್ಯರು ಮತ್ತು ಮೃತರ ಸಂಬಂಧಿಕರೊಂದಿಗೆ ಮೃತದೇಹದ ಅಂತ್ಯಸಂಸ್ಕಾರ ವನ್ನು ನೆರವೇರಿಸಿದರು. ಈ ಮೂಲಕ ಕೋವಿಡ್‍ನಿಂದ ಮೃತಪಟ್ಟವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಶಾಸಕರಲ್ಲಿ ಜಿಲ್ಲೆಯಲ್ಲೇ ಪ್ರಥಮ ಶಾಸಕರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.