ಚಾಮರಾಜನಗರ: ಕೊರೊನಾ ಸೋಂಕಿತೆಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಚಾಮರಾಜನಗರ ತಾಲೂಕು ದೇಶಿಗೌಡನಪುರದಲ್ಲಿ ನಡೆದಿದೆ.
ಶಿವಮ್ಮ(65) ಆತ್ಮಹತ್ಯೆ ಮಾಡಿಕೊಂಡ ಸೋಂಕಿತೆ. ಪತಿ ಹಾಗೂ ಪತ್ನಿ ಇಬ್ಬರಿಗೂ ಪಾಸಿಟಿವ್ ಆಗಿತ್ತು. ಪತಿಗೆ ಉಸಿರಾಟದ ಸಮಸ್ಯೆ ಇದ್ದುದ್ದರಿಂದ ಚಾಮರಾಜನಗರ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಇತ್ತ ಪತ್ನಿ ಶಿವಮ್ಮಳಿಗೆ ರೋಗ ಲಕ್ಷಣ ಇಲ್ಲದ ಕಾರಣ ಹೋಂ ಐಸೋಲೇಷನ್ ಗೆ ಕಳುಹಿಸಲಾಗಿತ್ತು. ಪತಿಗೆ ತೀವ್ರ ಸೋಂಕಿನಿಂದ ಬೇಸತ್ತು ಪತ್ನಿ ಶಿವಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.