– ಏಪ್ರಿಲ್ ತಿಂಗಳಲ್ಲಿ 30 ದಿನ ಹೋಗಿ 31 ದಿನ ಎಂದು ನಮೂದು
ಧಾರವಾಡ: ನಗರದಲ್ಲಿ ಇಂದು ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಪಾಸಿಟಿವ್ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ತಯಾರಿಯಲ್ಲೇ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಧಾರವಾಡ ಗಾಂಧಿನಗರದ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಇವರ ಟ್ರಾವೆಲ್ ಹಿಸ್ಟರಿಯನ್ನು ಅಧಿಕಾರಿಗಳು ಯದ್ವಾತದ್ವಾ ತಯಾರಿಸಿದ್ದಾರೆ. ಅಧಿಕಾರಿಗಳ ತಪ್ಪು ನೊಡದೆಯೇ ಜಿಲ್ಲಾಧಿಕಾರಿ ಕೂಡ ಸಹಿ ಮಾಡಿ ಮುಂದಿನ ಕ್ರಮಕ್ಕೆ ರವಾನಿಸಿದ್ದಾರೆ. ಅಲ್ಲದೆ ಯಾವ ತಿಂಗಳಲ್ಲಿ ಎಷ್ಟು ದಿನಾಂಕ ಎನ್ನುವ ಪರಿಜ್ಞಾನವೂ ಇಲ್ಲದಂತೆ ಅಧಿಕಾರಿಗಳು ವರ್ತಿಸಿದ್ದಾರೆ.
Advertisement
Advertisement
ಪಾಸಿಟಿವ್ ವ್ಯಕ್ತಿಯ ಮಾಹಿತಿ ನೀಡುವ ವಿಷಯದಲ್ಲೇ ನಿರ್ಲಕ್ಷ್ಯ ವಹಿಸಿದ್ದು, ಟ್ರಾವೆಲ್ ಹಿಸ್ಟರಿಯಲ್ಲಿ ಅಧಿಕಾರಿಗಳು ಏಪ್ರಿಲ್ 31 ಎಂದು ನಮೂದು ಮಾಡಿದ್ದಾರೆ. ಆದರೆ ಏಪ್ರಿಲ್ ತಿಂಗಳಲ್ಲಿ ಇರುವುದು 30 ದಿನ ಮಾತ್ರ. ಪಾಸಿಟಿವ್ ವ್ಯಕ್ತಿ ಏಪ್ರಿಲ್ 31ರಂದು ಪುಣೆಯಿಂದ ಆಗಮನ ಎಂದು ಆತನ ಪ್ರವಾಸದ ಹಿಸ್ಟರಿಯಲ್ಲಿ ಹಾಕಲಾಗಿದ್ದು, ಮತ್ತೊಂದೆಡೆ ಪಾಸಿಟಿವ್‍ವ್ಯಕ್ತಿಯ ಒಂದು ತಿಂಗಳ ಮಾಹಿತಿಯೂ ಗೊಂದಲದ ಗೂಡಾಗಿದೆ. ಮಾರ್ಚ್ 24ರ ವರೆಗಿನ ಮಾಹಿತಿ ನೀಡಿ ನೇರವಾಗಿ ಏಪ್ರಿಲ್ 24ರ ಮಾಹಿತಿಯನ್ನು ಅಧಿಕಾರಗಳು ತಿಳಿಸಿದ್ದಾರೆ. ಮಾ.25ರಿಂದ ಏಪ್ರಿಲ್ 23ರ ವರೆಗಿನ ಮಾಹಿತಿಯೇ ಪ್ರತಿಯೇ ಲಭ್ಯವಿಲ್ಲ. ಹೀಗೆ ಟ್ರಾವೆಲ್ ಹಿಸ್ಟರಿ ವಿಚಾರದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.