-3 ದಿನವಾದ್ರೂ ಅಂತ್ಯಕ್ರಿಯೆ ಇಲ್ಲದೇ ಕೊಳೆತ ಶವ
-ಹಚ್ಚೆ ನೋಡಿ ಶವ ಗುರುತಿಸಿದ ಕುಟುಂಬಸ್ಥರು
ಚಿಕ್ಕಬಳ್ಳಾಪುರ: ಕೋವಿಡ್ ಸೋಂಕಿತ ಮೃತಪಟ್ಟು ಮೂರು ದಿನ ಕಳೆದರೂ ಮನೆಯವರಿಗೆ ಮಾಹಿತಿ ನೀಡಿಲ್ಲ ಅಂತ ಮೃತನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಆಕಾಶ್ ಆಸ್ಪತ್ರೆಯಲ್ಲಿ ನಡೆದಿದೆ.
Advertisement
ಬೆಂಗಳೂರು ನಗರ ಕೆ.ಪಿ. ಆಗ್ರಹಾರದ 56 ವರ್ಷದ ವ್ಯಕ್ತಿಯೊಬ್ಬರು ಕೋವಿಡ್-19 ಸೋಂಕು ದೃಢಪಟ್ಟ ಹಿನ್ನೆಲೆ ಜುಲೈ 30 ರ ಸಂಜೆ ಗುರುವಾರದಂದು ದೇವನಹಳ್ಳಿಯ ಆಕಾಶ್ ಆಸ್ಪತ್ರೆಗೆ ಶಿಫ್ಟ್ ಆಗಿದ್ದರು. ಶುಕ್ರವಾರ ಬೆಳಗಿನ ಜಾವ ಸೋಂಕಿತ ಮೃತಪಟ್ಟಿದ್ದಾರೆ. ಆದರೆ ಈ ಮಾಹಿತಿಯನ್ನು ಆಸ್ಪತ್ರೆಯವರು ಸಂಬಂಧಿಕರಿಗೆ ನೀಡಿಲ್ಲ ಎಂದು ಹೇಳಲಾಗಿದೆ.
Advertisement
Advertisement
ಆಗಸ್ಟ್ 02 ರಂದು ಭಾನುವಾರ ಸೋಂಕಿತ ವ್ಯಕ್ತಿಯನ್ನ ನೋಡಿಕೊಂಡು ಹೋಗುವ ಸಲುವಾಗಿ ಆಸ್ಪತ್ರೆ ಬಳಿ ಸಂಬಂಧಿಕರು ಬಂದಾಗ ಸೋಂಕಿತ ವ್ಯಕ್ತಿ ಸಾವನ್ನಪ್ಪಿರುವ ಮಾಹಿತಿ ಸಿಕ್ಕಿದೆ. ಇದರಿಂದ ಕಂಗಾಲಾದ ಕುಟುಂಬಸ್ಥರೆಲ್ಲರೂ ಅಗಸ್ಟ್ 03 ರಂದು ಆಸ್ಪತ್ರೆ ಬಳಿ ಜಮಾಯಿಸಿ ಮೃತದೇಹ ತೋರಿಸುವಂತೆ ಬೆಳಗ್ಗೆಯಿಂದ ಕಾದ್ರೆ ಮಧ್ಯಾಹ್ನ 3 ಗಂಟೆಗೆ ತೋರಿಸಿದ್ದಾರೆ. ಮೂರು ದಿನ ಕಳೆದರೂ ನಮಗ್ಯಾಕೆ ಮಾಹಿತಿ ಕೊಡಲಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಸೋಂಕಿತ ಸಾವನ್ನಪ್ಪಿ ಮೂರು ದಿನ ಆಗಿದ್ದರಿಂದ ಮೃತದೇಹ ಕೊಳೆತ ಸ್ಥಿತಿಯಲ್ಲಿರೋದನ್ನು ನೋಡಿ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಶವಗಳನ್ನು ಸರಿಯಾಗಿ ಶಿಥೀಲಿಕರಣ ವ್ಯವಸ್ಥೆಯಲ್ಲಿಡದ ಹಿನ್ನೆಲೆ ವ್ಯಕ್ತಿಯ ಶವ ಕೊಳೆಯುವ ಸ್ಥಿತಿಯಲ್ಲಿದೆ. ಮೃತ ಸೋಂಕಿತ ಕೈ ಮೇಲೆ ಡಾ.ರಾಜ್‍ಕುಮಾರ್ ಹಚ್ಚೆ ಹಾಕಿಸಿಕೊಂಡಿದ್ದರು. ಕುಟುಂಬಸ್ಥರು ಹೆಚ್ಚೆ ನೋಡಿ ಶವವನ್ನ ಗುರುತಿಸಿದ್ದಾರೆ.