– ಬಳ್ಳಾರಿ ಆರೋಗ್ಯ ಇಲಾಖೆಯ ಮತ್ತೊಂದು ಎಡವಟ್ಟು
– ಸ್ವಯಂ ಲಾಕ್‍ಡೌನ್‍ಗೆ ಮುಂದಾದ ಗಡಿ ಜಿಲ್ಲೆ
ಬಳ್ಳಾರಿ: ಕೊರೊನಾ ಸುನಾಮಿ ಅಬ್ಬರ ದಿನೇ ದಿನೇ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಆರೋಗ್ಯ ಸಿಬ್ಬಂದಿಯ ನಿರ್ಲಕ್ಷ್ಯ ರಾಜ್ಯಕ್ಕೆ ದೊಡ್ಡ ತಲೆನೋವಾಗಿದೆ. ಬಳ್ಳಾರಿಯಲ್ಲಂತೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದರೂ ಜಿಲ್ಲಾಡಳಿತ ಕೊರೊನಾ ವಿಚಾರದಲ್ಲಿ ಪದೇ ಪದೇ ಎಡವುತ್ತಿದೆ. ಇದರಿಂದ ಬೇಸತ್ತಿರುವ ಜನ ಸೆಲ್ಫ್ ಲಾಕ್‍ಡೌನ್ ಮೊರೆ ಹೋಗಿದ್ದಾರೆ.
ಜಿಲ್ಲೆಯಲ್ಲಿ 14 ವರ್ಷದೊಳಗಿನ ಬರೋಬ್ಬರಿ 60 ಮಕ್ಕಳಿಗೆ ಸೋಂಕು ವಕ್ಕರಿಸಿದೆ. ಈ ಸಮಯದಲ್ಲಿ ಅಲರ್ಟ್ ಆಗಿರಬೇಕಿದ್ದ ಆರೋಗ್ಯ ಇಲಾಖೆಯೇ ಮತ್ತೊಂದು ಎಡವಟ್ಟು ಮಾಡಿದೆ. ಜಿಂದಾಲ್ ಸಮೀಪದ ಕುಡಿತಿನಿ ಗ್ರಾಮದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ದೃಢವಾಗಿತ್ತು.
Advertisement
Advertisement
ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಬಂದಿದ್ದ ಅಂಬುಲೆನ್ಸ್‌ನಲ್ಲಿ ಆತನ 5 ವರ್ಷದ ಮಗನು ಸಹ ಪ್ರಯಾಣಿಸಿದ್ದಾನೆ. ಸೋಂಕಿತನ ಪತ್ನಿ ಸಹ ಪ್ರಯಾಣಿಸಲು ವೈದ್ಯಕೀಯ ಸಿಬ್ಬಂದಿ ಬಿಟ್ಟಿದ್ದಾರೆ. ಆ ಬಾಲಕನಿಗೆ ಪಿಪಿಇ ಕಿಟ್ ಸಹ ಹಾಕಿಲ್ಲ. ತಂದೆಯಿಂದ ಮಗುಗೆ ಸೋಂಕು ಹರಡಿದರೆ ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣವಾಗಲಿದೆ.
Advertisement
ಕ್ವಾರಂಟೈನ್ ವ್ಯವಸ್ಥೆ:
ಬಳ್ಳಾರಿಯ ಕ್ವಾರಂಟೈನ್ ಕೇಂದ್ರಗಳಂತ ಅವ್ಯವಸ್ಥೆಗಳ ಆಗರವಾಗಿವೆ. ಚಿಕ್ಕಮಕ್ಕಳು ತಮ್ಮ ಪೋಷಕರೊಂದಿಗೆ ಕ್ವಾರಂಟೈನಿಗಳಾಗಿದ್ದಾರೆ. ಆದರೂ ಸಮಯಕ್ಕೆ ಸರಿಯಾಗಿ ಊಟ ಕೊಡುತ್ತಿಲ್ಲವಂತೆ ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಕ್ವಾರಂಟೈನ್ ಮಹಿಳೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
Advertisement
ನಾವು ನಿನ್ನೆ ರಾತ್ರಿ ಇಲ್ಲಗೆ ಬಂದಿದ್ದೀವಿ. ಆದ್ರೆ ಇಲ್ಲಿ ಮಧ್ಯಾಹ್ನ 3.30 ಸಮಯವಾದರೂ ಊಟ ಕೊಡಲ್ಲ. ನಮ್ಮ ಜೊತೆ ಚಿಕ್ಕ ಚಿಕ್ಕ ಮಕ್ಕಳ ಇದ್ದಾವೆ. ಇಲ್ಲಿ ಒಬ್ಬ ನರ್ಸ್, ಪೊಲೀಸ್ ಯಾರೂ ಇಲ್ಲ. ನಮನ್ನು ಒಳಗಡೆ ಹಾಕಿ ಬೀಗ ಹಾಕಿ ಬಿಟ್ಟು ಹೋಗಿದ್ದಾರೆ. ನಮಗೆ 5 ವರ್ಷದ ಮಗು, 10 ವರ್ಷದ ಮಗು ಇದೆ. ಬೇರೆಯವರು ಇದ್ದಾರೆ. ಒಟ್ಟು 30 ಜನ ಇದೀವಿ. ಬೆಳಗ್ಗೆ 11 ಗಂಟೆಗೆ ಎರಡು ಇಡ್ಲಿ ಕೊಡುತ್ತಾರೆ. ಹ್ಯಾಂಡ್ ಸ್ಯಾನಿಟೈಜರ್ ಕೂಡ ಇಲ್ಲ ಎಂದು ಮಹಿಳೆ ಹೇಳಿಕೊಂಡಿದ್ದಾರೆ.
ಸ್ವಯಂ ಲಾಕ್‍ಡೌನ್‍ಗೆ ಮುಂದಾದ ಗಡಿ ಜಿಲ್ಲೆ
ಬಳ್ಳಾರಿಯ ಜನ ಕೊರೊನಾದಿಂದ ಬಚಾವ್ ಆಗಲು ಸ್ವಯಂ ಲಾಕ್‍ಡೌನ್ ಮೊರೆ ಹೋಗಿದ್ದಾರೆ. ಗುರುವಾರ ನಗರದ ವ್ಯಾಪಾರಸ್ಥರು ಸಭೆ ನಡೆಸಿದ್ದರು. ಇಂದಿನಿಂದ ಒಂದು ವಾರಗಳ ಕಾಲ ಮಧ್ಯಾಹ್ನ 3 ಗಂಟೆಯ ನಂತರ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಲು ನಿರ್ಧರಿಸಿದ್ದಾರೆ. ಬೆಳಗ್ಗೆ 7 ರಿಂದ ಮಧ್ಯಾಹ್ನ 3 ಗಂಟೆವರೆಗೆ ಮಾತ್ರ ವ್ಯಾಪಾರ ವಹಿವಾಟು ನಡೆಯಲಿದೆ. ಸಂಜೆಯಾಗುತ್ತಿದ್ದಂತೆ ಮಾರ್ಕೆಟ್‍ಗಳು ಸ್ತಬ್ಧಗೊಳ್ಳಲಿದೆ.