ಹಾವೇರಿ: ಕೊರೊನಾ ಸೋಂಕು ಅಂದರೆ ಎಲ್ಲರಿಗೂ ಭಯ. ಸೊಂಕಿತರ ಹತ್ತಿರ ಹೋಗಲು ಭಯ ಪಡುತ್ತಾರೆ. ಹೀಗಿರುವಾಗ ಕೋವಿಡ್ ಕೇರ್ ಸೆಂಟರ್‌ನಲ್ಲಿಯೇ ಬರ್ತ್ ಡೇಯನ್ನು ಸಮುದಾಯ ಆರೋಗ್ಯಾಧಿಕಾರಿ ಆಚರಿಸಿಕೊಂಡಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕಲಕೇರಿ ಕೋವಿಡ್ ಕೇರ್ ಸೆಂಟರ್‌ನಲ್ಲಿ ನಡೆದಿದೆ. ಇದನ್ನೂ ಓದಿ: ಈ ದಿನ ಮಾಡಿ ಮಾವಿನ ಹಣ್ಣಿನ ಕೇಸರಿ ಬಾತ್
Advertisement
ಕೊರೊನಾ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ಸೋಂಕಿತರೊಂದಿಗೆ ಆರೋಗ್ಯ ಅಧಿಕಾರಿ ಸಂಜೀವ ಗಾಜೀಗೌಡ್ರ ಬರ್ತ್ ಡೇ ಆಚರಿಸಿಕೊಂಡಿದ್ದಾರೆ. 2 ಕೆ.ಜಿ ಕೇಕ್ ತೆಗೆದುಕೊಂಡು ಬಂದು ಸೋಂಕಿತರ ಜೊತೆ 33ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ಇದನ್ನೂ ಓದಿ: ಫೇಸ್‍ಬುಕ್ ಲೈವ್ ವೇಳೆ ನಿದ್ದೆ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಕಿರುತೆರೆ ನಟ
Advertisement
Advertisement
ಕೋವಿಡ್ ಕೇರ್ ಸೆಂಟರ್ ನಲ್ಲೇ ನೈಟ್ ಡ್ಯೂಟಿ ಇದ್ದಿದ್ದರಿಂದ ಪಿಪಿಇ ಕಿಟ್ ಧರಿಸಿಕೊಂಡು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಅನ್ನೋ ಹಾಡಿಗೆ ಸೋಂಕಿತರೊಂದಿಗೆ ಭರ್ಜರಿ ಸ್ಟೆಪ್ಸ್ ಹಾಕಿ ಆತ್ಮ ಸ್ಥೈರ್ಯ ತುಂಬುವ ಕಾರ್ಯ ಮಾಡಿದ್ದಾರೆ. ಮನೆಯಲ್ಲಿ ಪತ್ನಿ, ಇಬ್ಬರು ಮಕ್ಕಳು ಮತ್ತು ತಂದೆ ತಾಯಿ ಇದ್ದರು ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬಲು ಕೋವಿಡ್ ಕೇರ್ ಸೆಂಟರ್ ನಲ್ಲಿ ಬರ್ತ್ ಡೇ ಆಚರಣೆ ಮಾಡಿದ್ದು ವಿಶೇಷವಾಗಿತ್ತು.
Advertisement