ಚಿಕ್ಕಬಳ್ಳಾಪುರ: ಕೋವಿಡ್-19 ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲ ಸೋಂಕಿತರು ನರಳುತ್ತಿದ್ದಾರೆ ಎಂಬ ತಪ್ಪು ಮಾಹಿತಿ ಮೇರೆಗೆ ಸೋಂಕಿತರ ಸಂಬಂಧಿಕರು ಕೋವಿಡ್ ಆಸ್ಪತ್ರೆಗೆ ಮುತ್ತಿಗೆ ಹಾಕಿ ಗಲಾಟೆ ಮಾಡಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
Advertisement
ಕೋವಿಡ್ ಆಸ್ಪತ್ರೆಯಲ್ಲಿರುವ ಕೆಲ ಸೋಂಕಿತರು ತಮ್ಮವರಿಗೆ ಕರೆ ಮಾಡಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿ ಆಗಿದೆ ಅಂತ ಆಳಲು ತೋಡಿಕೊಂಡಿದ್ದಾರೆ. ಇದರಿಂದ ಆತಂಕಗೊಂಡ ಸೋಂಕಿತರ ಸಂಬಂಧಿಕರು ಏಕಾಏಕಿ ಕೋವಿಡ್ ಆಸ್ಪತ್ರೆಗೆ ನುಗ್ಗಿ ಗಲಾಟೆ ನಡೆಸಿದ್ದಾರೆ.
Advertisement
Advertisement
ಸೋಂಕಿತನ ಸಂಬಂಧಿಕರೊಬ್ಬರು ಆಟೋದಲ್ಲಿ ಆಕ್ಸಿಜನ್ ಸಿಲಿಂಡರ್ ತೆಗೆದುಕೊಂಡು ಸೀದಾ ಆಸ್ಪತ್ರೆಗೆ ಬಂದು ಆಕ್ರೋಶ ಹೊರಹಾಕಿದರು. ತಗೊಳ್ಳಿ ನಿಮ್ಮತ್ತಿರ ಆಕ್ಸಿಜನ್ ಇಲ್ಲವಾದರೇ ನಾವು ಕೊಡ್ತೀವಿ ಎಂದು ಆಸ್ಪತ್ರೆಯ ಗೇಟ್‍ಗೆ ಸಿಲಿಂಡರ್‍ನಿಂದ ಹೊಡೆದು ಒಳನುಗ್ಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿದು ಡಿಎಚ್‍ಈ ಇಂದಿರಾ ಕಬಾಡೆ ಹಾಗೂ ಡಿ ಎಸ್ ರಮೇಶ ಆಸ್ಪತ್ರೆಗೆ ಭೇಟಿ ನೀಡಿ, ಆಕ್ರೋಶಿತರಿಗೆ ವಾಸ್ತವ ಸಂಗತಿ ತಿಳಿಸಿ ಸಮಾಧಾನಪಡಿಸಿದರು.
Advertisement
ಆಸ್ಪತ್ರೆಯಲ್ಲಿ ಯಾವುದೇ ಆಕ್ಸಿಜನ್ ಕೊರತೆ ಇಲ್ಲ ಎಂದು ಆಕ್ಸಿಜನ್ ಸಿಲಿಂಡರ್‍ಗಳನ್ನ ತೋರಿಸಿ ಆಕ್ರೋಶಿತರನ್ನು ಸಮಾಧಾನ ಪಡಿಸಿದರು. ಕೆಲ ಸೋಂಕಿತರ ತಪ್ಪುಗ್ರಹಿಕೆಯಿಂದ ಸಂಬಂಧಿಕರಿಗೆ ಕರೆ ಮಾಡಿ ತಿಳಿಸಿದ್ದು ಈ ರಾದ್ದಾಂತಕ್ಕೆ ಕಾರಣಾವಾಗಿತ್ತು.