ಬೆಂಗಳೂರು: ರಿಯಾಯತಿ ಬೆಲೆಯಲ್ಲಿ ಸೈಟ್ ಕೊಡುತ್ತೇವೆ ಎಂದು ನಂಬಿಸಿ, ಬೃಂದಾವನ ಪ್ರಾಪರ್ಟಿಸ್ ಕಂಪನಿ, ಜನರಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ.
ರಾಜಾಜಿನಗರದಲ್ಲಿರುವ ಬೃಂದಾವನ ಪ್ರಾಪರ್ಟಿಸ್ ಕಂಪನಿ, ಕಡಿಮೆ ಬೆಲೆಯಲ್ಲಿ ಸೈಟ್‍ಗಳನ್ನ ಕೊಡುತ್ತೇವೆ ಎಂದು ಜನರನ್ನು ಆಕರ್ಷಿಸಿತ್ತು. ಸಾವಿರಾರು ಜನ ಲಕ್ಷಗಟ್ಟಲೇ ಹಣವನ್ನು ಕಂಪನಿಗೆ ಕಟ್ಟಿದ್ದರು. 2016 ರಿಂದ ಸೈಟ್ ರಿಜಿಸ್ಟರ್ ಮಾಡಿಕೊಡುತ್ತೇವೆ ಎಂದು ನಂಬಿಸಿಕೊಂಡೇ ಬಂದಿದ್ದಾರೆ. ಆದರೆ ಒಂದೇ ಸೈಟ್ ನಾಲ್ಕೈದು ಜನರಿಗೆ ಮಾರಾಟ ಮಾಡಿರುವುದು ಇದೀಗ ಪತ್ತೆಯಾಗುತ್ತಿದ್ದಂತೆ ವಂಚನೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ವಂಚನೆಗೊಳಗಾದ 200ಕ್ಕೂ ಹೆಚ್ಚು ಮಂದಿ ಕಂಪನಿಯ ಮುಂದೆ ಪ್ರತಿಭಟನೆ ಮಾಡುತ್ತಿದ್ದು, ಸ್ಥಳಕ್ಕೆ ರಾಜಾಜಿನಗರ ಪೊಲೀಸರು ಭೇಟಿ ನೀಡಿದ್ದಾರೆ. ಬೃಂದಾವನ ಪ್ರಾಪರ್ಟಿಸ್ ಕಂಪನಿಯ ವಿರುದ್ಧ ದೂರು ದಾಖಲಿಸಿಕೊಳ್ಳಲು ರಾಜಾಜಿನಗರ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಹಣ ಕಳೆದುಕೊಂಡವರು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ:ಕೊರೊನಾ ಔಟ್ ಆಫ್ ಕಂಟ್ರೋಲ್-ಕೇರಳಕ್ಕೆ ಕೇಂದ್ರದ ತಂಡ