ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಸೂಪರ್ ಸ್ಟಾರ್ ವಿಜಯ್ ಸೈಕಲ್‍ನಲ್ಲಿ ಮತಗಟ್ಟೆಗೆ ಬಂದು ವೋಟ್ ಹಾಕುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ನಟ ವಿಜಯ್ ಅವರು ಸೈಕಲ್‍ನಲ್ಲಿ ಚೆನ್ನೈನ ನೀಲಾಂಕರೈನಲ್ಲಿರುವ ವೆಲ್ಸ್ ಇಂಟರ್ ನ್ಯಾಷನಲ್ ಪ್ರೀ ಸ್ಕೂಲ್ ಮತಗಟ್ಟೆಗೆ ಬಂದಿದ್ದಾರೆ. ಈ ವೇಳೆ ಅಭಿಮಾನಿಗಳು ವಿಜಯ್ ಅವರ ಜೊತೆಯಲ್ಲಿ ಫೋಟೋ ಮತ್ತು ವೀಡಿಯೋವನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಅಭಿಮಾನಿಗಳು ರಸ್ತೆ ಮಧ್ಯದಲ್ಲಿ ಸುತ್ತವರಿದ ಕಾರಣ ಮುಂದೆ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ವಿಜಯ್ ತಮ್ಮ ಸಿಬ್ಬಂದಿಯ ದ್ವಿಚಕ್ರವಾಹನದಲ್ಲಿ ಹಿಂದೆ ಕುಳಿತು ಮತಗಟ್ಟೆಗೆ ಹೋಗಿದ್ದಾರೆ. ಮತಗಟ್ಟೆಯ ಬಳಿ ಹಲವಾರು ಅಭಿಮಾನಿಗಳು ಜಮಾಯಿಸಿದ್ದರು. ಅವರನ್ನು ಚದುರಿಸಲು ಪೊಲೀಸರು ಲಘು ಲಾಠೀ ಚಾರ್ಚ್ ಮಾಡಿದರು.
It’s not easy to breath wearing mask, driving cycle under the extreme summer heat. But he did it in style ❤️????
Its not just a ride. Its a Statement. ????????????.
Always proud of you @actorvijay sir.????????#TamilNaduElections2021#Govote#Thalapathy pic.twitter.com/irMBw789qc
— Rathna kumar (@MrRathna) April 6, 2021
ವಿಜಯ್ ಅವರು ಮಾಸ್ಕ್ ಧರಿಸಿಕೊಂಡು ಸೈಕಲ್‍ನಲ್ಲಿ ಮತಗಟ್ಟೆಗೆ ಬಂದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಇಂಧನ ದರ ಏರಿಕೆ ಖಂಡಿಸಲು ಸೈಕಲ್‍ನಲ್ಲಿ ಬಂದಿದ್ದಾರೆ ಎಂದು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.