-ಆರು ರಾಜ್ಯ ದಾಟಿ ಸೇರಬೇಕಿದೆ ಗೂಡು
-ರೈಲ್ವೇ ಟಿಕೆಟ್ ಕನ್ಫರ್ಮ್ ಆಗ್ತಿಲ್ಲ ಏನ್ ಮಾಡೋದು?
ಚೆನ್ನೈ: ಯುವಕರಿಬ್ಬರು 1860 ಕಿಲೋ ಮೀಟರ್ ದೂರದ ಊರು ಸೇರಲು ಪ್ರಯಾಣ ಆರಂಭಿಸಿದ್ದಾರೆ. ರೈಲ್ವೇ ಟಿಕೆಟ್ ಖಚಿತವಾಗದ ಹಿನ್ನೆಲೆಯಲ್ಲಿ ಯುವಕರಿಬ್ಬರು ಸೈಕಲ್‍ನಲ್ಲಿಯೇ ತಮಿಳುನಾಡಿನಿಂದ ಉತ್ತರ ಪ್ರದೇಶಕ್ಕೆ ಪಯಣ ಬೆಳೆಸಿದ್ದಾರೆ.
ಸೋನು ಮತ್ತು ಶೈಲು ಉತ್ತರ ಪ್ರದೇಶದ ಔರಿಯಾ ಜಿಲ್ಲೆಯವರಾಗಿದ್ದು, ತಮಿಳುನಾಡಿನ ಅರ್ಕನೊಂನಲ್ಲಿ ವಾಸವಾಗಿದ್ದರು. ಅರ್ಕನೋಂನಲ್ಲಿ ಕ್ಯಾಂಡಿ ವ್ಯಾಪಾರ ಮಾಡಿಕೊಂಡಿದ್ದ ಇವರ ಬದುಕನ್ನು ಕೊರೊನಾ ಕಿತ್ತುಕೊಂಡಿತ್ತು. ಇದೀಗ ಪ್ರಯಾಣ ಆರಂಭಿಸಿರುವ ಸೋನು ಮತ್ತು ಶೈಲು ಆರು ರಾಜ್ಯಗಳನ್ನು ಪಾರು ಮಾಡಿ ಹೋಗಬೇಕಿರೋದು ದೊಡ್ಡ ಸವಾಲು ಆಗಿದೆ.
Advertisement
Advertisement
ನಾವು ಕೆಲಸ ಆರಂಭಿಸಿದ ದಿನದಿಂದಲೂ ಸ್ವಲ್ಪ ಹಣ ಕೂಡಿಟ್ಟು ಅದರಲ್ಲಿ ಒಂದು ಭಾಗವನ್ನು ಊರಿಗೆ ಕಳಿಸ್ತಾ ಇದ್ದೀವಿ. ಲಾಕ್‍ಡೌನ್ ನಿಂದಾಗಿ ಇಷ್ಟು ದಿನ ಕೂಡಿಟ್ಟ ಹಣದಿಂದ ಜೀವನ ನಡೆಯಿತ್ತು. ಹಣ ಇಲ್ಲದಿದ್ರೆ ಈ ಊರಿನಲ್ಲಿರಲು ಆಗಲ್ಲ. ನಮ್ಮ ಟ್ರೈನ್ ಟಿಕೆಟ್ ಸಹ ಕನ್ಫರ್ಮ್ ಆಗುತ್ತಿಲ್ಲ. ವಿಧಿಯಿಲ್ಲದೇ ಗೆಳೆಯನ ಜೊತೆ ಸೇರಿ ಬ್ಯಾಗ್ ಗಳಿಗೆ ಬಟ್ಟೆ ಹಾಕಿಕೊಂಡು ಸೈಕಲ್ ಮೇಲೆಯೇ ಊರಿಗೆ ಹೊರಟಿದ್ದೇವೆ ಎಂದು ಸೋನು ಹೇಳುತ್ತಾರೆ.
Advertisement
Advertisement
ಹೆದ್ದಾರಿಯ ಪುಟ್ಟ ಗುಡಿಸಲಿನಲ್ಲಿ ವಾಸವಾಗಿರುವ ಮಹಿಳೆ ಸುಂಕಮ್ಮ ಮಾತನಾಡಿ, ನನ್ನ ಕಣ್ಮುಂದೆ ಕಾರ್ಮಿಕರು ನಡೆದುಕೊಂಡು ಹೋಗೋದನ್ನು ನೋಡಿ ದುಃಖವಾಗುತ್ತದೆ. ಕೆಲವರು ಬಂದು ಬಾಟಲ್ ಗಳಿಗೆ ನೀರು ತುಂಬಿಕೊಡುವಂತೆ ಕೇಳುತ್ತಾರೆ. ಬಾಟಲ್ ಗಳಿಗೆ ನೀರು ತುಂಬಿ ಕೆಲವು ಬಾರಿ ಊಟ ಸಹ ನೀಡುತ್ತೇನೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.