ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಗಾಗ ತಮ್ಮ ವರ್ಕೌಟ್ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಪುನೀತ್ ರಾಜ್ ಕುಮಾರ್ ಸೈಕಲ್ ಏರಿ ಸಿಲಿಕಾನ್ ಸಿಟಿಯಲ್ಲಿ ಸುತ್ತಾಡಿದ್ದಾರೆ.
ಶೂಟಿಂಗ್ ಇಲ್ಲದ ಹಿನ್ನೆಲೆಯಲ್ಲಿ ಪುನೀತ್ ರಾಜ್ ಕುಮಾರ್ ಮನೆಯಲ್ಲಿದ್ದರು. ಹೀಗಾಗಿ ಅಪ್ಪು ಸೈಕಲ್ ಏರಿ ನಗರವನ್ನು ಸುತ್ತಾಡಿದ್ದಾರೆ. ತಾವು ಸೈಕಲ್ ಸವಾರಿ ಮಾಡಿರುವ ವಿಡಿಯೋವನ್ನು ತಮ್ಮ ಪಿಆರ್ಕೆ ಯೂಟ್ಯೂಬ್ ಚಾನಲ್ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಅಲ್ಲದೇ ಗುರುವಾರವೇ ಇಂದು ಬೆಳಗ್ಗೆ ಸೈಕಲ್ ಸವಾರಿ ಮಾಡುವುದಾಗಿ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದರು. ಅದೇ ರೀತಿ ಅಪ್ಪು ಸೈಕಲ್ ತುಳಿಯುವ ಮೂಲಕ ವ್ಯಾಯಾಮ ಮಾಡುತ್ತಿದ್ದಾರೆ.
ಅಪ್ಪು ಸದಾಶಿವನಗರದ ನಿವಾಸದಿಂದ ಸೈಕಲ್ ಸವಾರಿ ಆರಂಭಿಸಿದ್ದರು. ನಂತರ ಮೇಖ್ರಿ ಸರ್ಕಲ್, ವಸಂತನಗರ, ಚಾಲುಕ್ಯ ಸರ್ಕಲ್, ವಿಧಾನಸೌಧ, ಬಹುಮಹಡಿ ಕಟ್ಟಡ, ಚಿನ್ನಸ್ವಾಮಿ ಸ್ಟೇಡಿಯಂ, ಎಂಜಿ ರಸ್ತೆಯಲ್ಲಿ ಸೇರಿದಂತೆ ಹಲವು ಪ್ರಮುಖ ರಸ್ತೆಗಳಲ್ಲಿ ಸೈಕಲ್ ಸವಾರಿ ಮಾಡಿದ್ದಾರೆ.
ಈ ಹಿಂದೆ ಕೂಡ ಸದಾಶಿವನಗರ ನಿವಾಸದಿಂದ ಚಿಕ್ಕಬಳ್ಳಾಪುರ ಬಳಿ ಇರುವ ನಂದಿಬೆಟ್ಟಕ್ಕೆ ಸೈಕಲ್ನಲ್ಲಿ ಸವಾರಿ ಮಾಡಿದ್ದರು.