ಬೆಂಗಳೂರು: ಸಂಸದ ತೇಜಸ್ವಿಸೂರ್ಯ ಸೈಕಲ್ ಏರಿ ಬೆಂಗಳೂರು ಸುತ್ತಿದ್ದು, ಈ ವೇಳೆ ಮಾಸ್ಕ್ ಹಾಕಿಲ್ಲ. ಕೇವಲ ಸೈಕಲ್ ಓಡಿಸುವಾಗ ಮಾತ್ರವಲ್ಲ ಜನರೊಂದಿಗೆ ಮಾತನಾಡುವಾಗಲೂ ಸಂಸದರು ಮಾಸ್ಕ್ ಹಾಕಿಲ್ಲ. ಹೀಗಾಗಿ ನೆಟ್ಟಿಗರು ಮಾಸ್ಕ್ ಎಲ್ಲಿ ಎಂದು ಪ್ರಶ್ನಿಸಿದ್ದಾರೆ.
View this post on Instagram
Advertisement
ಸೈಕಲ್‍ನಲ್ಲಿ ನಗರ ಸುತ್ತಿರುವ ಫೋಟೋ ಹಾಗೂ ವೀಡಿಯೋಗಳನ್ನು ಸಂಸದ ತೇಜಸ್ವಿಸೂರ್ಯ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸಂಸದರ ಪೋಸ್ಟ್ ಗೆ ಜನರು ಕಮೆಂಟ್ ಮಾಡಿ ಮಾಸ್ಕ್ ಎಲ್ಲಿ ಸರ್ ಎಂದು ಪ್ರಶ್ನಿಸಿದ್ದಾರೆ. ಮಾಸ್ಕ್ ಎಲ್ಲಿ, ಮಾಸ್ಕ್ ಧರಿಸಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
Advertisement
View this post on Instagram
Advertisement
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಇತರರಿಗೆ ಮಾದರಿಯಾಗಬೇಕಾದ ಜನಪ್ರತಿನಿಧಿಗಳೇ ಹೀಗೆ ಮಾಡಿದರೆ ಹೇಗೆ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಅಲ್ಲದೆ ರಾಜ್ಯದಲ್ಲಿ 2ನೇ ಅಲೆ ಇನ್ನೂ ಸಂಪೂರ್ಣವಾಗಿ ತೊಲಗಿಲ್ಲ. ಬೆಂಗಳೂರಿನಲ್ಲಿ ಪ್ರತಿ ದಿನ 400 ರಿಂದ 600 ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಿದ್ದರೂ ಸಂಸದರು ಎಚ್ಚರ ವಹಿಸಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
View this post on Instagram
ಚಿತ್ರ ಹಾಗೂ ವೀಡಿಯೋದಲ್ಲಿ ತೇಜಸ್ವಿಸೂರ್ಯ ಅವರು ಕೇವಲ ಸೈಕಲ್ ಓಡಿಸುವಾಗ ಮಾತ್ರವಲ್ಲ, ಜನರೊಂದಿಗೆ ಮಾತನಾಡುವಾಗಲೂ ಮಾಸ್ಕ್ ಧರಿಸಿಲ್ಲ. ಹೀಗಾಗಿ ಜನ ಕಮೆಂಟ್ ಮಾಡಿ ಪ್ರಶ್ನಿಸಿದ್ದಾರೆ.