– ಬಿಸ್‍ವೈ ಹೇಳಿಕೆ ಸಮರ್ಥನೆ
ಬೆಂಗಳೂರು: ಕೆಲವೊಂದು ಸೇಫರ್ ಝೋನ್ ಗಳಿವೆ ಅಲ್ಲಿ ಅನುಮತಿ ಪಡೆದು ಸುರಕ್ಷಿತ ವಲಯಗಳಲ್ಲಿ ಗಣಿಗಾರಿಕೆ ಮಾಡೋದು ತಪ್ಪಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಹೇಳಿಕೆಯನ್ನು ಶಾಸಕ ಎಸ್ ಆರ್ ವಿಶ್ವನಾಥ್ ಸಮರ್ಥಿಸಿಕೊಂಡಿದ್ದಾರೆ.
Advertisement
ಗಣಿಗಾರಿಕೆಯನ್ನು ಸಕ್ರಮ ಮಾಡುವ ಕುರಿತಾಗಿ ಮಾಧ್ಯಮದವರೊಂದಿಗೆ ಮತನಾಡಿದ ಅವರು, ಕೆಲವೊಂದು ಸೇಫರ್ ಝೋನ್ ಗಳಿವೆ ಅಲ್ಲಿ ಅನುಮತಿ ಪಡೆದು ಸುರಕ್ಷಿತ ವಲಯಗಳಲ್ಲಿ ಗಣಿಗಾರಿಕೆ ಮಾಡೋದು ತಪ್ಪಲ್ಲ. ಆದರೆ ಕೆಲವರು ಅನುಮತಿ ಪಡೆಯದೇ ಸೇಫರ್ ಝೋನ್ ಇಲ್ಲದೆ ಹೊರಗಡೆ ಗಣಿಗಾರಿಕೆ ಮಾಡ್ತಾರೆ. ಇದು ಅಕ್ರಮ, ಇಂಥವನ್ನು ನಿಲ್ಲಿಸಬೇಕು ಎಂದು ಬಿಸ್‍ವೈ ಹೇಳಿಕೆಯನ್ನು ಸಮರ್ಥಸಿಕೊಂಡಿದ್ದಾರೆ.
Advertisement
Advertisement
ಸೇಫರ್ ಝೋನ್‍ಗಳಲ್ಲೂ ಕೆಲವರು ಅನುಮತಿ ಪಡೆದಿರಲ್ಲ. ಲೈಸೆನ್ಸ್ ಅವಧಿ ಮುಗಿದರು ಕೆಲವರು ಗಣಿಗಾರಿಕೆ ಮಾಡ್ತಾರೆ. ಕೆಲವು ಅಧಿಕಾರಿಗಳು ಇದು ಗೊತ್ತಿದ್ದರು ಕಣ್ಮುಚ್ಚಿ ಕೂತಿರ್ತಾರೆ. ಸಿಎಂ ಹೇಳಿದ್ದು ಎಲ್ಲ ಅನುನತಿ ತಗೊಂಡು ಮಾಡಿ ಎಂದಿದ್ದಾರೆ. ಕ್ರಮಬದ್ಧವಾಗಿ ಗಣಿಗಾರಿಕೆ ಮಾಡುವ ಕಡೆ ಲೈಸೆನ್ಸ್ ತಗೊಂಡು ಮಾಡಿ ಅಂತ ಸಿಎಂ ಹೇಳಿರೋದು. ಬೆಂಗಳೂರಿನಲ್ಲೂ ಕೆಲವು ಅಕ್ರಮ ಗಣಿಗಾರಿಕೆ ನಿಲ್ಲಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನು ಓದಿ: ಅಕ್ರಮ ಗಣಿಗಾರಿಕೆ ಇದ್ದರೆ ಸಕ್ರಮ ಮಾಡಿಕೊಳ್ಳಿ – ಉಲ್ಟಾ ಹೊಡೆದ ಬಿಎಸ್‍ವೈ
Advertisement
ಎಲ್ಲೆಲ್ಲಿ ನಡೆಯುತ್ತದೆಯೋ ಅಲ್ಲಿ ಸೂಕ್ತ ಕ್ರಮ ಕೈಗೊಂಡು ಮತ್ತೆ ಮರುಕಳಿಸದಂತೆ ಎಚ್ಚರ ವಹಿಸುತ್ತೇವೆ ಎಂದು ನಿನ್ನೆಯಷ್ಟೇ ಮುಖ್ಯಮಂತ್ರಿಗಳು ಹೇಳಿದ್ದರು. ಆದರೆ ಇಂದು ಮಾತನಾಡಿದ ಸಿಎಂ, ಅಕ್ರಮ ಇದ್ದರೆ ಸಕ್ರಮ ಮಾಡಿಕೊಳ್ಳಿ. ಲೈಸೆನ್ಸ್ ಪಡೆದು ಗಣಿಗಾರಿಕೆ ಮಾಡಿ ಅಕ್ರಮವಾದ ಗಣಿಗಾರಿಕೆಯನ್ನು ತಡೆಯುತ್ತೇವೆ ಎಂದು ಹೇಳುವ ಮೂಲಕ ಉಲ್ಟಾ ಹೊಡೆದಿದ್ದರೆ.