– ಶಾಲಾ-ಕಾಲೇಜು, ಥಿಯೇಟರ್ ಓಪನ್ ಯಾವಾಗ?
– ಏನಿರುತ್ತೆ..? ಏನಿರಲ್ಲ..?
ಬೆಂಗಳೂರು: ದೇಶದಲ್ಲಿ ಮೂರನೇ ಹಂತದ ಅನ್‍ಲಾಕ್ ನಿಯಮಗಳ ಅಂತ್ಯದಲ್ಲಿದೆ. ಸೆಪ್ಟೆಂಬರ್ 1 ರಿಂದ 4ನೇ ಹಂತದ ಅನ್‍ಲಾಕ್ ಮಾರ್ಗಸೂಚಿಗಳು ಜಾರಿಯಾಗಲಿದೆ. ಬಹುತೇಕ ನಿಯಮಗಳನ್ನು ಸಡಿಲಿಸಿರುವ ಕೇಂದ್ರ ಸರ್ಕಾರ ಈ ಬಾರಿ ಯಾವುದಕ್ಕೆಲ್ಲ ವಿನಾಯಿತಿ ನೀಡಲಿದೆ ಎಂಬ ಲೆಕ್ಕಾಚಾರ ಆರಂಭವಾಗಿದೆ.
Advertisement
3ನೇ ಹಂತದ ಅನ್‍ಲಾಕ್ ಮುಕ್ತಾಯಗೊಳ್ಳಲು ಇನ್ನೊಂದು ವಾರ ಬಾಕಿ ಇದೆ. ಸೆಪ್ಟೆಂಬರ್ 1 ರಿಂದ 4ನೇ ಹಂತದ ಅನ್‍ಲಾಕ್ ಶುರುವಾಗಲಿದ್ದು, ಇದಕ್ಕಾಗಿ ಕೇಂದ್ರ ಗೃಹ ಇಲಾಖೆ ಮಾರ್ಗಸೂಚಿ ಸಿದ್ಧಪಡಿಸುತ್ತಿದೆ. ಯಾವುದೇ ಸಮಯದಲ್ಲಾದರೂ ಗೃಹ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದೆ.
Advertisement
ಸದ್ಯ ದೇಶದಲ್ಲಿ ಕೊರೊನಾ ಸೋಂಕು ಏರಿಕೆಯಾಗುತ್ತಿದೆ. ದಿನವೊಂದಕ್ಕೆ ಸರಾಸರಿ 65 ಸಾವಿರ ಕೇಸುಗಳು ದಾಖಲಾಗುತ್ತಿದೆ. ಈ ಹೊತ್ತಿನಲ್ಲಿ ಮತ್ತಷ್ಟು ಎಚ್ಚರಿಕೆಯಿಂದ ವಿನಾಯಿತಿ ನೀಡುವ ಬಗ್ಗೆ ಕೇಂದ್ರ ಸರ್ಕಾರ ಸೂಚಿಸಿದೆ. ವೈರಸ್ ಜೊತೆಗೆ ಜೀವಿಸಿ ಎಂದಿದ್ದ ಸರ್ಕಾರ ಕಳೆದ ಬಾರಿ ನೈಟ್ ಕರ್ಫ್ಯೂ ರದ್ದು ಮಾಡಿ ಜಿಮ್, ಯೋಗ ಫಿಟ್ನೆಸ್ ಕೇಂದ್ರಗಳು ತೆರೆಯಲು ಅವಕಾಶ ಕೊಟ್ಟಿತ್ತು. ಆದರೆ ಪ್ರಮುಖವಾಗಿ ಜನ ಸೇರುವ ಕಡೆ ನಿರ್ಬಂಧ ಮುಂದುವರಿಸಿತ್ತು. ಈ ಬಾರಿ ಆ ನಿರ್ಬಂಧಗಳು ಏನಾದರೂ ತೆರವು ಆಗುತ್ತಾವಾ ಎಂಬ ಪ್ರಶ್ನೆ ಎದುರಾಗಿದೆ.
Advertisement
Advertisement
ಕೇಂದ್ರ ಸರ್ಕಾರ ಈ ಬಾರಿ ಮಹತ್ವ ನಿರ್ಧಾರಗಳನ್ನು ತೆಗೆದುಕೊಳ್ಳ ಸಾಧ್ಯತೆ ಇದ್ದು, ದೇಶದ್ಯಾಂತ ಮೆಟ್ರೋ ಸಂಚಾರ ಪುನಾರಂಭಗೊಳ್ಳಬಹುದು. ಹಂತ ಹಂತವಾಗಿ ಶಾಲೆ-ಕಾಲೇಜು ತೆರೆಯಲು ಅವಕಾಶ ನೀಡಿ, ರಾಜ್ಯ ಸರ್ಕಾರಗಳಿಗೆ ಶಾಲೆ-ಕಾಲೇಜು ತೆರೆಯುವ ಅಂತಿಮ ನಿರ್ಧಾರ ನೀಡಬಹುದು. ಸ್ವಿಮ್ಮಿಂಗ್ ಪೂಲ್, ಥಿಯೇಟರ್, ಬಾರ್-ಪಬ್‍ಗಳಿಗೆ ನಿಷೇಧ ಮುಂದುವರೆಯಬಹುದು. ಸಭೆ, ಸಮಾರಂಭ, ಅಮ್ಯೂಸ್‍ಮೆಂಟ್ ಪಾರ್ಕ್ ಮೇಲಿನ ನಿರ್ಬಂಧ ಹಾಗೂ ಕಂಟೈನ್ಮೆಂಟ್ ಝೋನ್‍ಗಳಲ್ಲಿ ಎಂದಿನಂತೆ ಲಾಕ್‍ಡೌನ್ ಮುಂದುವರಿಯುವ ಸಾಧ್ಯತೆ ಇದೆ.
ಅನ್‍ಲಾಕ್ 4.0ನಲ್ಲಿ ಮೆಟ್ರೋಗೆ ಅವಕಾಶ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ. ಶಾಲೆ ಕಾಲೇಜು ತೆರೆಯೋ ಬಗ್ಗೆಯೂ ಕೇಂದ್ರ ಗಂಭೀರ ಚಿಂತನೆ ನಡೆಸಿದೆ. ಆದರೆ ಸೋಂಕು ಹೆಚ್ಚುತ್ತಿರುವ ಹೊತ್ತಲ್ಲಿ ಮಕ್ಕಳ ವಿಚಾರದಲ್ಲಿ ಮತ್ತಷ್ಟು ಚಿಂತನೆ ನಡೆಸುತ್ತಿದೆ. ಅಂತಿಮ ನಿರ್ಧಾರವನ್ನು ರಾಜ್ಯ ಸರ್ಕಾರಗಳಿಗೆ ಬಿಡುವ ಸಾಧ್ಯತೆಗಳಿದೆ ಇದೆ.