ರಾಯ್‌ಪುರ: ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಮತ್ತೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ಬಾಂಗ್ಲಾದೇಶ ಲೆಜೆಂಡ್ ವಿರುದ್ಧ ಭಾರತ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ರೋಡ್ ಸೇಫ್ಟಿ ವಿಶ್ವ ಸೀರಿಸ್ ಪಂದ್ಯದಲ್ಲಿ ಟಾಸ್ ಗೆದ್ದ ಬಾಗ್ಲಾದೇಶ ಮೊದಲು ಬ್ಯಾಟಿಂಗ್ ಮಾಡಿ 19.4 ಓವರ್‌ಗಳಲ್ಲಿ 109 ರನ್‌ಗಳಿಗೆ ಆಲೌಟ್ ಆಯ್ತು. 110 ರನ್‌ಗಳ ಸುಲಭ ಸವಾಲನ್ನು ಪಡೆದ ಭಾರತ 10.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 114 ರನ್‌ಗಳ ಗುರಿಯನ್ನು ಮುಟ್ಟಿತು.
Advertisement
https://twitter.com/urmilpatel30/status/1367869943996416003
Advertisement
ವೀರೇಂದ್ರ ಸೆಹ್ವಾಗ್ ಸ್ಫೋಟಕ 80 ರನ್(35 ಎಸೆತ, 10 ಬೌಂಡರಿ, 5 ಸಿಕ್ಸರ್) ಹೊಡೆದರೆ ನಾಯಕ ತೆಂಡೂಲ್ಕರ್ 33 ರನ್(26 ಎಸೆತ, 5 ಬೌಂಡರಿ) ಹೊಡೆದರು.
Advertisement
ಬಾಂಗ್ಲಾ ಪರ ನಿಜಮುದ್ದೀನ್ 49 ರನ್ ಹೊಡೆದು ಔಟಾದರು. ಭಾರತದ ಪರ ವಿನಯ್ ಕುಮಾರ್, ಪ್ರಗ್ಯಾನ್ ಓಜಾ, ಯುವರಾಜ್ ಸಿಂಗ್ ತಲಾ 2 ವಿಕೆಟ್ ಪಡೆದರು. ಮನ್‌ಪ್ರೀತ್ ಗೊನಿ, ಯೂಸೂಫ್ ಪಠಾಣ್ ತಲಾ ಒಂದು ವಿಕೆಟ್ ಪಡೆದರು.
Advertisement
First ball boundary..Just Sehwag things!#IndiaLegends pic.twitter.com/tWXP3PqRFt
— PRINCE SINGH (@princesonu2019) March 5, 2021
3 ಪಂದ್ಯಗಳನ್ನು ಗೆದ್ದಿರುವ ಭಾರತ ಅಂಕಪಟ್ಟಿಯಲ್ಲಿ 6 ಅಂಕಗಳೊಂದಿಗೆ ಅಗ್ರ ಸ್ಥಾನ ಪಡೆದಿದೆ. ಭಾರತ ತಂಡ ಕಳೆದ ವರ್ಷವೇ 2 ಪಂದ್ಯಗಳನ್ನು ಗೆದ್ದುಕೊಂಡಿತ್ತು. ಕೊರೊನಾ ಕಾರಣದಿಂದ ಈ ಟಿ 20 ಸರಣಿ ಈ ವರ್ಷಕ್ಕೆ ಮುಂದೂಡಿಕೆಯಾಗಿತ್ತು.
Sehwag being sehwag ????????, started with 1st ball four .. #Trademarkviru
Joy 2 watch these 2 bat @sachin_rt and @virendersehwag #RoadSafetyWorldSeries2021 pic.twitter.com/WAHvqbdIZm
— Ashutosh Raj (@rajashu91) March 5, 2021