ಟೋಕಿಯೋ: ಒಲಿಂಪಿಕ್ಸ್ ಕುಸ್ತಿಯ 65 ಕೆ.ಜಿ ವಿಭಾಗದಲ್ಲಿ ಭಾರತದ ಕುಸ್ತಿಪಟು ಭಜರಂಗ್ ಪುನಿಯ ಸೆಮಿ ಫೈನಲ್ಗೆ ಅರ್ಹತೆ ಪಡೆದುಕೊಂಡಿದ್ದಾರೆ.
Advertisement
ಈ ಮೊದಲು ನಡೆದ ಕ್ವಾರ್ಟರ್ ಪೈನಲ್ ಪಂದ್ಯದಲ್ಲಿ ಇರಾನಿನ ಕುಸ್ತಿಪಟು ಮೋರ್ತೆಜಾ ಗಿಯಾಸಿ ವಿರುದ್ಧ 2-1 ಅಂಕಗಳ ಮುನ್ನಡೆ ಪಡೆದು ಸೆಮಿಫೈನಲ್ಗೆ ಲಗ್ಗೆ ಇಟ್ಟರು. ಈ ಮೂಲಕ ಭಾರತಕ್ಕೆ ಇನ್ನೊಂದು ಪದಕದ ನಿರೀಕ್ಷೆ ಮೂಡಿಸಿದ್ದಾರೆ.
Advertisement
#TeamIndia | #Tokyo2020 | #Wrestling
Men's Freestyle 65kg 1/4 Finals Results#BajrangPunia storms into Semifinals with a victory pin over Morteza Ghiasi. Used all his experience to sail through! March on champ @BajrangPunia ???????? #RukengeNahi #EkIndiaTeamIndia #Cheer4India https://t.co/mNUKEveDfi pic.twitter.com/eC03JEdtpY
— Team India (@WeAreTeamIndia) August 6, 2021
Advertisement
ಮೊದಲ ಪ್ರೀ-ಕ್ವಾರ್ಟರ್ ಫೈನಲ್ನಲ್ಲಿ ಕಿರ್ಗಿಸ್ತಾನದ ಎರ್ನಾಜರ್ ಅಕ್ಮಟಾಲೀವ್ ವಿರುದ್ಧ ಮೇಲುಗೈ ಸಾಧಿಸಿದ್ದರು. ಸೆಮಿಫೈನಲ್ ಪಂದ್ಯವು ಅಪರಾಹ್ನ 2.52ಕ್ಕೆ ಆರಂಭವಾಗಲಿದೆ. ಮಹಿಳಾ ಕುಸ್ತಿಯಲ್ಲಿ 50 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಸೀಮಾ ಬಿಸ್ಲಾ ಸೋಲು ಕಂಡು ಹೊರಬಿದ್ದಿದ್ದಾರೆ. ಇದನ್ನೂ ಓದಿ: ಒಲಿಂಪಿಕ್ಸ್ ಹಾಕಿಯಲ್ಲಿ ಭಾರತದ ವನಿತೆಯರಿಗೆ ಕೈ ತಪ್ಪಿದ ಕಂಚು
Advertisement
ನಿನ್ನೆ ಕುಸ್ತಿಯ ಪುರುಷರ 57 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ 23 ವರ್ಷದ ರವಿ ದಹಿಯಾ ಬೆಳ್ಳಿಯನ್ನು ಗೆದ್ದಿದ್ದರು. ಈ ಮೂಲಕ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಎರಡು ಬೆಳ್ಳಿ ಪದಕ ಗೆದ್ದಿದೆ.