ಬೆಂಗಳೂರು: ದೇಶದಲ್ಲಿ ಮೂರನೇ ಅಲೆ ಭೀತಿ ಹೆಚ್ಚಾಗ್ತಿದೆ. ದೇಶದ ಕೆಲ ರಾಜ್ಯಗಳಲ್ಲಿ ಕೇಸ್ ಗಳ ಸಂಖ್ಯೆ ಏರಿಕೆಯಾಗುತ್ತಿದೆ. ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಸೊಂಕು ತಗುಲುತ್ತೆ ಅಂತಾ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮಕ್ಕಳಿಗೆ ವ್ಯಾಕ್ಸಿನ್ ಇಲ್ಲದ ಕಾರಣ ಮಕ್ಕಳಿಗೆ ಸೋಂಕು ಹೆಚ್ಚುವ ಸಾಧ್ಯತೆಗಳಿವೆ. ಈ ಮಧ್ಯೆ ಮಕ್ಕಳಿಗೆ ಕೋವಿಡ್ ಲಸಿಕೆ ಸೆಪ್ಟೆಂಬರ್ ವೇಳೆಗೆ ಸಿಗಬಹುದು ಅಂತಾ ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement
ಭಾರತ್ ಬಯೋಟೆಕ್‍ನ ಕೋವಾಕ್ಸಿನ್ ಪ್ರಯೋಗಗಳು ಆಗಸ್ಟ್ ಅಥವಾ ಸೆಪ್ಟೆಂಬರ್ ವೇಳೆಗೆ ಮುಗಿಯಬೇಕು ಮತ್ತು ಆ ಹೊತ್ತಿಗೆ ನಾವು ವ್ಯಾಕ್ಸಿನ್ ಬಳಕೆಗೆ ಅನುಮೋದನೆ ಪಡೆಯಬೇಕು. ಫೈಜರ್ ಲಸಿಕೆಗೆ ಈಗಾಗಲೇ ಅನುಮೋದನೆ ಸಿಕ್ಕಿದೆ. ಸೆಪ್ಟೆಂಬರ್ ವೇಳೆಗೆ ನಾವು ಮಕ್ಕಳಿಗೆ ಲಸಿಕೆ ಹಾಕಲು ಪ್ರಾರಂಭಿಸಬೇಕು. ಚೈನ್ ಲಿಂಕ್ ಕಟ್ ಮಾಡಬೇಕಾದ್ರೆ ಇದು ತುಂಬಾ ಸಹಕಾರಿ ಆಗುತ್ತೆ ಅಂತಾ ಡಾ.ರಣದೀಪ್ ಗುಲೇರಿಯಾ ತಿಳಿಸಿದ್ದಾರೆ.
Advertisement
Bharat Biotech's Covaxin trials for children are presently underway and the results are expected to be released by September: Dr Randeep Guleria, AIIMS Director pic.twitter.com/IzcNppK6OR
— ANI (@ANI) July 24, 2021
Advertisement
ರಾಜ್ಯದಲ್ಲಿ ತಜ್ಞರು ಕೂಡ ಮೂರನೇ ಅಲೆ ಸೆಪ್ಟೆಂಬರ್, ಅಕ್ಟೋಬರ್ ವೇಳೆಗೆ ಕಾಣಿಸಿಕೊಳ್ಳಬಹುದು ಅಂತಾ ಹೇಳುತ್ತಿದ್ದಾರೆ. ಮಕ್ಕಳಿಗೆ ಲಸಿಕೆ ಸೆಪ್ಟೆಂಬರ್ ಗೆ ಬಂದರೆ ಕೋವಿಡ್ ನಿಂದ ಪಾರು ಮಾಡಬಹುದು ಅಂತಾ ರಾಜ್ಯದ ತಜ್ಞರು ಹೇಳಿದ್ದಾರೆ. ಇದನ್ನೂ ಓದಿ: ಅತಿವೃಷ್ಟಿ ಪರಿಹಾರ ಕಾರ್ಯಕ್ಕೆ ಡಿಸಿ ಖಾತೆಯಲ್ಲಿ 950 ಕೋಟಿ ಮೀಸಲು: ಸಚಿವ ಆರ್.ಅಶೋಕ್