ಸೂರ್ಯ ಗ್ರಹಣ- ಭೌತ ವಿಜ್ಞಾನಿ ಡಾ.ಎ.ಪಿ ಭಟ್ ಮಾಹಿತಿ

Public TV
1 Min Read
UDP 1

ಉಡುಪಿ: ಭಾನುವಾರ ಭಾರತ ಅಪರೂಪದ ಸೂರ್ಯ ಗ್ರಹಣಕ್ಕೆ ಸಾಕ್ಷಿಯಾಗಲಿದೆ. ರಾಜಸ್ಥಾನ, ಹರಿಯಾಣ, ಉತ್ತರಖಂಡಗಳ ಕೆಲ ಪ್ರದೇಶಗಳಲ್ಲಿ ಕಂಕಣ ಸೂರ್ಯ ಗ್ರಹಣ. ಉಳಿದ ಭಾರತದ ಎಲ್ಲಾ ಪ್ರದೇಶದಲ್ಲಿ ಪಾರ್ಶ್ವ ಸೂರ್ಯ ಗ್ರಹಣ ಆಗಲಿದೆ.

ಕುರುಕ್ಷೇತ್ರ, ಡೆಹ್ರಾಡೂನ್‍ಗಳ ಸುಮಾರು 21 ಕಿಲೋ ಮೀಟರಿನಲ್ಲಿ ಸಂಪೂರ್ಣ ಕಂಕಣ ಗ್ರಹಣವಾದರೆ, ಅಲ್ಲಿಂದ ದಕ್ಷಿಣಕ್ಕೆ ವ್ಯಾಪಿಸುತ್ತಿದ್ದಂತೆ ಪಾರ್ಶ್ವ ಸೂರ್ಯ ಗ್ರಹಣ, ಅದರಲ್ಲೂ ಗ್ರಹಣವಾಗುವ ಅಂಶ ಕಡಿಮೆಯಾಗುತ್ತಾ, ಉಡುಪಿಯಲ್ಲಿ ಪಾರ್ಶ್ವ ಸೂರ್ಯಗ್ರಹಣ 40 ಅಂಶವಾಗಲಿದೆ ಎಂದು ಉಡುಪಿಯ ಭೌತ ವಿಜ್ಞಾನಿ, ಪಬ್ಲಿಕ್ ಹೀರೋ ಡಾ. ಎ.ಪಿ ಭಟ್ ಮಾಹಿತಿ ನೀಡಿದ್ದಾರೆ.

UDP 5 1

ಉಡುಪಿಯಲ್ಲಿ ಬೆಳಗ್ಗೆ 10ಗಂಟೆ 04 ನಿಮಿಷಕ್ಕೆ ಗ್ರಹಣ ಪ್ರಾರಂಭ. 1 ಗಂಟೆ 22 ನಿಮಿಷಕ್ಕೆ ಮುಕ್ತಾಯವಾಗುತ್ತದೆ. 11 ಗಂಟೆ 37 ನಿಮಿಷ ಹೆಚ್ಚು, ಅಂದರೆ 40% ಸೂರ್ಯ ಮರೆಯಾಗಿ ನಂತರ ಕಡಿಮೆಯಾಗಲಿದೆ ಎಂದಿದ್ದಾರೆ. ಕಳೆದ ಡಿಸೆಂಬರ್ 26ರ ಕಂಕಣ ಸೂರ್ಯಗ್ರಹಣ ಹಾಗೂ ಭಾನುವಾರದ ಗ್ರಹಣ ಶತಮಾನಕ್ಕೊಮ್ಮೆ ಬರುವಂತಹುದ್ದು. ಹತ್ತು ವರ್ಷಗಳಲ್ಲೊಮ್ಮೆ ಪಾರ್ಶ್ವ ಸೂರ್ಯ ಗ್ರಹಣ ಸಂಭವಿಸಿದರೆ ನಮಗಿನ್ನು ಪುನಃ ಕಂಕಣ 2064ಕ್ಕೆ ಎಂದರು.

ಸೂರ್ಯ ಭೂಮಿಯ ನಡುವೆ ಚಂದ್ರ ನೇರ ಬಂದಾಗ ಸೂರ್ಯ ಗ್ರಹಣವಾಗುತ್ತದೆ. ಅದು ಕೆಲವೇ ಪ್ರದೇಶಗಳಲ್ಲಿ ಖಗ್ರಾಸ ಅಥವಾ ಕಂಕಣವಾಗಬಹುದು. ಚಂದ್ರ ಭೂಮಿಗಿಂತ ಸುಮಾರು 20 ಪಟ್ಟು ಚಿಕ್ಕವನಾದುದರಿಂದ ಸೂರ್ಯ ಗ್ರಹಣ ಹೆಚ್ಚೆಂದರೆ 7.5 ನಿಮಿಷ ಮಾತ್ರ ಇರುತ್ತದೆ ಎಂದು ಮಾಹಿತಿ ನೀಡಿದರು.

UDP 7 1

ಎ.ಪಿ ಭಟ್ ಕೊಟ್ಟಿರುವ ಎಚ್ಚರಿಕೆಗಳು ಏನು?
ಚಂದ್ರ ಗ್ರಹಣವನ್ನು ನೇರ ಬರಿಗಣ್ಣಿನಿಂದ ನೋಡಬಹುದು. ಸೂರ್ಯ ಗ್ರಹಣ ಬರಿಗಣ್ಣಿನಿಂದ ನೋಡಲೇಬಾರದು. ಗ್ರಹಣ ಸಂಬಂಧ ತಯಾರಿಸಿದ ಕನ್ನಡದಿಂದ ಅಥವಾ ಪಿನ್ ಹೋಲ್ ಉಪಕರಣಗಳಿಂದ ಪರೋಕ್ಷವಾಗಿ ನೋಡಬಹುದು ಎಂದು ಹೇಳಿದರು.

ಮಳೆ, ಮೋಡ ಇಲ್ಲದಿದ್ದರೆ, ಉಡುಪಿ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ವತಿಯಿಂದ ಅದರ ವೆಬ್ಸೈಟ್‍ನಲ್ಲಿ ನೇರ ಪ್ರಸಾರದಲ್ಲಿ ಗ್ರಹಣ ವೀಕ್ಷಣೆ ಇರುತ್ತದೆ. ತಾವು ಮನೆಯಲ್ಲೇ ಕುಳಿತು ಗ್ರಹಣ ವೀಕ್ಷಣೆ ಮಾಡಬಹುದು ಎಂದು ಹೇಳಿದರು.

 

Share This Article
Leave a Comment

Leave a Reply

Your email address will not be published. Required fields are marked *