ಸೂಪರ್ ಮಾರ್ಕೆಟ್‍ನಲ್ಲೇ ಅಂಡರ್‌ವೇರ್ ಕಳಚಿ ಮಾಸ್ಕ್ ಮಾಡ್ಕೊಂಡ ಯುವತಿ – ವೀಡಿಯೋ ವೈರಲ್

Public TV
1 Min Read
GIRL

ಕೇಪ್‍ಟೌನ್: ಮಹಾಮಾರಿ ಕೊರೊನಾ ವೈರಸ್ ಬಂದ ಬಳಿಕ ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ ಮಾಡಲಾಗಿದ್ದು, ಇದರಿಂದ ಅನೇಕ ರೀತಿಯ ತಮಾಷೆಯ ಘಟನೆಗಳು ನಡೆದಿವೆ. ಕೆಲವರಂತೂ ಮಾಸ್ಕ್ ಹಾಕೋದನ್ನೇ ಮರೆತು ಬಿಡುತ್ತಾರೆ. ಅಂತೆಯೇ ಇದೀಗ ಯುವತಿಯೊಬ್ಬಳು ಸೂಪರ್ ಮಾರ್ಕೆಟ್ ನಲ್ಲಿ ತನ್ನ ಒಳಉಡುಪನ್ನೇ ಮಾಸ್ಕ್ ಆಗಿ ಮಾಡಿಕೊಳ್ಳುವ ಮೂಲಕ ಪೇಚಿಗೆ ಸಿಲುಕಿದ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.

GIRL FINAL

ಹೌದು. ಯುವತಿಯೊಬ್ಬಳು ನಗರದ ಸೂಪರ್ ಮಾರ್ಕೆಟ್ ಗೆ ಮಾಸ್ಕ್ ಮರೆತು ಬಂದಿದ್ದಳು. ಈಕೆಯನ್ನು ಗಮನಿಸಿದ ಅಲ್ಲಿನ ಸಿಬ್ಬಂದಿ ಮಾಸ್ಕ್ ಯಾಕೆ ಧರಿಸಿಲ್ಲ ಎಂದು ಕೇಳಿದ್ದಾರೆ. ಇದರಿಂದ ಗಲಿಬಿಲಿಗೊಂಡ ಯುವತಿ ಕೂಡಲೇ ತನ್ನ ಅಂಡರ್‍ವೇರ್ ಕಳಚಿ ಅದನ್ನೇ ಮಾಸ್ಕ್ ನಂತೆ ಬಳಸಿಕೊಂಡಿದ್ದಾಳೆ. ಸದ್ಯ ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

girl 1

ವೀಡಿಯೋದಲ್ಲಿ ಸೂಪರ್ ಮಾರ್ಕೆಟ್ ಸೆಕ್ಯೂರಿಟಿ ಗಾರ್ಡ್ ಯುವತಿ ಬಳಿ ಬಂದು ಮಾಸ್ಕ್ ಧರಿಸದ ಬಗ್ಗೆ ವಿಚಾರಿಸಿದ್ದಾರೆ. ಅಲ್ಲದೆ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸದೇ ಅಂಗಡಿ ಒಳಕ್ಕೆ ಬರಲು ಬಿಡುವುದಿಲ್ಲ. ನೀವು ಹೇಗೆ ಒಳಗೆ ಬಂದ್ರಿ ಎಂದು ಗದರಿಸಿದ್ದಾನೆ. ಸೆಕ್ಯೂರಿಟಿ ಗಾರ್ಡ್ ಬೈಗುಳದಿಂದ ಆತಂಕಗೊಂಡ ಯುವತಿ ಎಲ್ಲರ ಮುಂದೆಯೇ ಕೂಡಲೇ ತನ್ನ ಅಂಡರ್ ವೇರ್ ಕಳಚಿದ್ದಾಳೆ. ಅಲ್ಲದೆ ನಂತರ ಅದನ್ನೇ ಮಾಸ್ಕ್ ಆಗಿ ಮುಖಕ್ಕೆ ಕಟ್ಟಿಕೊಂಡಿದ್ದನ್ನು ಕಾಣಬಹುದಾಗಿದೆ.

mask 2 1

ಈ ವೈರಲ್ ವೀಡಿಯೋ ನೋಡಿದ ನೆಟ್ಟಿಗರು ಏನಿದು..? ಇಲ್ಲಿ ಏನು ನಡೀತಾ ಇದೆ ಎಂದೆಲ್ಲ ಪ್ರಶ್ನಿಸಿದ್ದಾರೆ. ಘಟನೆಗೆ ಸಾಕ್ಷಿಯಾದ ಮಹಿಳೆಯೊಬ್ಬರು ಯುವತಿಯ ಕೆಲಸವನ್ನು ಸಮರ್ಥಿಸಿಕೊಂಡಿದ್ದಾರೆ. ಆಕೆ ಮಾಡಿದ್ದನ್ನು ನಾನು ಸ್ವಾಗತಿಸುತ್ತೇನೆ. ಒಳ ಉಡುಪಿಗಿಂದ ಹೆಚ್ಚು ಬ್ಯಾಕ್ಟೀರಿಯಾ ನಾವು ಧರಿಸುವ ಮಾಸ್ಕ್ ಮೇಲೆಯೇ ಇರುತ್ತದೆ. ಹೀಗಾಗಿ ಯುವತಿ ಉತ್ತಮ ಕೆಲಸವನ್ನೇ ಮಾಡಿದ್ದಾಳೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *