– ಸೂಪರ್ ಓವರಿನಲ್ಲಿ ಎರಡು ವಿಕೆಟ್ ಸಮೇತ ಐದು ವಿಕೆಟ್ ಪಡೆದ ಲಾಕಿ
– ಐಪಿಎಲ್-2020ಯಲ್ಲಿ ಮೂರನೇ ಸೂಪರ್ ಓವರ್
– ಕೊನೆಯ ಓವರಿನಲ್ಲಿ ಬೇಕಿತ್ತು 17 ರನ್
– ವಿದೇಶಿ ಆಟಗಾರನಾಗಿ ವಾರ್ನರ್ ದಾಖಲೆ
ಅಬುಧಾಬಿ: ಇಂದು ಸಂಡೇ ಧಮಾಕಾ ಮೊದಲನೇ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯ ಟೈ ಆಗಿ ಸೂಪರ್ ಓವರ್ ತಲುಪಿತ್ತು. ಸೂಪರ್ ಓವರಿನಲ್ಲಿ ಭರ್ಜರಿ ಪ್ರದರ್ಶನ ತೋರಿದ ಕೋಲ್ಕತ್ತಾ ತಂಡ ಪಂದ್ಯವನ್ನು ಗೆದ್ದು ಬೀಗಿತು.
ಡ್ರಾ ಆಗಿದ್ದು ಹೇಗೆ?
ಕೊನೆಯ ಓವರಿನಲ್ಲಿ ಹೈದರಾಬಾದ್‍ಗೆ ಗೆಲ್ಲಲ್ಲು 17 ರನ್‍ಗಳ ಅವಶ್ಯಕತೆಯಿತ್ತು. ಆದರೆ ಆಂಡ್ರೆ ರಸ್ಸೆಲ್ ಅವರು ಮೊದಲ ಬಾಲನ್ನೇ ನೋಬಾಲ್ ಎಸೆದರು. ನಂತರ ಫ್ರೀ ಹಿಟ್ ಎದುರಿಸಿದ ರಶೀದ್ ಖಾನ್ ಅವರು ಒಂದು ರನ್ ತಂದರು ನಂತರ ಸ್ಟ್ರೈಕಿಗೆ ಬಂದ ವಾರ್ನರ್ ಅವರು, ಎರಡು, ಮೂರು ಮತ್ತು ನಾಲ್ಕನೇ ಬಾಲನ್ನು ಬೌಂಡರಿಗಟ್ಟಿದರು. ಆಗ ಎರಡು ಬಾಲಿಗೆ ನಾಲ್ಕು ರನ್‍ಗಳ ಅವಶ್ಯಕತೆ ಇತ್ತು. 5ನೇ ಬಾಲಿನಲ್ಲಿ ಎರಡು ರನ್ ಬಂತು. ಆದರೆ ಆರನೇ ಬಾಲಿನಲ್ಲಿ ಕೇವಲ ಒಂದು ರನ್ ಬಂದು ಪಂದ್ಯ ಟೈ ಆಯ್ತು.
Advertisement
That's that from Match 35.@KKRiders win in the Super Over against #SRH.#Dream11IPL pic.twitter.com/KooTSzHDyH
— IndianPremierLeague (@IPL) October 18, 2020
Advertisement
ಕೋಲ್ಕತ್ತಾದ ಪರ ಫರ್ಗುಸನ್ ಸೂಪರ್ ಓವರ್ ಬೌಲ್ ಮಾಡಿದರು. ಸೂಪರ್ ಓವರಿನ ಮೊದಲ ಬಾಲಿನಲ್ಲೇ ನಾಯಕ ಡೇವಿಡ್ ವಾರ್ನರ್ ಅವರು ಔಟ್ ಆದರು. ನಂತರ ಸಮದ್ ಅವರು ಎರಡು ರನ್ ತಂದರು. ನಂತರದ ಬಾಲಿನಲ್ಲಿ ಲಾಕಿ ಫರ್ಗುಸನ್ ಅವರಿಗೆ ಬೌಲ್ಡ್ ಆದರು ಈ ಮೂಲಕ ಆಲೌಟ್ ಆಗಿ ಕೇವಲ ಎರಡು ರನ್‍ಗಳ ಟಾರ್ಗೆಟ್ ನೀಡಿತು. ಈ ಸುಲಭ ಗುರಿ ಬೆನ್ನಟ್ಟಲು ಬಂದ ಇಯೊನ್ ಮೋರ್ಗಾನ್ ಮತ್ತು ದಿನೇಶ್ ಕಾರ್ತಿಕ್ ಅವರು ಎರಡು ಬಾಲ್ ಉಳಿಸಿಯೇ ತಂಡವನ್ನು ಗೆಲುವಿನ ದಡ ಸೇರಿಸಿದರು.
Advertisement
Game Changer – Lockie Ferguson #Dream11IPL pic.twitter.com/NtGtGr7jlR
— IndianPremierLeague (@IPL) October 18, 2020
Advertisement
ಇಂದು ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ ಕೊನೆಯಲ್ಲಿ ದಿನೇಶ್ ಕಾರ್ತಿಕ್ ಮತ್ತು ಇಯೋನ್ ಮೋರ್ಗನ್ ಅವರ ಕ್ಯಾಮಿಯೊಂ ಇನ್ನಿಂಗ್ಸ್ ನಿಂದ ನಿಗದಿತ 20 ಓವರಿನಲ್ಲಿ 163 ರನ್ ಪೇರಿಸಿತು. ಈ ಗುರಿಯನ್ನು ಬೆನ್ನತ್ತಿದ ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡರು ಕೊನೆಯಲ್ಲಿ ಡೇವಿಡ್ ವಾರ್ನರ್ ಅವರ ಅದ್ಭುತ ಆಟವಾಡಿದರು. ಹೀಗಾಗಿ ಪಂದ್ಯ ಟೈ ಆಯ್ತು. ಸೂಪರ್ ಓವರಿನಲ್ಲಿ ಜಯ ಕೋಲ್ಕತ್ತಾ ಪಾಲಾಯ್ತು.
WATCH – Lockie's yorker to castle Pandey.
Bowling them fast and with accuracy, Lockie Ferguson bowled the perfect yorker to send Manish Pandey packing. Super fast bowling from Ferguson.https://t.co/mnSKvFlgUn #Dream11IPL
— IndianPremierLeague (@IPL) October 18, 2020
ಫರ್ಗುಸನ್ ದಾಳಿಗೆ ಹೈದರಾಬಾದ್ ಥಂಡ
ಇಂದು ಕೋಲ್ಕತ್ತಾ ಪರ ಸೂಪರ್ ಬೌಲ್ ಮಾಡಿದ ಫರ್ಗುಸನ್ ಮೂರು ಎಸೆತದಲ್ಲಿ ಎರಡು ವಿಕೆಟ್ ಕಿತ್ತು ಕೇವಲ 2 ರನ್ ನೀಡಿದರು. ಜೊತೆಗೆ ಇಂದಿನ ಪಂದ್ಯದಲ್ಲಿ ವೇಗಿ ಲಾಕಿ ಫರ್ಗುಸನ್ ಉತ್ತಮವಾಗಿ ಬೌಲ್ ಮಾಡಿದರು. ತಮ್ಮ ಕೋಟದ ನಾಲ್ಕು ಓವರ್ ಬೌಲ್ ಮಾಡಿದ ಲುಕಿ ಮೂರು ವಿಕೆಟ್ ಪಡೆದು ಕೇವಲ 15 ರನ್ ನೀಡಿದರು. ಈ ಮೂಲಕ ಒಟ್ಟು ಐದು ವಿಕೆಟ್ ಪಡೆದು ಕೋಲ್ಕತ್ತಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
What a game Ferguson is having. Strikes for the third time and Manish Pandey departs for 6.
Live – https://t.co/OX1V4mtyV3 #Dream11IPL pic.twitter.com/onYALpdksT
— IndianPremierLeague (@IPL) October 18, 2020
ವಿದೇಶಿ ಆಟಗಾರನಾಗಿ ವಾರ್ನರ್ ದಾಖಲೆ
ಇಂದಿನ ಪಂದ್ಯದಲ್ಲಿ ವಿದೇಶಿ ಆಟಗಾರನಾಗಿ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಅವರು ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ವಿದೇಶಿ ಪ್ಲೇಯರ್ ಆಗಿ ಐಪಿಎಲ್‍ನಲ್ಲಿ ಐದು ಸಾವಿರ ರನ್ ಪೂರ್ಣಗೊಳಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. 135 ಪಂದ್ಯಗಳಲ್ಲಿ ವಾರ್ನರ್ ಅವರು ಈ ಸಾಧನೆ ಮಾಡಿದ್ದಾರೆ. ಇವರಾದ ನಂತರ ವಿದೇಶಿ ಆಟಗಾರರ ಪೈಕಿ ಐಪಿಎಲ್‍ನಲ್ಲಿ ಅತೀ ಹೆಚ್ಚು ರನ್‍ಗಳಿಸಿರುವ ಪಟ್ಟಿಯಲ್ಲಿ 4,680 ರನ್ ಗಳಿಸಿದ ಎಬಿಡಿ ವಿಲಿಯರ್ಸ್ ಅವರು ಇದ್ದಾರೆ.
5000 runs for @davidwarner31 in IPL ????????
Fastest to achieve this feat.#Dream11IPL pic.twitter.com/RP4wJfuT97
— IndianPremierLeague (@IPL) October 18, 2020
ಕೋಲ್ಕತ್ತಾ ನೀಡಿದ ಸಾಧಾರಣ ಮೊತ್ತ ಬೆನ್ನತ್ತಿದ ಹೈದರಾಬಾದ್ ತಂಡಕ್ಕೆ ಭರ್ಜರಿ ಆರಂಭ ದೊರೆಯಿತು. ಇಂದು ಓಪನರ್ ಆಗಿ ಕಣಕ್ಕಿಳಿದ ಜಾನಿ ಬೈರ್‍ಸ್ಟೋವ್ ಮತ್ತು ಕೇನ್ ವಿಲಿಯಮ್ಸನ್ ಅದ್ಭುತವಾಗಿ ಬ್ಯಾಟ್ ಬೀಸಿದರು. ಈ ಮೂಲಕ 32 ಎಸೆತದಲ್ಲೇ ಮೊದಲನೇ ವಿಕೆಟ್‍ಗೆ ಈ ಜೋಡಿ ಅರ್ಧಶತಕದ ಜೊತೆಯಾಟವಾಡಿತು. ಜೊತೆಗೆ ಪವರ್ ಪ್ಲೇ ಮುಕ್ತಾಯದ ವೇಳಗೆ ಒಂದು ವಿಕೆಟ್ ಕಳೆದುಕೊಳ್ಳದೇ 57 ರನ್ ಸಿಡಿಸಿ ಮುನ್ನುಗುತ್ತಿತ್ತು.
WICKET!
Ferguson gets Priyam Garg clean bowled.
Live – https://t.co/OX1V4mtyV3 #Dream11IPL pic.twitter.com/yqA6ekiSjl
— IndianPremierLeague (@IPL) October 18, 2020
ಆದರೆ ಈ ವೇಳೆ ದಾಳಿಗಿಳಿದ ಲಾಕಿ ಫರ್ಗುಸನ್ ಅವರು 19 ಬಾಲಿಗೆ 29 ರನ್ ಸಿಡಿಸಿ ಆಡುತ್ತಿದ್ದ ಕೇನ್ ವಿಲಿಯಮ್ಸನ್ ಅವರನ್ನು ಔಟ್ ಮಾಡಿದರು. ನಂತರ ಬಂದ ಪ್ರಿಯಮ್ ಗಾರ್ಗ್ ಅವರು 4 ರನ್ ಗಳಿಸಿ ಫರ್ಗುಸನ್ ಅವರಿಗೆ ವಿಕೆಟ್ ಒಪ್ಪಿಸಿದರು. ಇದಾದ ನಂತರ ತಾಳ್ಮೆಯಿಂದ ಆರಂಭದಿಂದಲೂ ಆಡಿಕೊಂಡು ಬರುತ್ತಿದ್ದ ಜಾನಿ ಬೈರ್‍ಸ್ಟೋವ್ ಅವರು 28 ಬಾಲಿಗೆ 36 ರನ್ ಸಿಡಿಸಿ ವರುಣ್ ಚಕ್ರವರ್ತಿ ಸ್ಪಿನ್ ಮೋಡಿಗೆ ಬಲಿಯಾದರು. ನಂತರ ಮನೀಶ್ ಪಾಂಡೆ ಫರ್ಗುಸನ್ ಬೌಲಿಗ್‍ಗೆ ಬೌಲ್ಡ್ ಆಗಿ ಹೊರನಡೆದರು.
Lockie Ferguson comes into the attack and gets the wicket of Kane Williamson with the very first ball.
Live – https://t.co/OX1V4mtyV3 #Dream11IPL pic.twitter.com/twnSyNq30j
— IndianPremierLeague (@IPL) October 18, 2020
ಇದಾದ ನಂತರ 15ನೇ ಓವರ್ ಎರಡನೇ ಬಾಲಿನಲ್ಲಿ ವಿಜಯ್ ಶಂಕರ್ ಅವರು ಔಟ್ ಆಗಿ ಪೆವಿಲಿಯನ್ ಸೇರಿದರು. ನಂತರ ಕೊನೆಯಲ್ಲಿ ಅಬ್ದುಲ್ ಸಮದ್ ಅವರು ನಾಯಕ ಡೇವಿಡ್ ವಾರ್ನರ್ ಜೊತೆಗೂಡಿ ಉತ್ತಮವಾಗಿ ಬ್ಯಾಟ್ ಬೀಸಿದರು. ಆದರೆ 19ನೇ ಓವರಿನ ಕೊನೆಯ ಬಾಲಿನಲ್ಲಿ 23 ರನ್‍ಗಳಿಸಿದ್ದ ಅಬ್ದುಲ್ ಸಮದ್ ಬೌಡರಿ ಗೆರೆಯ ಬಳಿ ಲಾಕಿ ಫರ್ಗುಸನ್ ಹಿಡಿದು ಕ್ಯಾಚಿಗೆ ಬಲಿಯಾಗಿದರು.
A 50-run partnership comes up between #SRH openers, Kane and Bairstow.
Live – https://t.co/OX1V4mtyV3 #Dream11IPL pic.twitter.com/yXpV18oZIX
— IndianPremierLeague (@IPL) October 18, 2020
ಈ ಮೊದಲು ಬ್ಯಾಟ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ ಸನ್‍ರೈಸರ್ಸ್ ಹೈದರಾಬಾದ್ ಬೌಲರ್ ಗಳ ದಾಳಿಗೆ ತತ್ತರಿಸಿ ಹೋಯ್ತು. ಒಳ್ಳೆಯ ಆರಂಭ ಕಂಡರು ದೊಡ್ಡ ಮೊತ್ತದ ಗುರಿ ನೀಡುವಲ್ಲಿ ವಿಫಲವಾಗಿತ್ತು. ವಿಕೆಟ್ ಕಳೆದುಕೊಂಡು ಕಮ್ಮಿ ಮೊತ್ತಕ್ಕೆ ಕುಸಿಯುವ ಹಂತದಲ್ಲಿದ್ದ ಕೆಕೆಆರ್ ತಂಡಕ್ಕೆ ನಾಯಕ ಇಯೊನ್ ಮೋರ್ಗಾನ್ ಮತ್ತು ದಿನೇಶ್ ಕಾರ್ತಿಕ್ ಅವರು ಉತ್ತಮ ಕೊಡುಗೆ ನೀಡಿದರು. ಜೊತೆಗೆ ತಂಡವು 164 ರನ್ ಪೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.