ವಾಷಿಂಗ್ಟನ್: ಶತಕೋಟ್ಯಧಿಪತಿ, ವಿಶ್ವದ ನಂಬರ್ 2 ಶ್ರೀಮಂತ ಉದ್ಯಮಿ, ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಕಂಪನಿಯ ಸ್ಥಾಪಕ ಎಲೋನ್ ಮಸ್ಕ್ ಸೂಪರ್ ಪವರ್ ಟೆಕ್ನಾಲಜಿಯನ್ನು ಅಭಿವೃದ್ಧಿ ಪಡಿಸಿದವರಿಗೆ 100 ದಶಲಕ್ಷ ಅಮೆರಿಕನ್ ಡಾಲರ್(ಅಂದಾಜು 729 ಕೋಟಿ ರೂ.) ಬಹುಮಾನ ನೀಡುವುದಾಗಿ ಪ್ರಕಟಿಸಿದ್ದಾರೆ.
ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಸೆರೆಹಿಡಿಯುವ ಅತ್ಯುತ್ತಮ ತಂತ್ರಜ್ಞಾನವನ್ನು ಕಂಡುಹಿಡಿದವರಿಗೆ 100 ದಶಲಕ್ಷ ಡಾಲರ್ ಹಣವನ್ನು ನೀಡುತ್ತೇನೆ ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ. ಇನ್ನೊಂದು ಟ್ವೀಟ್‌ನಲ್ಲಿ ಮುಂದಿನ ವಾರ ವಿವರ ನೀಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಟೆಸ್ಲಾ ಘಟಕ – ಯಾವ ಕಾರು ಬಿಡುಗಡೆಯಾಗಬಹುದು? ಬೆಲೆ ಎಷ್ಟು?
Advertisement
Details next week
— Elon Musk (@elonmusk) January 21, 2021
Advertisement
ಎಲೆಕ್ಟ್ರಿಕ್ ಕಾರು ತಯಾರಿಸುವ ಟೆಸ್ಲಾ ಕಂಪನಿಯ ಷೇರುಗಳ ಬೆಲೆ ಏರಿಕೆಯಾಗಿದ್ದ ಕಾರಣ ಕೆಲ ದಿನಗಳ ಹಿಂದೆ ಮಾಸ್ಕ್ ವಿಶ್ವದ ನಂಬರ್ 1 ಶತಕೋಟಿ ಉದ್ಯಮಿಯಾಗಿ ಹೊರ ಹೊಮ್ಮಿದ್ದರು.
Advertisement
2020ರ ಜನವರಿಯಲ್ಲಿ ಶ್ರೀಮಂತರ ಪಟ್ಟಿಯಲ್ಲಿ ಎಲೋನ್ ಮಸ್ಕ್ ಈ ಜಾಗತಿಕ ಪಟ್ಟಿಯಲ್ಲಿ 35ನೇ ಸ್ಥಾನದಲ್ಲಿದ್ದರು. ಕಳೆದ ಒಂದು ವರ್ಷದಲ್ಲಿ ಮಸ್ಕ್ ಸಂಪತ್ತು 150 ಶತಕೋಟಿ ಡಾಲರ್ ಹೆಚ್ಚಳವಾಗಿದೆ. ಈ ಮೂಲಕ ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಸಂಪತ್ತು ಹೆಚ್ಚಿಸಿಕೊಂಡ ವಿಶ್ವದ ಮೊದಲ ಉದ್ಯಮಿ ಎಂಬ ಹೆಗ್ಗಳಿಕೆಗೆ ಮಸ್ಕ್ ಪಾತ್ರವಾಗಿದ್ದಾರೆ. ಕಳೆದ ಒಂದು ವರ್ಷದಲ್ಲಿ ಪ್ರತಿ ಗಂಟೆಗೆ 17.36 ದಶಲಕ್ಷ ಡಾಲರ್(ಅಂದಾಜು 127 ಕೋಟಿ ರೂ.) ಸಂಪತ್ತು ಗಳಿಸಿದ್ದರಿಂದ ಮಸ್ಕ್ ವಿಶ್ವದ ನಂಬರ್ 1 ಶ್ರೀಮಂತರಾಗಿ ಹೊರಹೊಮ್ಮಿದ್ದರು. ಕಳೆದ ಒಂದು ವರ್ಷದಲ್ಲಿ ಎಲೆಕ್ಟ್ರಿಕ್ ಕಾರು ಕಂಪನಿ ಟೆಸ್ಲಾದ ಷೇರು ಬೆಲೆ ಭಾರೀ ಏರಿಕೆ ಕಂಡಿದೆ. ಪ್ರಸ್ತುತ ಟೆಸ್ಲಾ ಕಂಪನಿಯಲ್ಲಿ ಮಸ್ಕ್ ಶೇ.20 ರಷ್ಟು ಷೇರುಗಳನ್ನು ಹೊಂದಿದ್ದಾರೆ.
Advertisement
ಟೆಸ್ಲಾ ಕಂಪನಿಯ ಷೇರುಗಳು ಒಂದೇ ವರ್ಷದ ಅವಧಿಯಲ್ಲಿ ಶೇ. 743ರಷ್ಟು ಮೇಲೇರಿವೆ. ವಿಶೇಷ ಏನೆಂದರೆ ಟೆಸ್ಲಾ ಕಂಪನಿ 2020ರಲ್ಲಿ ಒಟ್ಟು 4,99,550 ಕಾರನ್ನು ಉತ್ಪಾದಿಸಿತ್ತು. ಹಾಗೆ ಲೆಕ್ಕ ಹಾಕಿದರೆ ಜಗತ್ತಿನ ಅತಿ ದೊಡ್ಡ ಕಾರು ಉತ್ಪಾದನಾ ಕಂಪನಿಗಳಾದ ಜನರಲ್ ಮೋಟರ್ಸ್, ಫೋರ್ಡ್, ಟೊಯೋಟಾ, ಹೋಂಡಾ ಕಂಪನಿಗಳು ಒಂದೇ ತಿಂಗಳಿನಲ್ಲಿ ಈ ಪ್ರಮಾಣದ ಕಾರುಗಳನ್ನು ಉತ್ಪಾದಿಸುತ್ತಿವೆ. ಟೆಸ್ಲಾ ಕಂಪನಿಯ ಎಲೆಕ್ಟ್ರಿಕ್ ಕಾರು ದುಬಾರಿಯಾಗಿದ್ದರೂ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆ ಬೇಡಿಕೆ ಹೆಚ್ಚಾಗಲಿದೆ. ಈ ಕಾರಣಕ್ಕೆ ಟೆಸ್ಲಾ ಷೇರುಗಳ ಬೆಲೆ ಏರಿಕೆಯಾಗುತ್ತಿದೆ.