ಸುಶಾಂತ್ ಸೋದರಿ ವಿರುದ್ಧ ದೂರು ದಾಖಲಿಸಿದ ರಿಯಾ

Public TV
1 Min Read
Sushant priyanka Rhea

ಮುಂಬೈ: ಧೋನಿ ಸಿನಿಮಾ ಖ್ಯಾತಿಯ ನಟ ಸುಶಾಂತ್ ಸಿಂಗ್ ರಜಪೂತ್ ಸೋದರಿ ಪ್ರಿಯಾಂಕಾ ಸಿಂಗ್ ವಿರುದ್ಧ ನಟಿ ರಿಯಾ ಚಕ್ರವರ್ತಿ ವಿರುದ್ಧ ದೂರು ದಾಖಲಿಸಿದ್ದಾರೆ. ಇದರ ಜೊತೆಗೆ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ವೈದ್ಯ ತರೂಣ್ ಕುಮಾರ್ ನಕಲಿ ಪ್ರಿಸ್ಕ್ರಿಪಶನ್ ನೀಡಿದ್ದಾರೆ ಎಂದು ಆರೋಪಿಸಿ ದೂರಿನಲ್ಲಿ ರಿಯಾ ಉಲ್ಲೇಖಿಸಿದ್ದಾರೆ.

Rhea Chakraborty rother Showik

ಮೋಸ, ಎನ್‍ಡಿಪಿಎಸ್ ಆ್ಯಕ್ಟ್ ಮತ್ತು ಟೆಲಿ ಮೆಡಿಸಿನ್ ಪ್ರ್ಯಾಕ್ಟಿಸ್ ಗೈಡ್‍ಲೈನ್ಸ್ 2020ರ ಅನ್ವಯ ರಿಯಾ ಪರ ವಕೀಲ ಮನಿಶ್ಚಂದ್ ದೂರು ಸಲ್ಲಿಸಿದ್ದಾರೆ. ಜೂನ್ 8ರಂದು ಪ್ರಿಯಾಂಕಾ ಸಿಂಗ್ ಮತ್ತು ಡಾ.ತರೂಣ್ ಸಿಂಗ್ ಇಬ್ಬರು ಸುಶಾಂತ್‍ಗೆ ನಕಲಿ ಮೆಡಿಕಲ್ ಪ್ರಿಸ್ಕ್ರಿಪಶನ್ ನೀಡಿದ್ದಾರೆ. ಇದರಲ್ಲಿ ಎನ್‍ಡಿಪಿಎಸ್ ಆ್ಯಕ್ಟ್ ನಲ್ಲಿ ನಿಷೇಧಿತ ಔಷಧಿಗಳನ್ನ ಬರೆಯಲಾಗಿತ್ತು ಎಂದು ರಿಯಾ ಆರೋಪಿಸಿದ್ದಾರೆ. ಇದನ್ನೂ ಓದಿ: ಅಭಿನಂದನೆಗಳು ಭಾರತ, ನನ್ನ ಮಗನನ್ನ ಬಂಧಿಸಿದ್ದೀರಿ – ರಿಯಾ ತಂದೆಯ ನೋವಿನ ಮಾತು

RheaChakraborty16

ಡ್ರಗ್ಸ್ ಪ್ರಕರಣದಲ್ಲಿ ರಿಯಾ ಸೋದರ ಶೌವಿಕ್ ಚಕ್ರವರ್ತಿ ಮತ್ತು ಮ್ಯಾನೇಜರ್ ಸ್ಯಾಮುಯೆಲ್ ಮಿರಾಂಡ್ ನನ್ನು ಎನ್‍ಸಿಬಿ ಬಂಧಿಸಿ ವಿಚಾರಣೆ ನಡೆಸುತ್ತಿದೆ. ರಿಯಾ ಎರಡನೇ ಬಾರಿ ಎನ್‍ಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ರಿಯಾ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಹೇಳಲಾಗುತ್ತಿದ್ದು, ಬಂಧನವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *