-ರಿಯಾ ಕೈಯಲ್ಲಿ ಸುಶಾಂತ್ ಹಣದ ವ್ಯವಹಾರ
ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಆಡಿಯೋ ಕ್ಲಿಪ್ ಔಟ್ ಆಗಿದೆ. ಸುಶಾಂತ್ ನಿಧನಕ್ಕೂ ಸುಮಾರು ಐದು ತಿಂಗಳ ಮುನ್ನ ನಡೆಸಿದ ಫೋನ್ ಸಂಭಾಷಣೆಯ ಕ್ಲಿಪ್ ರಿವೀಲ್ ಆಗಿದೆ.
ಈ ಆಡಿಯೋ ಕ್ಲಿಪ್ ನಲ್ಲಿ ಸುಶಾಂತ್, ಗೆಳತಿ ರಿಯಾ ಚಕ್ರವರ್ತಿ, ರಿಯಾ ತಂದೆ ಇಂದ್ರಜಿತ್ ಮತ್ತು ಆರ್ಥಿಕ ಸಲಹೆಗಾರರ ಜೊತೆ ಚರ್ಚೆ ನಡೆಸಿದ್ದಾರೆ. ಐವರ ಆಡಿಯೋ ಕ್ಲಿಪ್ ರಿವೀಲ್ ಆಗಿದ್ದು, ಸುಶಾಂತ್ ಹಣಕಾಸಿನ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರೋದು ಮೇಲ್ನೋಟಕ್ಕೆ ಕಾಣಿಸುತ್ತದೆ.
ಹೊಸ ಸ್ಥಳದಲಿ ಸುಶಾಂತ್ ಜೊತೆ ನಾನು (ರಿಯಾ), ಶೃತಿ ಮೋದಿ (ಮಾಜಿ ಸಹಾಯಕಿ), ಸ್ಯಾಮುಯೆಲ್ (ಸಹಾಯಕ) ಇಲ್ಲದ ವೇಳೆ ಯಾರಿಗಾದ್ರೂ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಸಿಕ್ಕರೆ ಏನು ಮಾಡೋದು? ಹಾಗಾಗಿ ಹಣ ಡ್ರಾ ಲಿಮಿಟ್ 10 ರಿಂದ 15 ಲಕ್ಷ ರೂ.ಗೆ ಇರುವಂತೆ ನೋಡಿಕೊಳ್ಳುವುದು. ಉಳಿದ ಹಣವನ್ನ ಎಫ್‍ಡಿ ಮಾಡೋದು. ಎಫ್ ಡಿ ಮಾಡಿದ್ರೆ ನಮಗೆ ಬಡ್ಡಿ ಸಿಗುತ್ತೆ. ಸುಶಾಂತ್ ಸಹಿ ಇಲ್ಲದೇ ಯಾರೂ ಎಫ್‍ಡಿ ಯಿಂದ ಹಣ ತೆಗೆಯಲು ಆಗಲ್ಲ ಎಂದು ರಿಯಾ ಹೇಳುತ್ತಾರೆ.
ಶಾಂತವಾದ ಸ್ಥಳದಲ್ಲಿರಲು ಸುಶಾಂತ್ ಉಳಿದುಕೊಳ್ಳಲು ಇಷ್ಟಪಡುತ್ತಿದ್ದಾರೆ. ಹಾಗಾಗಿ ಪಪಾವನಾ (ಮಹಾರಾಷ್ಟ್ರ) ಗೆ ತೆರಳಲು ಸಲಹೆ ನೀಡಿದ್ದೇನೆ. ಒಂದೆರಡು ದಿನ ಅಲ್ಲಿದ್ದುಕೊಂಡು ನಂತ್ರ ಮುಂದಿನ ನಿರ್ಧಾರ ತೆಗೆದುಕೊಳ್ಳೋಣ ಎಂದು ರಿಯಾ ಹೇಳಿದ್ದಾರೆ. ಹೀಗೆ ಸುಶಾಂತ್ ಜೀವನಕ್ಕೆ ಸಂಬಂಧಿಸಿದ ಎಲ್ಲ ನಿರ್ಧಾರಗಳನ್ನು ರಿಯಾ ತೆಗೆದುಕೊಂಡಿರೋದು ಈ ಎಲ್ಲ ಮಾತುಗಳಿಂದ ಸ್ಪಷ್ಟವಾಗುತ್ತದೆ.
ಈ 36 ನಿಮಿಷದ ಆಡಿಯೋ ಕ್ಲಿಪ್ ನಲ್ಲಿ ಸುಶಾಂತ್, ಬಣ್ಣದ ಲೋಕದಿಂದ ದೂರ ಉಳಿಯುವ ಬಗ್ಗೆ, ಹಸಿರು ಪರಿಸರದಲ್ಲಿ ಸೆಟಲ್ ಆಗುವ ಕುರಿತು ಮಾತನಾಡಿದ್ದಾರೆ. ಇದರ ಜೊತೆಗೆ ಖರ್ಚುಗಳನ್ನ ಹೇಗೆ ಕಡಿಮೆ ಮಾಡೋದು ಮತ್ತು ಭವಿಷ್ಯದ ಕುರಿತು ಸಹ ಮಾತನಾಡಿದ್ದಾರೆ.