ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಈ ಕುರಿತು ಸುಶಾಂತ್ ಮಾಜಿ ಗೆಳತಿ, ನಟಿ ಅಂಕಿತಾ ಲೋಖಂಡೆ, ಸತ್ಯದ ಮೊದಲ ಹೆಜ್ಜೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.
ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ನ್ಯಾಯದೇವತೆಯ ಫೋಟೋ ಹಂಚಿಕೊಂಡಿರುವ ಅಂಕಿತಾ ಲೋಖಂಡೆ, ನ್ಯಾಯದ ಪ್ರಕ್ರಿಯೆ ಸತ್ಯದ ಮಾರ್ಗದಲ್ಲಿದೆ. ಇದು ಸತ್ಯದ ಗೆಲುವು ಎಂದಿಉ ಬರೆದುಕೊಂಡಿದ್ದಾರೆ. ಸುಶಾಂತ್ ನಿಧನ ಒಂದು ತಿಂಗಳ ಬಳಿಕ ಅಂಕಿತಾ ಲೋಖಂಡೆ ಗೆಳೆಯನ ನಿಧನದ ಬಗ್ಗೆ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದರು. ತದನಂತರ ಗೆಳೆಯನ ವಿಚಾರಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದರು. ಇದನ್ನೂ ಓದಿ: ಪೊಲೀಸರಿಗೆ ದೂರು ನೀಡಿದ ಸುಶಾಂತ್ ಮಾಜಿ ಮ್ಯಾನೇಜರ್ ದಿಶಾ ತಂದೆ
Advertisement
Advertisement
ಸುಶಾಂತ್ ಪ್ರಕರಣದ ತನಿಖೆಯಲ್ಲಿ ಮೊದಲಿಗೆ ಮುಂಬೈ ಪೊಲೀಸರು ಆರಂಭಿಸಿದ್ದರು. ಪ್ರಕರಣದ ತನಿಖೆಯಲ್ಲಿ ನಟಿ ರಿಯಾ ಚಕ್ರವರ್ತಿ ಹೆಸರು ಬಲವಾಗಿ ಕೇಳಿ ಬಂದಿತ್ತು. ಸುಶಾಂತ್ ಸಿಂಗ್ ತಂದೆ ಒಂದೂವರೆ ತಿಂಗಳ ಬಳಿಕ ಪಾಟ್ನಾದಲ್ಲಿ ನಟಿ ರಿಯಾ ವಿರುದ್ಧ ದೂರು ದಾಖಲಿಸಿದ್ದರು. ದೂರಿನನ್ವಯ ಎಫ್‍ಐಆರ್ ದಾಖಲಿಸಿಕೊಂಡ ಪಾಟ್ನಾ ಪೊಲೀಸರು ತನಿಖೆಯನ್ನ ಆರಂಭಿಸಿದ್ದರು. ಇದನ್ನೂ ಓದಿ: ಫ್ಲ್ಯಾಟ್ ಇಎಂಐ ಸುಶಾಂತ್ ಪಾವತಿಸಿಲ್ಲ-ಬ್ಯಾಂಕ್ ಸ್ಟೇಟಮೆಂಟ್ ಫೋಟೋ ಹಂಚಿಕೊಂಡ ನಟಿ ಅಂಕಿತಾ ಲೋಖಂಡೆ
Advertisement
Justice is the truth in action ????????
Truth wins …. #1ststeptossrjustice pic.twitter.com/2CKgoWCYIL
— Ankita lokhande Jain (@anky1912) August 19, 2020
Advertisement
ಇತ್ತ ಪಾಟ್ನಾದಲ್ಲಿ ದಾಖಲಾದ ಪ್ರಕರಣವನ್ನು ಮುಂಬೈ ಪೊಲೀಸರಿಗೆ ವರ್ಗಾಯಿಸಬೇಕೆಂದು ನಟಿ ರಿಯಾ ಚಕ್ರವರ್ತಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಪಾಟ್ನಾ ಮತ್ತು ಮಂಬೈ ಪೊಲೀಸರ ಹಗ್ಗಜಗ್ಗಾಟದ ಬಳಿಕ ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರಕರಣದ ತನಿಖೆ ಸಿಬಿಐಗೆ ವರ್ಗಾಯಿಸುವಂತೆ ಕೇಂದ್ರ ಸರ್ಕಾರ ಪತ್ರ ಬರೆದಿದ್ದರು. ಸಿಎಂ ಶಿಫಾರಸ್ಸಿನ ಬೆನ್ನಲ್ಲೇ ಕೇಂದ್ರ ಸರ್ಕಾರ ಸಿಬಿಐಗೆ ತನಿಖೆಗೆ ಸಮ್ಮತಿ ಸೂಚಿಸಿತ್ತು. ಆದ್ರೆ ಮಹಾರಾಷ್ಟ್ರದ ಸರ್ಕಾರ ಸಿಬಿಐ ತನಿಖೆಗೆ ವಿರೋಧ ವ್ಯಕ್ತಪಡಿಸಿತ್ತು. ಕಂಗನಾ ರಣಾವತ್, ಅಂಕಿತಾ ಲೋಖಂಡೆ ಸೇರಿದಂತೆ ಅಪಾರ ಅಭಿಮಾನಿಗಳು ಪ್ರಕರಣದ ತನಿಖೆ ಸಿಬಿಐಗೆ ವರ್ಗಾಯಿಸುವಂತೆ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಆರಂಭಿಸಿದ್ದರು. ಇದನ್ನೂ ಓದಿ: ಸುಶಾಂತ್ ಖಾತೆಯಿಂದ ರಿಯಾ ಅಕೌಂಟ್‍ಗೆ ಹೋಗಿದ್ದ ಹಣ ಪತ್ತೆ ಹಚ್ಚಿದ ಇಡಿ
ಸುಶಾಂತ್ ಕೇಸ್, ರಿಯಾಗೆ ಹಿನ್ನಡೆ – ಸಿಬಿಐ ತನಿಖೆಗೆ ಅಸ್ತು https://t.co/EK7gNPdm7e#SushantSingRajputDeathCase #CBITakesOver #CBI #SupremeCourt #RheaChakraborthy #Bollywood #SushantSinghRajpoot
— PublicTV (@publictvnews) August 19, 2020