ಸುಶಾಂತ್ ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸ್ತಿದ್ದ ರಿಯಾ

Public TV
1 Min Read
rhea chakraborty

-ಪೊಲೀಸ್ ತನಿಖೆ ವೇಳೆ ಮತ್ತಷ್ಟು ಸತ್ಯ ರಿವೀಲ್

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಹಲವು ಅನುಮಾನಗಳನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರು ಸಹ ತನಿಖೆಯನ್ನು ಮುಂದುವರಿಸಿದ್ದು, ಹಲವರನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಇದೀಗ ಸುಶಾಂತ್ ಅವರ ಡೆಬಿಟ್, ಕ್ರೆಡಿಟ್ ಕಾರ್ಡ್ ಗಳನ್ನು ಗೆಳತಿ ರಿಯಾ ಚಕ್ರವರ್ತಿ ಬಳಸುತ್ತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

Rhea Sushant

ಸುಶಾಂತ್ ನಿಧನಕ್ಕೂ 11 ತಿಂಗಳು ಮೊದಲು ರಿಯಾ ಶಾಪಿಂಗ್ ಗಾಗಿ ಹಣವನ್ನು ಗೆಳೆಯನಿಂದ ಪಡೆಯುತ್ತಿದ್ರು. ಸುಶಾಂತ್ ಬಳಿಯ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಪಾಸ್‍ವರ್ಡ್ ಸಹ ರಿಯಾಗೆ ತಿಳಿದಿತ್ತು. ರಿಯಾ ಜಾಹೀರಾತು ಚಿತ್ರೀಕರಣಕ್ಕಾಗಿ ಲಂಡನ್ ಗೆ ತೆರಳಿದ್ದ ಎಲ್ಲ ಖರ್ಚುಗಳನ್ನು ಸುಶಾಂತ್ ನೋಡಿಕೊಂಡಿದ್ದರು ಎಂಬ ವಿಷಯ ರಿವೀಲ್ ಆಗಿದೆ. ಈಗ ರಿಯಾ ಸುಶಾಂತ್ ಕಾರ್ಡ್ ನಿಂದ ಎಷ್ಟು ಶಾಪಿಂಗ್ ಮಾಡಿದ್ದರು ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Rhea Chakraborty and sushant singh

ಸುಶಾಂತ್ ನಿಧನದ ಒಂದು ತಿಂಗಳ ಬಳಿಕ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವಂತೆ ರಿಯಾ ಕೇಂದ್ರಗೃಹ ಸಚಿವ ಅಮಿತ್ ಶಾ ಬಳಿ ಮನವಿ ಮಾಡಿಕೊಂಡಿದ್ದರು. ಈ ವೇಳೆ ತಾನು ಸುಶಾಂತ್ ಗೆಳತಿ ಎಂಬುವುದನ್ನು ಮೊದಲ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡಿದ್ದರು.

Rhea 1

ಲಾಕ್‍ಡೌನ್ ಸಂದರ್ಭದಲ್ಲಿ ರಿಯಾ ಮತ್ತು ಸುಶಾಂತ್ ಒಂದೇ ಮನೆಯಲ್ಲಿ ವಾಸವಾಗಿದ್ರು. ಇಬ್ಬರ ಮಧ್ಯೆ ಜಗಳವಾಗಿದ್ದರಿಂದ ರಿಯಾ ಸುಶಾಂತ್ ತಮ್ಮ ಮನೆಗೆ ಹಿಂದಿರುಗಿದ್ದರು. ಸುಶಾಂತ್ ಸಾಯುವ ಒಂದು ದಿನ ಮೊದಲು ರಿಯಾಗೆ ಕಾಲ್ ಮಾಡಿದ್ದರು. ಆದರೆ ರಿಯಾ ಕರೆ ಸ್ವೀಕರಿಸಿಲಿಲ್ಲ ಎಂದು ಹೇಳಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *