-18 ಗಂಟೆ ಇಡಿ ವಿಚಾರಣೆಗೆ ಹಾಜರಾದ ರಿಯಾ ಚಕ್ರವರ್ತಿ
ಮುಂಬೈ: ಸತತ 18 ಗಂಟೆಗಳ ಕಾಲ ನಟಿ ರಿಯಾ ಚಕ್ರವರ್ತಿಯನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಸುಶಾಂತ್ ಬಳಸುತ್ತಿದ್ದ ಕೊಟಕ್ ಬ್ಯಾಂಕ್ ಖಾತೆಯಿಂದ ರಿಯಾ ಮತ್ತು ಅವರ ಕುಟುಂಬಸ್ಥರ ಖಾತೆಗೆ 55 ಲಕ್ಷ ಹಲವು ಕಂತುಗಳಲ್ಲಿ ವರ್ಗಾವಣೆ ಆಗಿದೆ ಎಂದು ಪತ್ರಿಕೆಗಳು ಪ್ರಕಟಿಸಿವೆ.
ಕಳೆದ ವರ್ಷ ಸುಶಾಂತ್ ಖಾತೆಯಲ್ಲಿ 15 ಕೋಟಿ ರೂ. ಇತ್ತು. ಇದೇ ಹಣದಿಂದ ಸುಶಾಂತ್ ಟ್ಯಾಕ್ಸ್, ಪ್ರಯಾಣದ ವೆಚ್ಚ ಸೇರಿದಂತೆ ಇನ್ನಿತರ ಖರ್ಚುಗಳನ್ನು ಪಾವತಿ ಮಾಡಿದ್ದಾರೆ. ಹಾಗೆ ರಿಯಾ ಮತ್ತು ಸುಶಾಂತ್ ಯಾವುದೇ ಜಾಯಿಂಟ್ ಬ್ಯಾಂಕ್ ಖಾತೆ ಹೊಂದಿರಲಿಲ್ಲ ಎಂಬುದನ್ನು ಏಜೆನ್ಸಿ ಪತ್ತೆ ಮಾಡಿದೆ.
Advertisement
Advertisement
ಇದೇ ವೇಳೆ ರಿಯಾ ಮಾಡುತ್ತಿದ್ದ ಖರ್ಚು ಮತ್ತು ಆದಾಯಕ್ಕೆ ಹೊಂದಾಣಿಕೆ ಆಗದ ಹಿನ್ನೆಲೆಯಲ್ಲಿ ನಿಗದಿತ ಅವಧಿಯೊಳಗೆ ದಾಖಲೆ ಸಲ್ಲಿಸುವಂತೆ ಸೂಚನೆ ನೀಡಿದೆ. ಇನ್ನು ಸುಶಾಂತ್ ಮಾಲೀಕತ್ವದ ಫ್ರಂಟ್ ಇಂಡಿಯಾ ಫಾರ್ ವರ್ಲ್ಡ್ ಫೌಂಡೇಶನ್ ಮತ್ತು ವಿವಿಡ್ರೇಜ್ ರಿಯಾಲಿಟಿಕ್ಸ್ ಪ್ರೈವೇಟ ಲಿಮಿಟೆಡ್ ಎರಡು ಫರ್ಮ್ ಗಳಲ್ಲಿ ರಿಯಾ ಮತ್ತು ಶೌವಿಕ್ ಚಕ್ರವರ್ತಿ ನಿರ್ದೇಶಕರಾಗಿದ್ದಾರೆ. ಇದನ್ನೂ ಓದಿ: ರಿಯಾ ವಿರುದ್ಧ 48 ಪುಟಗಳ ಸಾಕ್ಷಿ ಸಂಗ್ರಹಿಸಿದ ಪಾಟ್ನಾ ಪೊಲೀಸ್
Advertisement
Advertisement
ಸುಶಾಂತ್ ತಂದೆ ಮಗನ ಖಾತೆಯಲ್ಲಿರುವ ಹಣ ಅನಾಮಧೇಯರ ಖಾತೆಗೆ ವರ್ಗಾವಣೆಯಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕೆಂದು ದೂರು ಸಲ್ಲಿಸಿದ್ದರು. ಇತ್ತ ಪ್ರಕರಣದ ತನಿಖೆ ನಡೆಸುತ್ತಿದ್ದ ಮುಂಬೈ ಪೊಲೀಸ್ ಅಕ್ರಮ ಹಣ ವರ್ಗಾವಣೆ ಆಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿತ್ತು.