ಮುಂಬೈ: ಭಾನುವಾರ ಆತ್ಮಹತ್ಯೆ ಮಾಡಿಕೊಂಡ ನಟ ಸುಶಾಂತ್ ಸಿಂಗ್ ರಜಪೂತ್ ಅವರದ್ದು ಆತ್ಮಹತ್ಯೆ ಅಲ್ಲ ಯೋಜಿತ ಕೊಲೆ ಎಂದು ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಅವರು ಆರೋಪ ಮಾಡಿದ್ದಾರೆ.
ಬಾಲಿವುಡ್‍ನಲ್ಲಿ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರ ಬಯೋಗ್ರಾಪಿ ‘ಧೋನಿ’ ಸಿನಿಮಾದಲ್ಲಿ ಅಭಿನಯಿಸಿ ಭಾರತ ಕಲಾರಸಿಕರ ಮನಗೆದ್ದಿದ್ದ ಸುಶಾಂತ್ ಸಿಂಗ್ ರಜಪೂತ್, ಭಾನುವಾರ ತಮ್ಮ ನಿಸವಾದಲ್ಲೇ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಈಗ ಈ ವಿಚಾರವಾಗಿ ಮಾತನಾಡಿರುವ ಕಂಗನಾ ಬಾಲಿವುಡ್‍ನಲ್ಲಿ ಇರುವ ತಾರತಮ್ಯದ ಬಗ್ಗೆ ಕಿಡಿಕಾರಿದ್ದಾರೆ.
ಈ ಬಗ್ಗೆ ವಿಡಿಯೋ ಮಾಡಿರುವ ಕಂಗನಾ, ಸುಶಾಂತ್ ಸಾವಿನಿಂದ ನಮಗೆ ಬಹಳ ದುಃಖವಾಗಿದೆ. ಆದರೆ ಕೆಲವರು ಅವನ ಸಾವಲ್ಲೂ ಕೂಡ ಆಟವಾಡುತ್ತಿದ್ದಾರೆ. ಎಂಜಿನಿಯರಿಂಗ್ ನಲ್ಲಿ ಟಾಪ್ ಮಾಡಿ, ರಾಂಕ್ ಹೋಲ್ಡರ್ ಆಗಿದ್ದ ವ್ಯಕ್ತಿ ಖಿನ್ನತೆಯಿಂದ ಬಳಲಲು ಸಾಧ್ಯನಾ? ಸುಶಾಂತ್ ಲಾಸ್ಟ್ ಪೋಸ್ಟ್ ಅನ್ನು ನೋಡಿ, ಅದರಲ್ಲಿ ಸುಶಾಂತ್ ಜನರಿಗೆ ತನ್ನ ಚಿತ್ರ ನೋಡುವಂತೆ ಮನವಿ ಮಾಡಿದ್ದಾರೆ. ನನಗೆ ಗಾಡ್ ಫಾದರ್ ಇಲ್ಲ, ನನ್ನನ್ನು ಸಿನಿಮಾದಿಂದ ತೆಗೆದು ಹಾಕುತ್ತಾರೆ ಎಂದು ಬೇಡಿಕೊಂಡಿದ್ದರು ಎಂದು ಹೇಳಿದ್ದಾರೆ.
She’s furiously correct !! pic.twitter.com/hTS9ejG2HY
— Sanil Vikram Singh ???????? (@sanilvikram) June 15, 2020
ಸುಶಾಂತ್ ಸಿನಿಮಾ ರಂಗಕ್ಕೆ ಬಂದು ಕಾಯ್ ಪೋಚೆನಂತಹ ಸಿನಿಮಾ ಮಾಡಿದ್ದಾರೆ. ಸ್ಟಾರ್ ಕಿಡ್‍ಗಳ ಡೆಬ್ಯು ಅವಾರ್ಡ್ ನೀಡುವವರು, ಸುಶಾಂತ್‍ಗೆ ಅವಾರ್ಡ್ ಯಾಕೆ ನೀಡಿಲಿಲ್ಲ. ಕೇದರ್ ನಾಥ್, ಧೋನಿ, ಚಿಚೋರೆ ರೀತಿಯ ಒಳ್ಳೆಯ ಸಿನಿಮಾ ಮಾಡಿದ್ದಾರೆ. ಗಲ್ಲಿಬಾಯ್ ರೀತಿಯ ಕೆಟ್ಟ ಸಿನಿಮಾಗಳಿಗೆ ಅವಾರ್ಡ್ ನೀಡುವ ನೀವು, ಚಿಚೋರೆ ರೀತಿಯ ಒಳ್ಳೆಯ ಸಿನಿಮಾ ಗುಡ್ ಡೈರೆಕ್ಟರ್ ಗೆ ಯಾಕೆ ಪ್ರಶಸ್ತಿ ನೀಡುವುದಿಲ್ಲ ಎಂದು ನೇರವಾಗಿಯೇ ನೆಪ್ಟೋಯಿಸಂ ಬಗ್ಗೆ ಮಾತನಾಡಿದ್ದಾರೆ.
ನಾವು ಏನೇ ಮಾಡಿದರೂ ನೀವು ಒಪ್ಪುವುದಿಲ್ಲ. ನಾನು ಕೂಡ ಒಳ್ಳೆಯ ಸಿನಿಮಾ ಮಾಡಿದ್ದೇನೆ. ನಿರ್ಮಾಣ, ನಿರ್ದೇಶನ ಮಾಡಿದ್ದೇನೆ. ನಮ್ಮ ಸಿನಿಮಾವನ್ನು ನೀವು ಯಾಕೆ ಒಪ್ಪುವುದಿಲ್ಲ. ನನ್ನ ಮೇಲೆ ಯಾಕೆ 6 ದೂರುಗಳನ್ನು ದಾಖಲಿಸಿದ್ದೀರಾ? ಒಬ್ಬ ಪತ್ರಕರ್ತ ಸುಶಾಂತ್ ಬಗ್ಗೆ ಬಹಳ ಕೆಟ್ಟದಾಗಿ ಬರೆಯುತ್ತಾನೆ. ಆತ ಖಿನ್ನತೆಗೆ ಒಳಗಾಗಿದ್ದ, ಡ್ರಗ್ಸ್ ಅಡಿಕ್ಟ್ ಎಂದು ಬರೆಯುತ್ತಾರೆ. ಯಾಕೆ ನಿಮಗೆ ಸಂಜಯ್ ದತ್ ಅವರ ಅಡಿಕ್ಷನ್ ಕ್ಯೂಟ್ ಆಗಿ ಇತ್ತಾ ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
ಕೆಲವರು ನನಗೂ ಸಂದೇಶ ಕಳುಹಿಸುತ್ತಾರೆ. ನಿನ್ನ ಟೈಮ್ ಸರಿಯಿಲ್ಲ ಎಂದರೆ ನೀನು ಕೂಡ ಈ ರೀತಿಯ ನಿರ್ಧಾರ ತೆಗೆದುಕೊಳ್ಳಬೇಡ ಎಂದು, ನೀವು ಯಾಕೆ ಆತ್ಮಹತ್ಯೆ ಎಂಬುದನ್ನು ನಮ್ಮ ತಲೆಗೆ ತುಂಬುತ್ತೀರಾ? ಸಮಾಜ ಸುಶಾಂತ್ ನನ್ನು ಪ್ಲಾನ್ ಮಾಡಿ ಮರ್ಡರ್ ಮಾಡಿದೆ. ಆದರೆ ಆತ ದಡ್ಡ, ಸಮಾಜ ಹೇಳಿದ್ದೇಲ್ಲವನ್ನು ನಂಬಿದ್ದ. ಸಮಾಜ ನಿನ್ನ ಕೈಯಲ್ಲಿ ಏನೂ ಮಾಡಲು ಆಗಲ್ಲ ಎಂದರೆ ಅದನ್ನು ಎದುರಿಸದೆ ಒಪ್ಪಿಕೊಂಡಿದ್ದ. ಅದೂ ಅವನು ಮಾಡಿದ ದೊಡ್ಡ ತಪ್ಪು ಎಂದು ಕಂಗನಾ ಹೇಳಿದ್ದಾರೆ.
ಸುಶಾಂತ್ ತನ್ನ ತಾಯಿ ಹೇಳಿದ್ದನ್ನು ಕೇಳಬೇಕಿತ್ತು. ಆತ ಸಮಾಜದ ಮಾತು ಕೇಳಿದ. ಸಮಾಜ ನೀನು ಕೆಲಸಕ್ಕ ಬಾರದವ, ನಿನ್ನ ಕೈಯಲ್ಲಿ ಏನೂ ಮಾಡಲು ಆಗಲ್ಲ ಎಂದು ದೂರಿತ್ತು. ಅದನ್ನು ಮನಸ್ಸಿಗೆ ತೆಗೆದುಕೊಂಡು ಸುಶಾಂತ್ ಹೀಗೆ ಮಾಡಿಕೊಂಡಿದ್ದಾನೆ. ಇತಿಹಾಸವನ್ನು ಯಾರು ಬರೆಯಲಿದ್ದಾರೆ ಎಂಬುದನ್ನು ನಾವು ತೀರ್ಮಾನ ಮಾಡಬೇಕು. ಗೂಗಲ್ ಅದನ್ನು ಬರೆದು ಇಡುತ್ತದೆ ಎಂದು ಕಂಗನಾ ಬಾಲಿವುಡ್ ವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಂಗನಾ ಈ ರೀತಿ ಬಾಲಿವುಡ್‍ನಲ್ಲಿರುವ ನೆಪ್ಟೋಯಿಸಂ ಮತ್ತು ತಾರತಮ್ಯದ ದನಿ ಎತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಕೂಡ ಹಲವಾರು ಬಾರಿ ಮಾತನಾಡಿದ್ದಾರೆ. ಈ ವಿಚಾರವಾಗಿ ಈ ಹಿಂದೆ ಕರಣ್ ಜೋಹರ್ ಅವರನ್ನು ಅವರದ್ದೇ ಶೋನಲ್ಲಿ ತರಾಟೆಗೆ ತೆಗೆದುಕೊಂಡಿದ್ದ ಕಂಗನಾ, ನೀವು ಸಂಕುಚಿತ ಮನಸ್ಸಿನ ಪಾತ್ರ ಮಾಡ್ತೀರಿ. ಸರ್ವಾಧಿಕಾರಿತ್ವ, ಬೇರೆಯವರ ಬಗೆಗಿನ ಕೆಳಮಟ್ಟದ ಯೋಚನೆಗಳು, ಮೂವಿ ಮಾಫಿಯಾದ ಲೀಡರ್ ಆಗಿರುತ್ತೀರಿ ಎಂದು ನೆಪ್ಟೋಯಿಸಂ ತೀಕ್ಷ್ಣವಾಗಿ ಮಾತನಾಡಿದ್ದರು.