ಹಾಸನ: ಈ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಬಡವರ ಮಕ್ಕಳಿಗೆ ಶಿಕ್ಷಣ ಕೊಡಲು ಆಗುತ್ತಿಲ್ಲ. ಪ್ರಾಥಮಿಕ ಶಿಕ್ಷಣ ಕುಸಿದು ಹೋಗುತ್ತಿದೆ. ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಬಂದಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ವಿರುದ್ಧ ಮಾಜಿ ಸಚಿವ ಹೆಚ್‍ಡಿ ರೇವಣ್ಣ ಕಿಡಿಕಾರಿದ್ದಾರೆ.
Advertisement
ಸುಳ್ಳು ಹೇಳುವ ಮಂತ್ರಿ ಸುರೇಶ್ ಕುಮಾರ್, ಬರಿ ಬೂರಿ ಬುಡ್ಕಂಡು ಇದ್ದಾರೆ. ನಾವು ಮೊಸಳೆ ಹೊಸಳ್ಳಿ ಶಾಲೆಯನ್ನು ದತ್ತು ಪಡೆಯುತ್ತೇನೆ. ಎಷ್ಟೇ ಖರ್ಚಾಗಲಿ, ಎಲ್ಲಾ ಮಕ್ಕಳಿಗೂ ಎರಡು ಜೊತೆ ಸಮವಸ್ತ್ರ, ಟ್ಯಾಬ್ ಕೊಡುತ್ತೇನೆ. ವಿದ್ಯೆ ದಾನವಾಗಿಲ್ಲ, ವಿದ್ಯೆ ಮಾರಾಟವಾಗಿದೆ ಎಂದು ಹೇಳಿದ್ದಾರೆ.
Advertisement
ನೊಂದು ಹೇಳುತ್ತಿದ್ದೇನೆ ಇಂದು ವಿದ್ಯಾ ಸಂಸ್ಥೆಗಳು ಮಾರಾಟ ಕೇಂದ್ರವಾಗಿವೆ. ಯಡಿಯೂರಪ್ಪ ಅವರಿಗೆ ಕಣ್ಣು ಕಾಣಲ್ಲ. ಪಾಪ ಅವರ ಪರಿಸ್ಥಿತಿಯೇ ಬೇರೆ ಇದೆ. ಎರಡು ವರ್ಷ ಇರುತ್ತೇನೋ, ಎರಡೂವರೆ ವರ್ಷ ಇರುತ್ತೇನೋ ಅಷ್ಟರೊಳಗೆ ದುಡ್ಡು ಮಾಡ್ಕಂಡು ಹೋಗೋಣ ಎಂಬ ಚಿಂತೆಯಲ್ಲಿ ಯಡಿಯೂರಪ್ಪ ಇದ್ದಾರೆ ಎಂದು ರೇವಣ್ಣ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಆಡಿಯೋ, ವೀಡಿಯೋ, ಫೋನ್ ಟ್ಯಾಪಿಂಗ್ ಕುಮಾರಸ್ವಾಮಿಗೆ ಅಭ್ಯಾಸ ಆಗಿದೆ: ಸುಮಲತಾ
Advertisement
Advertisement
ಭವಾನಿ ರೇವಣ್ಣ ಚುನಾವಣೆಗೆ ಸ್ಪರ್ಧಿಸುವ ವಿಚಾರವಾಗಿ ಮಾತನಾಡಿದ ಅವರು, ನಾನು ಚುನಾವಣೆಗೆ ಸ್ಪರ್ಧಿಸಲ್ಲ, ಬೇರೆಯವರಿಗೆ ಟಿಕೆಟ್ ಕೊಡಿ ಎಂದಿದ್ದಾರೆ ಭವಾನಿ ರೇವಣ್ಣ. ಪ್ರತಿ ತಾಲೂಕಿಗೆ ಹೋಗಿ ಕಾರ್ಯಕರ್ತರನ್ನು ಕೇಳುತ್ತೇನೆ. ಅವರು ಏನು ಹೇಳುತ್ತಾರೋ ಅವರಿಗೆ ಟಿಕೆಟ್ ಕೊಡುತ್ತೇವೆ. ಈ ಬಗ್ಗೆ ಪಕ್ಷದ ಮುಖಂಡರು ತೀರ್ಮಾನ ಮಾಡುತ್ತಾರೆ ಎಂದರು.